For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಮುಂದಿನ ಚಿತ್ರದ ಬಜೆಟ್ 2 ಲಕ್ಷ 25 ಸಾವಿರ ಕೋಟಿ.!

  |
  ಉಪೇಂದ್ರ ಮುಂದಿನ ಸಿನಿಮಾದ ಬಜೆಟ್ 2,65,000 ಕೋಟಿ ಅಂತೆ | Oneindia Kannada

  'ಉಪೇಂದ್ರ ಡೈರೆಕ್ಷನ್ ಮಾಡಿ, ನಿಮ್ಮ ಸಿನಿಮಾಗಾಗಿ ನಾವು ಕಾಯ್ತಿದ್ದೀವಿ. ನೀವು ನಿಮ್ಮ ವೈಯಕ್ತಿಕ ಆಸೆಗಳಿಗಾಗಿ ಅಭಿಮಾನಿಗಳನ್ನ ನಿರಾಸೆಗೊಳಿಸುತ್ತಿದ್ದೀರಾ' ಎಂದು ಉಪೇಂದ್ರ ಭಕ್ತರು ಬೇಸರ ವ್ಯಕ್ತಪಡಿಸಿದ್ದರು.

  ಇದೆಲ್ಲವನ್ನ ಗಮನಿಸಿದ ರಿಯಲ್ ಸ್ಟಾರ್ ಉಪೇಂದ್ರ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಭಾರಿ ಕುತೂಹಲಕಾರಿ, ಸ್ಫೋಟಕ ವಿಷ್ಯವೊಂದನ್ನ ಬಹಿರಂಗಪಡಿಸಿದ್ದಾರೆ.

  ''ಬರಿ ರೀಮೇಕ್ ಮಾಡ್ತೀರಾ ಯಾಕೆ'' ಎಂದಿದ್ದಕ್ಕೆ ಉಪೇಂದ್ರ ಹೇಳಿದ್ದೇನು ಗೊತ್ತಾ.?

  ಅದೇನಪ್ಪಾ ಅಂದ್ರೆ, ಉಪ್ಪಿ ಮುಂದಿನ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಅದಕ್ಕೆ ಆಗುವ ಬಜೆಟ್ ಸುಮಾರು 2 ಲಕ್ಷ 25 ಸಾವಿರ ಕೋಟಿ ಅಂತೆ. ಈ ಸಂಗತಿಯನ್ನ ಕೇಳಿದ ಅಭಿಮಾನಿಗಳೂ ನಿಜಕ್ಕೂ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾಗಿದ್ದಂತು ಸುಳ್ಳಲ್ಲ. ಅಷ್ಟಕ್ಕೂ, ಉಪ್ಪಿ ಮುಂದಿನ ಸಿನಿಮಾ ಯಾವುದು.? ಇಷ್ಟು ದೊಡ್ಡ ಬಜೆಟ್ ನಲ್ಲಿ ಸಿನಿಮಾ ಬರುತ್ತಾ.? ಏನಿದು ಉಪೇಂದ್ರ ಬಜೆಟ್ ಲೆಕ್ಕಾಚಾರ ಅಂತ ಮುಂದೆ ಓದಿ....

  2 ಲಕ್ಷ 25 ಸಾವಿರ ಕೋಟಿ ಸಿನಿಮಾ

  2 ಲಕ್ಷ 25 ಸಾವಿರ ಕೋಟಿ ಸಿನಿಮಾ

  ಉಪೇಂದ್ರ ಒಂದು ರಿಯಲ್ ಸಿನಿಮಾ ಮಾಡ್ತಾರಂತೆ. ಆ ಚಿತ್ರದ ಬಜೆಟ್ 2 ಲಕ್ಷ 25 ಸಾವಿರ ಕೋಟಿ. ಒಂದು ವರ್ಷದ ಪ್ರಾಜೆಕ್ಟ್ ಇದು. ಈ ಚಿತ್ರದ ನಿರ್ಮಾಪಕರು ನೀವೇ (ಪ್ರೇಕ್ಷಕರು). ಇದು ಎರಡೂವರೆ ಗಂಟೆಯ ಸಿನಿಮಾ ಅಲ್ಲ. ನಿತ್ಯ ನಿರಂತರ ಸಿನಿಮಾ ಎಂದು ಅಚ್ಚರಿ ಮೂಡಿಸಿದ್ದಾರೆ. 'ನಮ್ಮ ಕರ್ನಾಟಕವನ್ನ ಭವ್ಯ ಕರ್ನಾಟಕವನ್ನಾಗಿ ಮಾಡಬೇಕೆಂದು ನಾನು ಹಲವು ಸಿನಿಮಾ ಡೈರೆಕ್ಷನ್ ಮಾಡದೇ, ಆಕ್ಟ್ ಮಾಡದೆ ಇಲ್ಲಿವರೆಗೂ ಬಂದಿದ್ದೀನಿ'' ಎಂದು ಉಪ್ಪಿ ಹೇಳಿದ್ರು.

  ಡೈರೆಕ್ಷನ್ ಮಾಡಿ ಅಂತಿದ್ದವರಿಗೆ 'ಮೆಗಾ ಬ್ರೇಕಿಂಗ್' ನೀಡಿದ ಉಪೇಂದ್ರ

  ಉಪ್ಪಿ ಹೇಳಿದ್ದು ರಿಯಲ್ ಪ್ರಜಾಕೀಯ

  ಉಪ್ಪಿ ಹೇಳಿದ್ದು ರಿಯಲ್ ಪ್ರಜಾಕೀಯ

  ಇಂತಹ ರಿಯಲ್ ಚಿತ್ರವನ್ನ ನಾನು ನಿರ್ದೇಶನ ಮಾಡ್ಬೇಕಾ ಅಥವಾ ಬೇಡವಾ ಎಂದು ಈಗ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಮುಂದೆ ಪ್ರಶ್ನೆಯಿಟ್ಟಿದ್ದಾರೆ. ಅಂದ್ರೆ, ಉಪೇಂದ್ರ ಅವರು ಹೇಳಿದ್ದು ರೀಲ್ ಸಿನಿಮಾ ಅಲ್ಲ, ತಮ್ಮ ಪ್ರಜಾಕೀಯದ ಪರಿಕಲ್ಪನೆಯನ್ನ ಹೊಂದಿರುವ ರಿಯಲ್ ಸಿನಿಮಾವನ್ನ. ಅವರ ಹೇಳಿದ್ದ ಬಜೆಟ್, ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ ಇರಬಹುದು.

  ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

  ಡೈರೆಕ್ಷನ್ ಕೂಡ ಮಾಡ್ತೀನಿ

  ಡೈರೆಕ್ಷನ್ ಕೂಡ ಮಾಡ್ತೀನಿ

  'ನನ್ನ ಕನಸು ಅಥವಾ ಅದನ್ನ ನೀವು ಹುಚ್ಚು ಎನ್ನಬಹುದು. ಇದು ನನ್ನ ರಿಯಲ್ ಸಿನಿಮಾ' ಎಂದು ಉಪೇಂದ್ರ ಹೇಳಿದ್ರು. ಈ ಸಿನಿಮಾಗಾಗಿ ನಿಮ್ಮನ್ನ ಮರೆಯಲು ಸಾಧ್ಯವಿಲ್ಲ. ನಿಮಗಾಗಿ ಚಿತ್ರ ಮಾಡ್ತೀನಿ. ನಿಮಗೆ ಇಷ್ಟವಾಗುವಂತಹ ಸ್ಕ್ರಿಪ್ಟ್ ಬೇಕು ಅಂತ ಕಾಯ್ತಿದ್ದೀನಿ. ಅದರ ಮೇಲೆ ಕೆಲಸ ನಡೆಯುತ್ತಿದೆ. ಸದ್ಯದಲ್ಲೇ ಅನೌನ್ಸ್ ಮಾಡ್ತೀನಿ' ಎಂದು ಉಪ್ಪಿ ಹೇಳಿದ್ರು.

  ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?

  ಸಂಕ್ರಾಂತಿಗೆ ಸಿಗುತ್ತಾ ಗುಡ್ ನ್ಯೂಸ್.!

  ಸಂಕ್ರಾಂತಿಗೆ ಸಿಗುತ್ತಾ ಗುಡ್ ನ್ಯೂಸ್.!

  ಸದ್ಯದ ಮಾಹಿತಿ ಪ್ರಕಾರ ಉಪೇಂದ್ರ ಡೈರೆಕ್ಷನ್ ಸಿನಿಮಾ ಮುಂದಿನ ವರ್ಷ ಆರಂಭವಾಗಲಿದೆ ಎನ್ನಲಾಗುತ್ತಿದೆ. ಸಂಕ್ರಾತಿ ಹಬ್ಬಕ್ಕೆ ಉಪ್ಪಿ ನಿರ್ದೇಶನದ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಮುಂದಿನ ವರ್ಷ ಚಿತ್ರೀಕರಣ ಕೂಡ ಶುರುವಾಗಲಿದೆ ಎಂಬ ಮಾತಿದೆ. ಅದಕ್ಕೆ ಇನ್ನು ಕೆಲವು ದಿನಗಳ ಕಾಲ ಕಾದುನೋಡಬೇಕು.

  'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ

  English summary
  Upendra's upcoming movie budget cost is 2 lakh 25 thousand crores. it's the real project of him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X