twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಯ್ 'ಸಲಗ' ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್

    |

    Recommended Video

    Upendra to Support Duniya Vijay's Salaga | SALAGA | UPENDRA | VIJAY | CAHRAN | FILMIBEAT KANNADA

    ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತಿದೆ. 'ಸೂರಿ ಅಣ್ಣಾ' ಹಾಡಿನ ಮೂಲಕ ಸದ್ದು ಮಾಡಿದ್ದ ಸಲಗ ಈಗ ಎರಡನೇ ಹಾಡು ಬಿಡುಗಡೆ ಮಾಡುತ್ತಿದೆ.

    ಜನವರಿ 20 ರಂದು ದುನಿಯಾ ವಿಜಯ್ ಹುಟ್ಟುಹಬ್ಬವಿದೆ. ಈ ವಿಶೇಷ ಸಂದರ್ಭದಲ್ಲಿ ಸಲಗ ಸಿನಿಮಾದ ಎರಡನೇ ಲಿರಿಕಲ್ ಹಾಡು ರಿಲೀಸ್ ಮಾಡುತ್ತಿದೆ ಚಿತ್ರತಂಡ. ಜನವರಿ 19 ರಂದು ಮಧ್ಯರಾತ್ರಿ 12 ಗಂಟೆಗೆ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.

    'ಸೂರಿ ಅಣ್ಣ' ಸಾಂಗ್ ರಿಲೀಸ್: ಎಲ್ಲೆಲ್ಲೂ ಟ್ರೆಂಡಿಂಗ್ 'ಸಲಗ' ಹಾಡು'ಸೂರಿ ಅಣ್ಣ' ಸಾಂಗ್ ರಿಲೀಸ್: ಎಲ್ಲೆಲ್ಲೂ ಟ್ರೆಂಡಿಂಗ್ 'ಸಲಗ' ಹಾಡು

    Upendra To Release Salaga Movie Second Song

    ಅಂದ್ಹಾಗೆ, ಸಲಗ ಸಿನಿಮಾದ ಎರಡನೇ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಸಲಗ ಚಿತ್ರಕ್ಕೆ ರಿಯಲ್ ಪವರ್ ಸಿಕ್ಕಿದೆ. ಈಗಾಗಲೇ ಶಿವರಾಜ್ ಕುಮಾರ್ ಸಲಗ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಕೋರಿದ್ದರು. ಈಗ ಉಪೇಂದ್ರ ಅವರು ವಿಜಿ ಚಿತ್ರಕ್ಕೆ ಶಕ್ತಿ ತುಂಬುತ್ತಿದ್ದಾರೆ.

    'ಸಲಗ'ದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್'ಸಲಗ'ದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

    ಸೂರಿ ಅಣ್ಣಾ ಹಾಡು ಯೂಟ್ಯೂಬ್ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಸಹಜವಾಗಿ ಸಲಗ ಆಲ್ಬಂ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.

    ದುನಿಯಾ ವಿಜಯ್ ನಾಯಕರಾಗಿದ್ದು, ಡಾಲಿ ಖ್ಯಾತಿಯ ಧನಂಜಯ್ ಪೊಲೀಸ್ ಆಗಿ ನಟಿಸುತ್ತಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

    English summary
    Kannada actor Real star Upendra to release duniya vijay's starrer salaga movie second song.
    Saturday, January 18, 2020, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X