ನಟ ಯಶ್ ಬಗ್ಗೆ ಉಪೇಂದ್ರ ಮಾಡಿದ ಟ್ವೀಟ್ ಇದು
ನಟ ಯಶ್ ಈಗ 'ಕೆಜಿಎಫ್' ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ಎರಡು ವರ್ಷವನ್ನು ಈ ಸಿನಿಮಾಗಾಗಿ ಮೀಸಲಿಟ್ಟಿದ್ದಾರೆ. ಯಶ್ ಡೆಡಿಕೇಷನ್ ಕುರಿತು ಈಗ ಉಪೇಂದ್ರ ಒಂದು ಟ್ವೀಟ್ ಮಾಡಿದ್ದಾರೆ .
"ಕನ್ನಡ ಚಿತ್ರರಂಗದ ಮೊಸ್ಟ್ ವಾಂಟೆಡ್ ನಟ ಯಶ್. ಅವರು 'ಕೆಜಿಎಫ್' ಸಿನಿಮಾಗಾಗಿ ಎರಡು ವರ್ಷ ಮೀಸಲಿಟ್ಟಿದ್ದಾರೆ. ಒಂದು ಸಿನಿಮಾಗಾಗಿ ಹೀಗೆ ಮಾಡುವುದು ನಂಬಲು ಅಸಾಧ್ಯವಾದ ವಿಷಯ. ಯಶ್ ಡೆಡಿಕೇಷನ್ ಗ್ರೇಟ್. ನಿಮ್ಮಿಂದ ತುಂಬ ಕಲಿಯುವುದು ಇದೆ." ಎಂದು ಉಪ್ಪಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಯಶ್ ತಾವು ಚಿತ್ರರಂಗಕ್ಕೆ ಬರಲು ಉಪೇಂದ್ರ ಅವರ ಸಿನಿಮಾಗಳು ಪ್ರಾಭಾವ ಬೀರಿದವು, ನಾನು ಉಪೇಂದ್ರ ಅವರ ಅಭಿಮಾನಿ ಎಂದು ಹೇಳಿದ್ದರು. ಅದೇ ರೀತಿ ಈಗ ಉಪ್ಪಿ ಸಹ ಯಶ್ ಶ್ರಮವನ್ನು ಮೆಚ್ಚಿದ್ದಾರೆ.

ಅಂದಹಾಗೆ, 'ಕೆಜಿಎಫ್' ಯಶ್ ನಟನೆಯ ಮಹತ್ವಾಕಾಂಕ್ಷೆಯ ಸಿನಿಮಾವಾಗಿದೆ. 'ಕೆ.ಜಿ.ಎಫ್' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಈ ವರ್ಷ ತೆರೆಗೆ ಬರಲಿದೆ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ.


Click it and Unblock the Notifications











