'ಮ್ಯಾಕ್ಸ್' ಬಂದ್ಮೇಲೆ 'UI' ಕಲೆಕ್ಷನ್ ಬಿತ್ತು ಎಂದ ಫಿಲ್ಮ್ ಚೇಂಬರ್ ಅಧ್ಯಕ್ಷ; ಹಾಗಿದ್ರೆ ಬಾಕ್ಸಾಫೀಸ್ ಲೆಕ್ಕ ಸುಳ್ಳಾ?

By ಫಿಲ್ಮಿಬೀಟ್ ಡೆಸ್ಕ್

ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆಯಾಗಿ 'ಮ್ಯಾಕ್ಸ್' ಹಾಗೂ 'ಯುಐ' ಚಿತ್ರಗಳು 3ನೇ ವಾರ ಯಶಸ್ವಿ ಪ್ರದರ್ಶನ ಮುಂದುವರೆಸಿವೆ. ಸುದೀಪ್ ನಟನೆಯ 'ಮ್ಯಾಕ್ಸ್' ದರ್ಬಾರ್ ಕೊಂಚ ಜೋರಾಗಿಯೇ ಇದೆ. ಇನ್ನು ಎರಡೂ ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆದಿತ್ತು. ಇದರಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ? ಎನ್ನುವ ಚರ್ಚೆ ಕೂಡ ನಡೀತಿದೆ.

ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ 'ಯುಐ'. ಡಿಸೆಂಬರ್ 20ಕ್ಕೆ ಈ ಸೈಕಲಾಜಿಕಲ್ ಸಿನಿಮಾ ತೆರೆಗೆ ಬಂದಿತ್ತು. ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಹಣ ಹೂಡಿದ್ದಾರೆ. ದಶಕದ ಬಳಿಕ ಉಪ್ಪಿ ನಿರ್ದೇಶಿಸಿದ ಸಿನಿಮಾ ಎನ್ನುವ ಕಾರಣಕ್ಕೆ 'ಯುಐ' ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಆದರೆ ಸಿನಿಮಾ ತೆರೆಕಂಡ 4 ದಿನಗಳ ಅಂತರದಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗಪ್ಪಳಿಸಿತ್ತು.

Upendra s UI collections dropped after Sudeep s Max release says film chamber president Narasimhulu

ಸಾಮಾನ್ಯವಾಗಿ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾದರೆ ಬಾಕ್ಸಾಫೀಸ್ ಕ್ಲ್ಯಾಶ್ ಆಗುತ್ತದೆ. ಸಣ್ಣ ಪ್ರಮಾಣದಲ್ಲಿ ಆದರೂ ಯಾವುದಾದರು ಒಂದು ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ಆದರೆ ಎಲ್ಲಾ ಗೊತ್ತಿದ್ದು ಬಹಳ ನಂಬಿಕೆಯಿಂದಲೇ ಎರಡೂ ಚಿತ್ರಗಳನ್ನು ಒಟ್ಟೊಟ್ಟಿಗೆ ರಿಲೀಸ್ ಮಾಡಲಾಗಿತ್ತು. ನಮ್ಮ ಸಿನಿಮಾಗಳ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ಎರಡೂ ತಂಡಗಳು ಹೇಳಿದ್ದವು.

'ಯುಐ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಮೊದಲ 4 ದಿನ ಭರ್ಜರಿ ಕಲೆಕ್ಷನ್ ಮಾಡಿದ್ದು ಸುಳ್ಳಲ್ಲ. ಬರೀ ಬುಕ್‌ ಮೈಶೋನಲ್ಲಿ 3 ದಿನ ತಲಾ ಒಂದೊಂದು ಲಕ್ಷ ಟಿಕೆಟ್ ಬುಕ್ ಆಗಿತ್ತು. ಆದರೆ 'ಮ್ಯಾಕ್ಸ್' ದೊಡ್ಡದಾಗಿ ಸದ್ದು ಮಾಡಿತ್ತು. ಮಾಸ್ ಎಂಟರ್‌ಟೈನರ್‌ ಸಿನಿರಸಿಕರನ್ನು ದೊಡ್ಡದಾಗಿ ಸೆಳೆದಿತ್ತು. ಇನ್ನು ಅರ್ಜುನ್ ಮಹಾಕ್ಷನ್ ಎಂಟ್ರಿ ಬಳಿಕ ಸತ್ಯ ಹಾಗೂ ಕಲ್ಕಿ ಕಡೆ ಪ್ರೇಕ್ಷಕರ ಫೋಕಸ್ ಕಮ್ಮಿ ಆಗಿದ್ದು ಸುಳ್ಳಲ್ಲ.

ಹಬ್ಬದ ರಜೆ ದಿನ ಬಿಡುಗಡೆ ಆಗಿದ್ದ 'ಮ್ಯಾಕ್ಸ್' ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಕ್ಕಿತ್ತು. ಡಿಸೆಂಬರ್ 25ರ ಬೆಳಗ್ಗೆ 6 ಗಂಟೆ ಶೋನಿಂದಲೇ ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದಿತ್ತು. ಹಾಗಾಗಿ ಸಂಜೆಯ ಶೋಗಳು ಹೌಸ್‌ಫುಲ್ ಆಗಲು ಪ್ರಾರಂಭವಾಯಿತು. ಮೊದಲ 3 ದಿನ 3000 ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಆಗಿತ್ತು ಎಂದು ಚಿತ್ರತಂಡವೇ ಹೇಳಿತ್ತು. ಆದರೆ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Upendra s UI collections dropped after Sudeep s Max release says film chamber president Narasimhulu

ಬಾಕ್ಸಾಫೀಸ್ ಪಂಡಿತ ಪ್ರಕಾರ ಕ್ರಿಸ್‌ಮಸ್ ಬಾಕ್ಸಾಫೀಸ್ ಕದನದಲ್ಲಿ 'ಯುಐ'ಗಿಂತ 'ಮ್ಯಾಕ್ಸ್' ಕೈ ಮೇಲಾಗಿತ್ತು. 2024ರ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ 'ಮ್ಯಾಕ್ಸ್' ಎನಿಸಿಕೊಂಡಿತ್ತು. ಆದರೆ ಉಪ್ಪಿ ಚಿತ್ರಕ್ಕೆ ವಿದೇಶಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 2024ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಕಂಡ ನಂಬರ್ ವನ್ ಸಿನಿಮಾ 'ಯುಐ' ಎಂದು ಚಿತ್ರತಂಡ ಹೇಳಿತ್ತು. ಆದರೆ 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಕಲೆಕ್ಷನ್ ಬಿತ್ತು ಎಂದು ಸ್ವತಃ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡದ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಪರಭಾಷಾ ಸಿನಿಮಾಗಳ ನಡುವೆ 'ಸಂಜು ವೆಡ್ಸ್ ಗೀತಾ'-2 ಹಾಗೂ 'ಛೂ ಮಂತರ್' ಚಿತ್ರಗಳಿಗೆ ಸರಿಯಾಗಿ ಥಿಯೇಟರ್‌ಗಳು ಸಿಗಲಿಲ್ಲ. ಹಾಗಾಗಿ ನಾಗಶೇಖರ್ ನಿರ್ದೇಶನದ ಸಿನಿಮಾ ರಿಲೀಸ್ ಮುಂದೂಡಲಾಗಿದೆ. ಈ ಬಗ್ಗೆ ಫಿಲ್ಮ್ ಚೇಂಬರ್‌ನಲ್ಲಿ ಭಾರೀ ಚರ್ಚೆ ಆಯಿತು.

'ಛೂ ಮಂತರ್' ಚಿತ್ರಕ್ಕೂ ಸರಿಯಾಗಿ ಸ್ಕ್ರೀನ್‌ಗಳು ಸಿಕ್ಕಿಲ್ಲ. ನಾನೇ ಎರಡರಲ್ಲಿ ಒಂದು ಸಿನಿಮಾ ರಿಲೀಸ್ ಮುಂದೂಡುವಂತೆ ನಿರ್ಮಾಪಕರಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ. 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ನಾಲ್ಕು ದಿನದ ಅಂತರದಲ್ಲಿ ಬಿಡುಗಡೆ ಆಗಿದ್ದವು. ಆದರೆ 'ಯುಐ' ಒಳ್ಳೆ ಕಲೆಕ್ಷನ್ ಆಗುತ್ತಿತ್ತು. ಬಳಿಕ 'ಮ್ಯಾಕ್ಸ್' ಬಂದ ಬಳಿಕ 'ಯುಐ' ಕಲೆಕ್ಷನ್ ಬಿತ್ತು. ಅದು ನೋಡಿ ಹೊಟ್ಟೆ ಉರಿಯಿತು. ಹಾಗಾಗಿ ಮತ್ತೆ ಎರಡು ಸಿನಿಮಾ ಒಟ್ಟಿಗೆ ಬರುವುದು ಬೇಡ ಎಂದು ಎಂದು ಮನವಿ ಮಾಡಿದ್ದಾಗಿ ನರಸಿಂಹಲು ವಿವರಿಸಿದ್ದಾರೆ.

ಫಿಲ್ಮ್ ಚೇಂಬರ ಅಧ್ಯಕ್ಷರ ಮಾತು ಕೇಳಿದರೆ 'ಯುಐ' ಚಿತ್ರದ ಗಳಿಕೆ ಬಹಳ ಕಮ್ಮಿ ಆಗಿದ್ಯಾ? ಎನ್ನುವ ಅನುಮಾನ ಮೂಡಿದೆ. ಹಾಗಿದ್ದರೆ ಉಪ್ಪಿ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದೆ ಎನ್ನುವುದೆಲ್ಲಾ ಸುಳ್ಳಾ? ಎಂದು ಸುದೀಪ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ನರಸಿಂಹಲು ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

More from Filmibeat

English summary
Max vs UI; Karnataka film chamber president Narasimhulu interesting on Ui and max boxoffice collection
Read more about: filmibeat original ui max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X