»   » ಇಂದು ಘೋಷಣೆ ಆಗಲಿದೆ ಉಪೇಂದ್ರ ಹೊಸ ಪಕ್ಷದ ಹೆಸರು, ಚಿಹ್ನೆ, ಪ್ರಣಾಳಿಕೆ

ಇಂದು ಘೋಷಣೆ ಆಗಲಿದೆ ಉಪೇಂದ್ರ ಹೊಸ ಪಕ್ಷದ ಹೆಸರು, ಚಿಹ್ನೆ, ಪ್ರಣಾಳಿಕೆ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರನ್ನು ಇಂದು ಘೋಷಣೆ ಮಾಡಲಿದ್ದಾರೆ. ಉಪ್ಪಿ ಪಕ್ಷಕ್ಕೆ ಮೊದಲು 'ಪ್ರಜಾಕೀಯ' ಬಳಿಕ 'ಉತ್ತಮ ಪ್ರಜಾ ಪಾರ್ಟಿ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತಾದರೂ ಅಂತಿಮವಾಗಿ ಇಂದು ತಮ್ಮ ಪಕ್ಷದ ಹೆಸರನ್ನು ಉಪೇಂದ್ರ ಬಹಿರಂಗ ಪಡಿಸಲಿದ್ದಾರೆ.

ಆಗಸ್ಟ್ 14 ರಂದು ಅಂದರೆ ಸ್ವಾತಂತ್ರ್ಯ ದಿನದ ಒಂದು ದಿನ ಮುಂಚಿತವಾಗಿ ಉಪೇಂದ್ರ ತಮ್ಮ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಅದೇ ರೀತಿ ಇಂದು (ಅಕ್ಟೋಬರ್ 31) ಅಂದರೆ ಕನ್ನಡ ರಾಜ್ಯೋತ್ಸವದ ಒಂದು ದಿನ ಮುಂಚಿತವಾಗಿ ತಮ್ಮ ಪಕ್ಷದ ಹೆಸರು, ಚಿಹ್ನೆ, ಪ್ರಣಾಳಿಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿಸಲಿದ್ದಾರೆ.

Upendra will be announce his party name today

ಮೂಲಗಳ ಪ್ರಕಾರ ಉಪೇಂದ್ರ ಹೊಸ ಪಕ್ಷದ ಹೆಸರು 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'(KPJP) ಎಂದು ಹೇಳಲಾಗಿದೆ. ಆದರೆ ಈ ಹೆಸರು ಹೌದೋ .. ಅಲ್ಲವೋ.. ಎಂಬುದು ಉಪೇಂದ್ರ ಘೋಷಣೆ ಮಾಡಿದ ನಂತರ ಅಧಿಕೃತವಾಗಲಿದೆ. ಅಂದಹಾಗೆ, ಇಂದು ಬೆಳ್ಳಗೆ 11 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಉಪೇಂದ್ರ ತಮ್ಮ ಪಕ್ಷದ ಬಗ್ಗೆ ವಿವರಿಸಲಿದ್ದಾರೆ.

English summary
Real Star Upendra will announce his party name today(October 31st).ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ಪಕ್ಷದ ಹೆಸರನ್ನು ಇಂದು ಘೋಷಣೆ ಮಾಡಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X