ದುನಿಯಾ ವಿಜಯ್ 'ಸಲಗ' ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್

Recommended Video

Upendra to Support Duniya Vijay's Salaga | SALAGA | UPENDRA | VIJAY | CAHRAN | FILMIBEAT KANNADA

ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತಿದೆ. 'ಸೂರಿ ಅಣ್ಣಾ' ಹಾಡಿನ ಮೂಲಕ ಸದ್ದು ಮಾಡಿದ್ದ ಸಲಗ ಈಗ ಎರಡನೇ ಹಾಡು ಬಿಡುಗಡೆ ಮಾಡುತ್ತಿದೆ.

ಜನವರಿ 20 ರಂದು ದುನಿಯಾ ವಿಜಯ್ ಹುಟ್ಟುಹಬ್ಬವಿದೆ. ಈ ವಿಶೇಷ ಸಂದರ್ಭದಲ್ಲಿ ಸಲಗ ಸಿನಿಮಾದ ಎರಡನೇ ಲಿರಿಕಲ್ ಹಾಡು ರಿಲೀಸ್ ಮಾಡುತ್ತಿದೆ ಚಿತ್ರತಂಡ. ಜನವರಿ 19 ರಂದು ಮಧ್ಯರಾತ್ರಿ 12 ಗಂಟೆಗೆ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.

Upendra To Release Salaga Movie Second Song

ಅಂದ್ಹಾಗೆ, ಸಲಗ ಸಿನಿಮಾದ ಎರಡನೇ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಸಲಗ ಚಿತ್ರಕ್ಕೆ ರಿಯಲ್ ಪವರ್ ಸಿಕ್ಕಿದೆ. ಈಗಾಗಲೇ ಶಿವರಾಜ್ ಕುಮಾರ್ ಸಲಗ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಕೋರಿದ್ದರು. ಈಗ ಉಪೇಂದ್ರ ಅವರು ವಿಜಿ ಚಿತ್ರಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಸೂರಿ ಅಣ್ಣಾ ಹಾಡು ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಸಹಜವಾಗಿ ಸಲಗ ಆಲ್ಬಂ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.

ದುನಿಯಾ ವಿಜಯ್ ನಾಯಕರಾಗಿದ್ದು, ಡಾಲಿ ಖ್ಯಾತಿಯ ಧನಂಜಯ್ ಪೊಲೀಸ್ ಆಗಿ ನಟಿಸುತ್ತಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

More from Filmibeat

English summary
Kannada actor Real star Upendra to release duniya vijay's starrer salaga movie second song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X