»   » ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‌ ನಿಧನ

ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‌ ನಿಧನ

Posted By: Staff
Subscribe to Filmibeat Kannada

ಬೆಂಗಳೂರು : ಕನ್ನಡ ಚಲನಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‌ ಗುರುವಾರ ಮಧ್ನಾಹ್ನ 3-30ರಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಲಿವರ್‌ ಜಾಂಡೀಸ್‌ನಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಶುಶ್ರೂಷೆಗಾಗಿ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕುಮಾರ್‌ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಒರಿಯಾ ಮೂಲದವರಾದ ಉಪೇಂದ್ರಕುಮಾರ್‌ ಅವರು ಪ್ರೇಮದಕಾಣಿಕೆ, ಶಂಕರ್‌ಗುರು ಸೇರಿದಂತೆ ಸುಮಾರು 210 ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದರು. ಇತ್ತೀಚೆಗೆ ಬಿಡುಗಡೆಯಾದ ಧರ್ಮದೇವತೆ ಹಾಗೂ ಬಿಡುಗಡೆಯಾಗಬೇಕಿರುವ ವಿಶ್ವಾಮಿತ್ರ ಚಿತ್ರಕ್ಕೂ ಅವರು ಸಂಗೀತ ಒದಗಿಸಿದ್ದರು.

ರವಿಚಂದ್ರ, ರಥಸಪ್ತಮಿ, ಹಸಿರುತೋರಣ, ದೇವತಾಮನುಷ್ಯ, ಅಪೂರ್ವ ಸಂಗಮ, ಧ್ರುವತಾರೆ, ಅನುರಾಗ ಅರಳಿತು, ಕಾಮನಬಿಲ್ಲು, ಹೃದಯ ಹಾಡಿತು, ನಂಜುಂಡಿ ಕಲ್ಯಾಣ , ಗಜಪತಿಗರ್ವಭಂಗ, ಸಪ್ತಪದಿ, ಒಡಹುಟ್ಟಿದವರು, ಜೀವನಚೈತ್ರ ಮೊದಲಾದ ಚಿತ್ರಗಳಲ್ಲಿ ಉಪೇಂದ್ರಕುಮಾರ್‌ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಯಾವ ಮೋಹ, ಏನುದಾಹ ತಿಳಿಯದಾಗಿದೆ.. ಮೊದಲಾದ ಡಾ.ರಾಜ್‌ ಗೀತೆಗಳ ಧ್ವನಿಸುರುಳಿಗೂ ಉಪೇಂದ್ರಕುಮಾರ್‌ ಸಂಗೀತ ನಿರ್ದೇಶನ ನೀಡಿದ್ದರು. ಉಪೇಂದ್ರ ಕುಮಾರ್‌ ಸಂಗೀತ ನಿರ್ದೇಶಿಸಿದ ಮೊದಲ ಚಿತ್ರ ಕಠಾರಿವೀರ. ಈ ಚಿತ್ರದಲ್ಲಿ ಕಿವಿ ಮಾತೊಂದು ಕೇಳಿ ನಾ ಓಡಿಬಂದೆ ಎಂಬುದು ಅವರ ನಿರ್ದೇಶನದಲ್ಲಿ ಹೊರಬಂದ ಮೊಟ್ಟ ಮೊದಲ ಗೀತ

English summary
Senior kannada music director upendrakumar passed away
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada