twitter
    For Quick Alerts
    ALLOW NOTIFICATIONS  
    For Daily Alerts

    'ನಾನು ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು': ಫ್ಯಾನ್ಸ್‌ಗೆ ನಿರಾಸೆ ತಂದ ಉಪ್ಪಿ ನಿರ್ಧಾರ

    |

    ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರ ಪರವಾಗಿ ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಕೆಲಸ ಮಾಡ್ತಿದ್ದಾರೆ. ಉಪ್ಪಿ ಫೌಂಡೇಶನ್ ಮೂಲಕ ದೇಣಿಗೆ ಸಂಗ್ರಹಿಸಿ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಸಿನಿಮಾ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗಕ್ಕೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.

    Recommended Video

    Upendra ರಾಜಕೀಯ ಉದ್ದೇಶದ ಬಗ್ಗೆ ಅಭಿಮಾನಿಗಳಲ್ಲಿ ನಿರಾಸೆ | Filmibeat Kannada

    ರೈತರಿಂದ ನೇರವಾಗಿ ಬೆಳೆ ಖರೀದಿಸುವ ಮೂಲಕ ರೈತರು ಸಹಕಾರಿಯಾಗಿದ್ದಾರೆ. ಉಪೇಂದ್ರರ ಈ ಎಲ್ಲಾ ಯೋಜನೆಗಳು ಭಾರಿ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳ ಆಡಳಿತದ ಬಗ್ಗೆ ಅಸಹ್ಯ ವ್ಯಕ್ತಪಡಿಸುತ್ತಿರುವ ಜನಸಾಮಾನ್ಯರು ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮಾದರಿ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಸಿಗಬೇಕು ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಈ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಉಪೇಂದ್ರ ಮುಖ್ಯಮಂತ್ರಿ ಆಗುವುದು ಉತ್ತಮ ಎಂಬ ಚರ್ಚೆ ಹುಟ್ಟಿಕೊಂಡಿದೆ. ಈ ಬಗ್ಗೆ ಉಪೇಂದ್ರ ಪ್ರತಿಕ್ರಿಯಿಸಿದ್ದು, ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಮುಂದೆ ಓದಿ...

    ನಾನು ಎಲೆಕ್ಷನ್ ನಿಲ್ಲಲ್ಲ

    ನಾನು ಎಲೆಕ್ಷನ್ ನಿಲ್ಲಲ್ಲ

    ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲಿ ಎಂದು ಆಸೆ ಪಡುತ್ತಿದ್ದವರಿಗೆ ಉಪ್ಪಿ ನಿರಾಸೆ ಮೂಡಿಸಿದ್ದಾರೆ. ''ನಾನು ಎಲೆಕ್ಷನ್ ನಿಲ್ಲಲ್ಲ'' ಎಂದು ಹೇಳುವ ಮೂಲಕ ಸಿಎಂ ಸ್ಥಾನದ ಸ್ಪರ್ಧೆಯಲ್ಲಿ ನಾನಿಲ್ಲ ಎಂದಿದ್ದಾರೆ.

    'ಪ್ರಜಾಕೀಯ'ದ ಮೂಲ ಉದ್ದೇಶ ಬಿಚ್ಚಿಟ್ಟ ಉಪೇಂದ್ರ'ಪ್ರಜಾಕೀಯ'ದ ಮೂಲ ಉದ್ದೇಶ ಬಿಚ್ಚಿಟ್ಟ ಉಪೇಂದ್ರ

    ನಾನು ಕಾಮನ್ ಮ್ಯಾನ್ ಆಗಿ ಇರುತ್ತೇನೆ

    ನಾನು ಕಾಮನ್ ಮ್ಯಾನ್ ಆಗಿ ಇರುತ್ತೇನೆ

    ''ನಾನು ನಿಮ್ಮ ಜೊತೆ ಯಾವಾಗಲೂ ಇರೋ Permanent CM (ಕಾಮನ್ ಮ್ಯಾನ್) ಜನ ಸಾಮಾನ್ಯ....? ಇಲ್ಲ ಇಲ್ಲ...ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ'' ಎಂದು ತಮ್ಮದೇ ಶೈಲಿಯಲ್ಲಿ ಘೋಷಿಸಿಕೊಂಡಿದ್ದಾರೆ.

    ಪ್ರಜಾಕೀಯ ಪಕ್ಷ ಏಕೆ ಬೇಕು?

    ಪ್ರಜಾಕೀಯ ಪಕ್ಷ ಏಕೆ ಬೇಕು?

    ''ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ, ಬರೀ ಪ್ರಜಾಕೀಯ ವಿಚಾರ ತಿಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ. ಪ್ರಜಾಕೀಯದ ತತ್ವದಂತೆ ಕಾರ್ಯವೈಖರಿ ಮಾಡಿಲ್ಲ, ನಿಮಗೆ ಅವರ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ ಅಧಿಕಾರದ ಆಸೆಗೆ ಬೇರ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ ರಾಜೀನಾಮೆ ಕೊಡೋತರ ಮಾಡ್ತೀನಿ'' ಎಂದು ಉಪೇಂದ್ರ ಭರವಸೆ ಕೊಟ್ಟಿದ್ದಾರೆ.

    ಬೇರೆಯವರ ಜೊತೆ ನನ್ನನ್ನು ಹೋಲಿಸಬೇಡಿ: ಉಪೇಂದ್ರ ಬಹಿರಂಗ ಪತ್ರಬೇರೆಯವರ ಜೊತೆ ನನ್ನನ್ನು ಹೋಲಿಸಬೇಡಿ: ಉಪೇಂದ್ರ ಬಹಿರಂಗ ಪತ್ರ

    ಉಪ್ಪಿ ಪ್ರಜಾಕೀಯಕ್ಕೆ ನಿಮ್ಮ ಬೆಂಬಲ ಇದೆಯಾ?

    ಉಪ್ಪಿ ಪ್ರಜಾಕೀಯಕ್ಕೆ ನಿಮ್ಮ ಬೆಂಬಲ ಇದೆಯಾ?

    ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ರಾಜಕೀಯ ಎನ್ನುವುದು ಬಿಸಿನೆಸ್ ಆಗಿದೆ, ಈ ರಾಜಕೀಯದಿಂದ ಹಣವನ್ನು ಕಿತ್ತು ಹಾಕಬೇಕು, ಹಾಗಾಗಿ ಪ್ರಜಾಕೀಯದ ಅವಶ್ಯಕತೆ ಇದೆ. ಆದರೆ, ನಾನು ಸಿಎಂ ಆಗಲ್ಲ ಎಂದು ಹೇಳುವ ಉಪೇಂದ್ರ ನಿರ್ಧಾರಕ್ಕೆ ನಿಮ್ಮ ಬೆಂಬಲ ಇದೆಯೇ? ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ..

    English summary
    Prajakiya Founder Upendra will not contest for Chief Minister post In Future Elections.
    Sunday, May 23, 2021, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X