ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ಉಪೇಂದ್ರ

Recommended Video

ರಿಯಲ್ ಸ್ಟಾರ್ ಅಬಿಮಾನಿಗಳಿಗೆ ಮಾಡಿದ ಮನವಿ ಏನು ? | FILMIBEAT KANNADA

ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಸಂಪ್ರದಾಯದಂತೆ ಅಭಿಮಾನಿಗಳು ಉಪ್ಪಿ ಮನೆ ಬಳಿ ಬಂದು, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಈ ಸಂಪ್ರದಾಯಕ್ಕೆ ಉಪೇಂದ್ರ ಬ್ರೇಕ್ ಹಾಕಿದ್ದಾರೆ.

ಹುಟ್ಟುಹಬ್ಬ ಆಚರಣೆಯಲ್ಲಿ ಆಡಂಬರ, ಅದ್ಧೂರಿತನಕ್ಕಿಂತ ಉತ್ತಮ ಸಂದೇಶ ಮುಖ್ಯ ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

''ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ... ಸೆಪ್ಟೆಂಬರ್ 18 "ಅಭಿಮಾನಿಗಳ ದಿನ", ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ... -ನಿಮ್ಮ ಉಪೇಂದ್ರ'' ಎಂದು ಟ್ವೀಟ್ ಮಾಡಿದ್ದಾರೆ.

Upendra Want to Celebrate His Birthday With Fans

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ನಟರು ತಮ್ಮ ಹುಟ್ಟುಹಬ್ಬ ಆಚರಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಜನುಮದಿನದ ನೆಪದಲ್ಲಿ ಖರ್ಚು ಮಾಡುವ ಹಣದಲ್ಲಿ ಬಡಮಕ್ಕಳಿಗೆ, ಅನಾಥಾಶ್ರಮಗಳಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳನ್ನ ಕೇಳಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟರ ಮಾತಿಗೆ ಗೌರವ ನೀಡಿ ಅವರ ಹುಟ್ಟುಹಬ್ಬದಂದು ಸಮಾಜಮುಖಿ ಕೆಲಸಗಳನ್ನ ಮಾಡುತ್ತಿದ್ದಾರೆ. ಇದೇ ಮಾರ್ಗವನ್ನ ರಿಯಲ್ ಸ್ಟಾರ್ ಕೂಡ ಅನುಸರಿಸಿದ್ದಾರೆ.

Upendra Want to Celebrate His Birthday With Fans

ಐ ಲವ್ ಯೂ ಸಿನಿಮಾ ಮುಗಿಸಿದ್ದ ಉಪೇಂದ್ರ ನಿರ್ದೇಶಕ ಆರ್‍ ಚಂದ್ರು ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಕಬ್ಜ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಏಳು ಭಾಷೆಯಲ್ಲಿ ಈ ಸಿನಿಮಾ ಬರಲಿದೆಯಂತೆ. ಕಬ್ಜ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರೆಟ್ರೋ ಸ್ಟೈಲ್ ನಲ್ಲಿ ಉಪ್ಪಿ ಮಿಂಚಿದ್ದಾರೆ.

More from Filmibeat

English summary
Real Star Upendra Has Decided to celebrate His birthday with fans on september 18th 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X