For Quick Alerts
  ALLOW NOTIFICATIONS  
  For Daily Alerts

  ಪ್ರಜಾಕೀಯ ಅಭ್ಯರ್ಥಿಗೆ ಜಯ: ಹಳ್ಳಿಗೆ ಭೇಟಿ ನೀಡಿ ನೀವೇ ನಮಗೆಲ್ಲ ಸ್ಫೂರ್ತಿ ಎಂದ ಉಪೇಂದ್ರ

  |

  ನಟ ಮತ್ತು ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಇಂದು ಹಳ್ಳಿಗೆ ತೆರಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸಿದ ಪ್ರಜಾಕೀಯ ವ್ಯಕ್ತಿಗೆ ಅಭಿನಂದನೆ ಸಲ್ಲಿಸಿದರು. ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಪ್ರಜಾಕೀಯ ಬೆಂಬಲಿಗ ಚೇತನ್ ಕುಮಾರ್ ನಾಯ್ಕ್ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ತಮ್ಮ ಪಕ್ಷದ ವ್ಯಕ್ತಿ ಗೆದ್ದಿರುವ ಖುಷಿಗೆ ಗ್ರಾಮದ ಜನರಿಗೆ ಧನ್ಯವಾದ ತಿಳಿಸಲು ಉಪೇಂದ್ರ ಇಂದು ಅರೇಹಳ್ಳಿಗೆ ಭೇಟಿ ನೀಡಿದ್ದರು.

  ರಿಯಲ್ ಸ್ಟಾರ್ ಉಪೇಂದ್ರ ಅರೇಹಳ್ಳಿಗೆ ಎಂಟ್ರಿ ಕೊಡುತ್ತಿದ್ದಂತೆ ಉಪೇಂದ್ರ ನೋಡಲು ಜನ ಮುಗಿಬಿದ್ದಿದ್ದರು. ಬಳಿಕ ರಿಯಲ್ ಸ್ಟಾರ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿ ಊರಿಗೆ ಬರಮಾಡಿಕೊಂಡರು. ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ, ಪ್ರಜಾಕೀಯ ಪಕ್ಷವನ್ನು ಗೆಲ್ಲಿಸಿ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದೀರಿ ಎಂದಿದ್ದಾರೆ.

  ಈ ಕಡೆ ಆರ್ ಚಂದ್ರು, ಆ ಕಡೆ ಪ್ರೇಮ್ಸ್: ಬಹುಮುಖ್ಯ ಘೋಷಣೆ ಅಂತಿದ್ದಾರೆ, ಏನಿರಬಹುದು?

  ಇನ್ನೂ ಇದೇ ಸಮಯದಲ್ಲಿ ತಂತ್ರಜ್ಞಾನದ ಬಗ್ಗೆಯೂ ಮಾತನಾಡಿ, ಆಧುಕಿನಕ ತಂತ್ರಜ್ಞಾನದ ಬಗ್ಗೆ ಹಳ್ಳಿ ಜನರಲ್ಲಿ ಅರಿವು ಮೂಡಿಸಿದ್ದಾರೆ. '10 ಲಕ್ಷ ನಿಮ್ಮ ಹಳ್ಳಿಗೆ ಬಂದ್ರೆ, ಶಾಲೆ ಬೇಕಾ, ರಸ್ತೆ ಬೇಕಾ, ನೀರಿನ ಸೌಲಭ್ಯ ಬೇಕಾ, ಆಸ್ಪತ್ರೆ ಬೇಕಾ ಎಂದು ನೀವು ಮೊಬೈಲ್ ಮೂಲಕ ಕ್ಲಿಕ್ ಮಾಡಿ ಅಭಿಪ್ರಾಯ ತಿಳಿಸಬಹುದು. ನಿಮ್ಮಗೆ ಏನು ಬೇಕು ಎನ್ನುವುದನ್ನು ಕೂತಲ್ಲೇ ಹೇಳಬಹುದು, ಅದನ್ನೇ ಮಾಡುತ್ತಾರೆ' ಎಂದಿದ್ದಾರೆ.

  'ಪ್ರಜಾಕೀಯಾ ಪ್ರಾರಂಭ ಮಾಡಿದಾಗ, ರಾಜಕೀಯದ ಮುಂದೆ ಪ್ರಜಾಕೀಯ ವರ್ಕೌಟ್ ಆಗಿಲ್ಲ ಅಂತ ಹೇಳುತ್ತಿದ್ದರು. ಹಳ್ಳಿಗೆಲ್ಲ ರೀಚ್ ಆಗಲ್ಲ ಎನ್ನುತ್ತಿದ್ದರು. ಆದರೆ ಇವತ್ತು ನೋಡಿ ಎಷ್ಟು ಜನ ಬಂದಿದ್ದಾರೆ' ಎಂದು ಉಪೇಂದ್ರ ಹೇಳಿದ್ದಾರೆ.

  ಇನ್ನು ಹಳ್ಳಿಯ ಯುವಕರು ತಂತ್ರಜ್ಞಾನದ ಬಗ್ಗೆ ಹೊಂದಿರುವ ಜ್ಞಾನವನ್ನು ನೋಡಿ ಸಂತಸ ಪಟ್ಟರು. ಅಧುನಿಕ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಅಂದ್ರೆ ನಮ್ಮ ದೇಶ ಎಷ್ಟು ಉಜ್ವಲ ಆಗಿದೆ ಅಲ್ವಾ ಎಂದು ಉಪೇಂದ್ರ ಹೇಳಿದ್ದಾರೆ.

  Upendra ಅಭಿಮಾನಿಗಳಿಗೆ ಯೋಚನೆ ಮಾಡಬೇಡಿ ಎಂದ ನಿರ್ದೇಶಕ Shashank | Filmibeat Kannada

  ಇನ್ನು ಗೆದ್ದ ವ್ಯಕ್ತಿಯ ಬಗ್ಗೆ ಮಾತನಾಡಿ, ಕೆಲಸಗಾರ ಎಂದು ಹೇಳಿಕೊಂಡು ಬಂದಿರುವುದು ಖುಷಿಯಾಗಿದೆ. ಪ್ರಜಾಕೀಯ ತತ್ವ ಇಟ್ಟುಕೊಂಡು ಬಂದಿದ್ದಾರೆ. ಕೊನೆಯವರೆಗೂ ಉಳಿಸಿಕೊಳ್ಳಿ. ಇಡೀ ಕರ್ನಾಟಕದಲ್ಲಿ ನೀವು ನಮಗೆಲ್ಲ ಸ್ಫೂರ್ತಿ ತಂದಿರಿ ಎಂದಿದ್ದಾರೆ. ಕೊನೆಯಲ್ಲಿ ಉಪೇಂದ್ರ ಅವರ ಫೇಮಸ್ ಡೈಲಾಗ್ 'ಐ ಲೈಕ್ ಇಟ್, ಐ ಲೈಕ್ ಇಟ್..' ಡೈಲಾಗ್ ಹೇಳಿ ಗ್ರಾಮಸ್ಥರನ್ನು ರಂಜಿಸಿದ್ದಾರೆ.

  English summary
  Real star Upendra visits arehalli for congratulate winning candidate of Prajakeeya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X