ವೆಬ್ ಸೀರಿಸ್ ಪ್ರಪಂಚಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ಉಪೇಂದ್ರ
Recommended Video

ವೆಬ್ ಸೀರಿಸ್ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಎಲ್ಲ ಭಾಷೆಗಳಲ್ಲೂ ವೆಬ್ ಸೀರಿಸ್ ಆರಂಭವಾಗುತ್ತಿದೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ಜಾಸ್ತಿಯಾಗುತ್ತಿದೆ.
ಇತ್ತೀಚಿಗಷ್ಟೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳ ನಿರ್ಮಾಣದಲ್ಲಿ 'ಹೆಟ್ ಯೂ ರೋಮಿಯೋ' ಎಂಬ ವೆಬ್ ಸೀರಿಸ್ ಆರಂಭಿಸಿದ್ದಾರೆ. ಈ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಬಿಗ್ ಸ್ಕ್ರೀನ್ ನಲ್ಲಿ ಸೂಪರ್ ಆಗಿರುವ ಉಪ್ಪಿ ಈಗ ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ವೆಬ್ ಸೀರಿಸ್ ತಂಡಕ್ಕೆ ಜೊತೆಯಾಗುತ್ತಿದ್ದಾರೆ.

ವಿನಾಯಕ್ ಜೋಶಿ 'ಜೋಶಿಲೆ' ಎಂಬ ವೆಬ್ ಸೀರಿಸ್ ಮಾಡ್ತಿರುವುದು ಹಲವು ದಿನಗಳ ಹಿಂದೆಯೇ ಸುದ್ದಿಯಾಗಿತ್ತು. ಈ ತಂಡಕ್ಕೀಗ ಸ್ಟಾರ್ ನಟ ಉಪ್ಪಿ ಸಾಥ್ ಕೊಡ್ತಿದ್ದಾರೆ. ಆದ್ರೆ, ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಈಗಾಗಲೇ ಟೀಸರ್ ರಿಲೀಸ್ ಗಮನ ಸೆಳೆದಿದ್ದ 'ಜೋಶಿಲೆ' ಇದೇ ತಿಂಗಳಲ್ಲಿ ಪ್ರೀಮಿಯರ್ ಶೋ ಕೂಡ ಮಾಡಲಿದ್ದಾರಂತೆ. ಅಲ್ಲಿ ಉಪ್ಪಿಯ ಪಾತ್ರ ಯಾವುದು ಮತ್ತು ಯಾವಾಗ ನೋಡಬಹುದು ಎಂಬ ವಿಷ್ಯಗಳನ್ನ ಬಹಿರಂಗಪಡಿಸಲಿದ್ದಾರಂತೆ.


Click it and Unblock the Notifications











