ರಜಿನಿಯ 'ಕೂಲಿ' ಚಿತ್ರಕ್ಕೆ ಉಪೇಂದ್ರ ಪಡೆದ ಸಂಭಾವನೆ ಎಷ್ಟು ?

ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದೇ ''ಕಾಶೀನಾಥ್'' ಎಂಬ ಅಪ್ರತಿಮ ಪ್ರತಿಭಾವಂತನ ಮನವೊಲಿಸಿ ಅವಕಾಶ ಪಡೆದು, ಬರಹಗಾರನಾಗಿ ಕೆಲಸ ಆರಂಭ ಮಾಡಿದವರು ''ಉಪೇಂದ್ರ''. ಆ ನಂತರ ಸಹ ನಿರ್ದೇಶಕರಾಗಿ ಬಡ್ತಿಯನ್ನು ಪಡೆದು ''ತರ್ಲೆ ನನ್ ಮಗ'' ಚಿತ್ರದ ಮೂಲಕ ಡೈರೆಕ್ಟರ್ ಆಗಿ ಹೊರ ಹೊಮ್ಮಿದ ಉಪ್ಪಿ ''ಓಂ'' ಚಿತ್ರದ ಮೂಲಕ ಆ ಕಾಲದಲ್ಲಿಯೇ ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದರು.

''ಎ.. ''ಉಪೇಂದ್ರ''.. ಚಿತ್ರಗಳ ಮೂಲಕ ಟ್ರೆಂಡ್ ಸೆಟ್ ಮಾಡಿ ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದರು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಸ್ಥಾನವನ್ನು ಕೂಡ ಅಲಂಕರಿಸಿದರು.ಇಂಥಾ ಉಪೇಂದ್ರಗೆ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಅಕ್ಕ ಪಕ್ಕದ ರಾಜ್ಯದಲ್ಲಿ ಕೂಡ ಬೆಲೆ ಇದೆ. ಅಭಿಮಾನಿಗಳ ಬಳಗ ಇದೆ.

Upendra s Coolie Paycheck Revealed How Much Did the Kannada Real Star Earn

ಇದಕ್ಕೆ ಕೈಗನ್ನಡಿ ಎಂಬಂತೆ ಹಲವು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಉಪ್ಪಿ ಸದ್ಯ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ''ಕೂಲಿ'' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗಲಿದ್ದು ಸದ್ಯ ಈ ಚಿತ್ರಕ್ಕೆ ಉಪ್ಪಿ ಪಡೆದಿರಬಹುದಾದ ''ಸಂಭಾವನೆ''ಯ ಕುರಿತು ಚರ್ಚೆಯಾಗುತ್ತಿದೆ.

ಇದಕ್ಕೆ ಪೂರಕವಾಗಿ ''ಇಂಡಿಯಾ ಟುಡೇ'' ವರದಿಯನ್ನು ಮಾಡಿದ್ದು ರಜಿನಿಕಾಂತ್ ಎದುರು ಉಪೇಂದ್ರ ಅಬ್ಬರಿಸಲು ₹5ಕೋಟಿ ಹಣವನ್ನು ಪಡೆದಿದ್ದಾರೆ ಎಂದು ವರದಿಯನ್ನು ಮಾಡಿದೆ.

ಇನ್ನು ಉಪೇಂದ್ರ ಅವರ ಸಂಭಾವನೆ ಕುರಿತು ರಾಷ್ಟ್ರ ಮಟ್ಟದಲ್ಲಿ ಚರ್ಚೆಯನ್ನು ಮಾಡಲಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯೆಂಬಂತೆ ಇಂಗ್ಲೀಷ್‌ನ ''ಒನ್‌ ಇಂಡಿಯಾ'' ವೆಬ್ ಸೈಟ್ ಕೂಡ ವರದಿಯನ್ನು ಮಾಡಿದ್ದು ಸಾಮಾನ್ಯವಾಗಿ ಉಪೇಂದ್ರ ಪರಭಾಷೆಯ ಚಿತ್ರಗಳಿಗೆ ಐದರಿಂದ ಆರು ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೂಲಿ ಚಿತ್ರಕ್ಕೆ ಉಪೇಂದ್ರ ₹10ಕೋಟಿ 'ಕೂಲಿ'ಯನ್ನು ಪಡೆದಿದ್ದಾರೆ ಎಂದು ವರದಿಯನ್ನು ಮಾಡಿದೆ.

ಅಂದ್ಹಾಗೇ ಇತ್ತೀಚೆಗೆ ನಡೆದ ''ಕೂಲಿ'' ಚಿತ್ರದ ''ಆಡಿಯೋ ಲಾಂಚ್'' ಸಮಾರಂಭದಲ್ಲಿ ಉಪೇಂದ್ರ ಅವರನ್ನು ರಜಿನಿಕಾಂತ್ ಬಾಯ್ತುಂಬ ಹೊಗಳಿದ್ದರು. ''ಲೋಕೇಶ್ ಕನಕರಾಜ್'' ಈಗ ಮಾಡ್ತಿರುವುದನ್ನು ಉಪೇಂದ್ರ ಆ ಕಾಲದಲ್ಲಿಯೇ ನಿರ್ದೇಶಕನಾಗಿ ಮಾಡಿದ್ದರು ಎಂದು ಹೇಳಿದ್ದ ರಜಿನಿಕಾಂತ್ ಅವರ ''ಓಂ'' ಚಿತ್ರದ ಮುಂದೆ ನನ್ನ ''ಬಾಷಾ'' ಲೆಕ್ಕಕ್ಕಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಎಲ್ಲ ನಿರ್ದೇಶಕರಿಗೆ ಸ್ಫೂರ್ತಿ ಉಪೇಂದ್ರ ಎಂದು ಹೇಳಿದ್ದರು.

Upendra s Coolie Paycheck Revealed How Much Did the Kannada Real Star Earn

ಇನ್ನು ಕಾರ್ಯಕ್ರಮದಲ್ಲಿ ''ಕೂಲಿ'' ಚಿತ್ರದ ಕುರಿತು ರಜಿನಿಕಾಂತ್ ಅವರ ಕುರಿತು ಮಾತನಾಡಿದ್ದ ಉಪೇಂದ್ರ, ರಜಿನಿ ಸರ್ ನನ್ನ ಪಾಲಿಗೆ ''ದ್ರೋಣಾಚಾರ್ಯ''ರಂತೆ ಎಂದು ಹೇಳಿದ್ದರು. ನಾನು ಹಲವಾರು ವರ್ಷಗಳಿಂದ ಅವರನ್ನು ಆರಾಧಿಸುತ್ತಾ, ಅವರನ್ನು ಹಿಂಬಾಲಿಸುತ್ತಾ ಬಂದಿದ್ದೇನೆ ಎಂದು ಹೇಳಿದ್ದ ಉಪೇಂದ್ರ ವೃತ್ತಪರವಾಗಿ ಮತ್ತು ಆಧ್ಯಾತ್ಮಿಕವಾಗಿ ಅವರಿಂದ ನಾನು ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದರು.

''ಕೂಲಿ'' ಚಿತ್ರಕ್ಕೆ ನನಗೆ ಕರೆ ಬಂದಾಗ ನನಗಾದ ಸಂಭ್ರಮ ಹೇಳಲು ಆಗದು ಎಂದಿದ್ದ ಉಪೇಂದ್ರ ''ಕೂಲಿ'' ಚಿತ್ರದ ಈ ಪಾತ್ರವನ್ನು ನಾನು ಯಾವತ್ತು ಮರೆಯಲಾರೆ ಅಂದಿದ್ದರು. ನನ್ನ ಹೃದಯಕ್ಕೆ ಈ ಪಾತ್ರ ಸದಾ ಹತ್ತಿರವಾಗಿರಲಿದೆ ಎಂದು ಹೇಳಿದ್ದರು.

ಇನ್ನುಳಿದಂತೆ ಸದ್ಯ ಇಡೀ ದೇಶವನ್ನು ''ಕೂಲಿ'' ಆವರಿಸಿಕೊಂಡಿದೆ. ಎಲ್ಲೆಡೆ ರಜಿನಿ ಮೇನಿಯಾ ಶುರುವಾಗಿದೆ. ಮೊದಲ ದಿನವೇ ₹100 ಕೋಟಿಯ ಗಡಿಯನ್ನು ಈ ಚಿತ್ರ ದಾಟುವ ನಿರೀಕ್ಷೆ ಇದೆ. ಈಗಾಗಲೇ ಭಾರತದ ಹಲವು ಕಡೆ ಚಿತ್ರಮಂದಿರಗಳು ತುಂಬಿ ತುಳುಕುತ್ತಿದ್ದು, ಚೆನ್ನೈನಲ್ಲಿಯೇ ಒಂದು ಮಲ್ಟಿಪ್ಲೆಕ್ಸ್​ನಲ್ಲಿ 56 ಶೋಗಳು ''ಹೌಸ್‌ಫುಲ್'' ಆಗಿವೆ. ಬೆಂಗಳೂರಿನಲ್ಲಿ ಕೂಡ ''ಕೂಲಿ'' ಹವಾ ಜೋರಾಗಿದ್ದು ಮುಗಿ ಬಿದ್ದು ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ''ಕೂಲಿ'' ಅಬ್ಬರಕ್ಕೆ ಯಾವೆಲ್ಲಾ ದಾಖಲೆಗಳು ಉಡೀಸ್ ಆಗಲಿವೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
How much did Upendra earn for "Coolie"? Get the inside scoop on the Kannada star's salary, a figure that's creating major buzz in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X