ಸಾಧು ಹುಟ್ಟುಹಬ್ಬಕ್ಕೆ ಉಪೇಂದ್ರ ಶುಭಾಶಯ
ಇಂದು ಕನ್ನಡದ ಖ್ಯಾತ ಹಾಸ್ಯ ನಟ ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.
ನಟ ಉಪೇಂದ್ರ ಸಹ ತಮ್ಮ ಪ್ರೀತಿಯ ಸಾಧುಗೆ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಹಾರೈಸಿದ್ದಾರೆ. ಫೇಸ್ ಬುಕ್ ನಲ್ಲಿ ಸಾಧು ಕೋಕಿಲ ಫೋಟೊ ಹಾಕುವ ಮೂಲಕ ವಿಶ್ ಮಾಡಿದ್ದಾರೆ.
''ಕನ್ನಡ ಚಿತ್ರರಂಗದ ಹಾಸ್ಯ ರತ್ನ, ಸಕಲಕಲಾವಲ್ಲಭ, ನಟ, ನಿರ್ದೇಶಕ & ಸಂಗೀತ ನಿರ್ದೇಶಕ ಸಾಧು ಕೋಕಿಲಾ ರವರಿಗೆ ಜನ್ಮ ದಿನದ ಹಾರ್ಧಿಕ ಶುಭಾಷಯಗಳು.'' ಎಂದು ಉಪ್ಪಿ ಬರೆದುಕೊಂಡಿದ್ದಾರೆ.

ಸಾಧು ಕೋಕಿಲ ಅವರ ನಟನೆ ಹಾಗೂ ಸಂಗೀತದ ಜರ್ನಿ ಶುರು ಆಗಿದ್ದು ಉಪೇಂದ್ರ ಗರಡಿಯಲ್ಲಿ. 'ಶ್' ಸಿನಿಮಾಗೆ ಮ್ಯೂಸಿಕ್ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದ ಸಾಧು ಕೋಕಿಲ ತಮ್ಮ ನಟನೆಯನ್ನೂ ಅಲ್ಲಿಯೇ ಶುರು ಮಾಡಿದ್ದರು.
ಅಲ್ಲದೆ ಉಪೇಂದ್ರ ಅವರಿಗೆ 'ಅನಾಥರು', 'ರಕ್ತಕಣ್ಣೀರು' ಹಾಗೂ 'ಸೂಪರ್ ರಂಗ' ಚಿತ್ರಗಳನ್ನ ಸಾಧು ಕೋಕಿಲ ನಿರ್ದೇಶನ ಮಾಡಿದ್ದಾರೆ.
ಅಂದಹಾಗೆ, 'ಶ್' ಸಿನಿಮಾದಿಂದ ಶುರುವಾದ ಸಾಧು ಸಿನಿ ಯಾನ ಇಂದಿಗೂ ಮುಂದುವರೆದಿದೆ.


Click it and Unblock the Notifications











