ರಾಜಕೀಯ ಬ್ರೇಕ್ ಆರು ಜನರಿಗೆ ಸಿಕ್ತು ಉಪ್ಪಿ ಕಾಲ್ ಶೀಟ್

By Pavithra

Recommended Video

ರಾಜಕೀಯದಿಂದ ದೂರ ಉಳಿದ ಉಪ್ಪಿಗೆ ಸಿಕ್ತು ದೊಡ್ಡ ಲಕ್ | Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಸದ್ಯ ರಾಜಕೀಯದಿಂದ ಸಣ್ಣದೊಂದು ಬ್ರೇಕ್ ಪಡೆದುಕೊಂಡಿದ್ದಾರೆ. ಈ ಹಿಂದೆ ಮಾಡಿಕೊಂಡಿದ್ದ ಸಿನಿಮಾ ಕಮಿಂಟ್ ಮೆಂಟ್ ಗಳನ್ನ ಮುಗಿಸಿ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಸಿನಿಮಾ ನನ್ನ ವೃತ್ತಿ, ಪ್ರಜಾಕೀಯ ನನ್ನ ಗುರಿ ಎಂದು ಹೇಳಿರುವ ರಿಯಲ್ ಸ್ಟಾರ್ ಸಣ್ಣ ಬ್ರೇಕ್ ಪಡೆದಿದ್ದಾರೆ ಎನ್ನುವುದು ಗೊತ್ತಾದ ಕೂಡಲೇ ಸಿನಿಮಾರಂಗದವರು ಥಟ್ ಅಂತ ಉಪ್ಪಿಯ ಕಾಲ್ ಶೀಟ್ ಪಡೆದುಕೊಂಡು ಬಿಟ್ಟಿದ್ದಾರೆ.

ಸಣ್ಣ ಗ್ಯಾಪ್ ನಲ್ಲೇ ಉಪ್ಪಿಯ ಡೇಟ್ಸ್ ಆರು ಜನರಿಗೆ ಸಿಕ್ಕಿದೆ. ಈ ಮೂಲಕ ರಿಯಲ್ ಸ್ಟಾರ್ ರಾಜಕೀಯದಲ್ಲಿರುವಷ್ಟೇ ಬೇಡಿಕೆ ಸಿನಿಮಾರಂಗದಲ್ಲಿಯೂ ಇದೆ ಎನ್ನುವುದು ಗೊತ್ತಾಗುತ್ತಿದೆ. ಹಾಗಾದರೆ ರಿಯಲ್ ಸ್ಟಾರ್ ಸಿನಿಮಾ ಡೇಟ್ಸ್ ಯಾರ ಯಾರ ಬಳಿ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಆರ್ ಚಂದ್ರು ಸಿನಿಮಾ ಜೊತೆ ಹೊಸ ಚಿತ್ರ

ಆರ್ ಚಂದ್ರು ಸಿನಿಮಾ ಜೊತೆ ಹೊಸ ಚಿತ್ರ

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಉಪೇಂದ್ರ ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ 'ಐ ಲವ್ ಯೂ' ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಅದರ ಜೊತೆಯಲ್ಲಿ ಹೊಸ ನಿರ್ದೇಶಕ ಸಂತು ಡೈರೆಕ್ಟ್ ಮಾಡಲಿರುವ 'ಅಧೀರ' ಎನ್ನುವ ಸಿನಿಮಾದಲ್ಲಿ ಆಕ್ಟ್ ಮಾಡುತ್ತಾರಂತೆ.

ಡಾ ಮೋದಿಯಾಗಿ ರಿಯಲ್ ಸ್ಟಾರ್

ಡಾ ಮೋದಿಯಾಗಿ ರಿಯಲ್ ಸ್ಟಾರ್

ಈಗಾಗಲೇ ಅನೌನ್ಸ್ ಆಗಿರುವಂತೆ ಉದಯ್ ಪ್ರಕಾಶ್ ನಿರ್ದೇಶನದ ಡಾ ಮೋದಿ ಸಿನಿಮಾದಲ್ಲಿ ಉಪ್ಪಿ ಆಕ್ಟ್ ಮಾಡಲಿದ್ದಾರೆ. ಇನ್ನು ನಿರ್ಮಾಪಕ ಕೆ ಮಂಜು ಅವರ ಬಳಿಯೂ ಉಪ್ಪಿ ಕಾಲ್ ಶೀಟ್ ಇದೆ.

ಮಗನಿಗೊಂದು ಸಿನಿಮಾ ಮಾಡಲಿರುವ ಉಪ್ಪಿ

ಮಗನಿಗೊಂದು ಸಿನಿಮಾ ಮಾಡಲಿರುವ ಉಪ್ಪಿ

ಮೈಸೂರು ಮೂಲದ ನಿರ್ಮಾಪಕರ ಬಳಿಯೂ ಉಪ್ಪಿಯ ಸಿನಿಮಾ ಡೇಟ್ಸ್ ಇದೆಯಂತೆ ಅದರ ಜೊತೆಯಲ್ಲಿ ಉಪ್ಪಿ ಅಣ್ಣನ ಮಗ ನಿರಂಜನ್ ಅವರಿಗೊಂದು ಚಿತ್ರ ಮಾಡುವ ಉದ್ದೇಶವೂ ಉಪ್ಪಿ ಇಟ್ಟುಕೊಂಡಿದ್ದಾರೆ.

ಉಪ್ಪಿ ನಿರ್ದೇಶನದ ಸಿನಿಮಾ

ಉಪ್ಪಿ ನಿರ್ದೇಶನದ ಸಿನಿಮಾ

ಈ ಎಲ್ಲಾ ಸಿನಿಮಾಗಳ ಮಧ್ಯೆ ಉಪ್ಪಿ ನಿರ್ದೇಶನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಹಿಂದೆಯೇ ಚಿತ್ರ ಕಥೆ ಬರೆಯಲು ಶುರು ಮಾಡಿದ್ದರು ಆದರೆ ಆ ಚಿತ್ರ ಯಾವಾಗ ಸೆಟ್ಟೇರಲಿದೆ ಎನ್ನುವುದು ಇನ್ನು ಗುಟ್ಟಾಗಿಯೇ ಇದೆ.

More from Filmibeat

English summary
Kannada actor Upendra will be playing the lead role in six films. uppi now busy with his movies.Upendra is currently busy shooting for R Chandru's I Love You movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X