ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಉಪೇಂದ್ರ

ಉಪೇಂದ್ರ ಅಭಿನಯದ 'ಕಬ್ಜ' ಸಿನಿಮಾ ಬಿಡುಗಡೆಗೆ ಬಹುತೇಕ ತಯಾರಾಗಿದೆ. ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಕಬ್ಜ ಬಿಡುಗಡೆಗೆ ಮುನ್ನವೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಟ ಉಪೇಂದ್ರ ಯೆಸ್ ಅಂದಿದ್ದಾರೆ. ಕಬ್ಜ ಸಿನಿಮಾದ ನಂತರ ಆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ಬಹುಕೋಟಿ ವೆಚ್ಚದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಉಪೇಂದ್ರ ಮೂರು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕೆ ನಾಯಕಿ ಸಹ ಅಂತಿಮವಾಗಿದ್ದು, ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಇದಾಗಲಿದೆ. ಸಿನಿಮಾದ ಹೆಸರು ಸಹ ಅಂತಿಮವಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾಕ್ಕೆ 'ಲಗಾಮ್' ಎಂದು ಹೆಸರು

ಪ್ಯಾನ್ ಇಂಡಿಯಾ ಸಿನಿಮಾಕ್ಕೆ 'ಲಗಾಮ್' ಎಂದು ಹೆಸರು

ಉಪೇಂದ್ರ ಅಭಿನಯಿಸಲಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾಕ್ಕೆ 'ಲಗಾಮ್' ಎಂದು ಹೆಸರಿಡಲಾಗಿದೆ. ನಾಯಕ ಸಮಾಜದ ಭ್ರಷ್ಟಾಚಾರಕ್ಕೆ ಲಗಾಮು ಹಾಕುವ ಕತೆ ಹೊಂದಿರುವ ಕಾರಣ ಈ ಹೆಸರು ಇಡಲಾಗಿದೆಯಂತೆ.

ನೆಗೆಟಿವ್ ಶೇಡ್‌ನಲ್ಲಿ ಉಪೇಂದ್ರ ದರ್ಶನ

ನೆಗೆಟಿವ್ ಶೇಡ್‌ನಲ್ಲಿ ಉಪೇಂದ್ರ ದರ್ಶನ

ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಮೂರು ಭಿನ್ನ ಶೇಡ್‌ನಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ನಾಯಕಿ ಪಾತ್ರಕ್ಕೆ ಹರಿಪ್ರಿಯ ಆಯ್ಕೆ ಆಗಿದ್ದಾರೆ.

ಕೆ.ಮಾದೇಶ್ ನಿರ್ದೇಶನ

ಕೆ.ಮಾದೇಶ್ ನಿರ್ದೇಶನ

ಗಜ, ರಾಮ್, ಬೃಂದಾವನ ಸಿನಿಮಾಗಳ ನಿರ್ದೇಶಕ ಕೆ.ಮಾದೇಶ್ ಲಗಾಮ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾವು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಸಿನಿಮಾದ ಚಿತ್ರೀಕರಣ ಮೈಸೂರು, ಬೆಂಗಳೂರು ಹಾಗೂ ಸುತ್ತ-ಮುತ್ತ ನಡೆಯಲಿದೆಯಂತೆ.

Recommended Video

ಕೊರೊನ ಭಯ ಇಲ್ದೆ ಸಿಂಗಲ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡಬಹುದ..? | Filmibeat Kannada
ಸಾಧು ಕೋಕಿಲ ಪುತ್ರ ಸಂಗೀತ

ಸಾಧು ಕೋಕಿಲ ಪುತ್ರ ಸಂಗೀತ

ಲಗಾಮ್ ಸಿನಿಮಾವನ್ನು ಒಪ್ಪಿಸಲು ಕೆ.ಮಾದೇಶ್ ಬಹಳ ಕಷ್ಟಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಸಿನಿಮಾಕ್ಕೆ ಮುನಿರಾಜು ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಾಧುಕೋಕಿಲ ಪುತ್ರ ಸುರಾಗ್ ಸಾಧು ಸಂಗೀತ ನೀಡಲಿದ್ದಾರೆ. ಸಾಧುಕೋಕಿಲ ಸಹ ಜೊತೆ ನೀಡಲಿದ್ದಾರೆ.

More from Filmibeat

English summary
Actor Upendra to seen in another pan India movie called Lagam. Movie directing by K Madesh, Heroine Haripriya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X