'ಮ್ಯಾಕ್ಸ್' ಮ್ಯಾಕ್ಸಿಮಮ್ ದರ್ಬಾರ್ ನಡುವೆ 'ಯುಐ' ಬರೆದ ದಾಖಲೆಗಳೇನು?

ಸ್ಯಾಂಡಲ್‌ವುಡ್‌ನಲ್ಲಿ 'ಯುಐ' vs 'ಮ್ಯಾಕ್ಸ್' ಕ್ಲ್ಯಾಶ್ ಮುಕ್ತಾಯವಾಗಿದೆ. ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗಳು ಗೆದ್ದಿದೆ. 'ಮ್ಯಾಕ್ಸ್' ಆರ್ಭಟ ಕೊಂಚ ಜೋರಾಗಿಯೇ ಇದೆ. ಪೈಪೋಟಿಯಲ್ಲಿ ಕಿಚ್ಚನ ಸಿನಿಮಾ ಕೈ ಮೇಲಾಗಿದೆ. ಹಾಗಂತ ಉಪ್ಪಿ ಸಿನಿಮಾ ಅಬ್ಬರ ಏನು ಕಮ್ಮಿ ಇಲ್ಲ. ಕೆಲವೆಡೆ 'ಯುಐ' ಮ್ಯಾಜಿಕ್ ನಡೆದಿದೆ.

ಉಪೇಂದ್ರ 10 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದರು. ಹಾಗಾಗಿ 'ಯುಐ' ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಇತ್ತು. ಆ ನಿರೀಕ್ಷೆ ತಲುಪುವಲ್ಲಿ ರಿಯಲ್ ಸ್ಟಾರ್ ಭಾಗಶಃ ಸಕ್ಸಸ್ ಕಂಡಿದ್ದರು. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಅದ್ಭುತ, ಇಂತಹ ಆಲೋಚನೆ ಉಪ್ಪಿ ಮಾತ್ರ ಸಾಧ್ಯ ಎಂದು ಜೈಕಾರ ಹಾಕಿದ್ದರು. ಆದರೆ ಮತ್ತೆ ಕೆಲವರು ಮನರಂಜನೆ ಇಲ್ಲ, ಅರ್ಥ ಆಗಲ್ಲ, ಇದು ಎಂಥಹ ಸಿನಿಮಾ ಎಂದು ಚಕಾರ ಎತ್ತಿದ್ದರು.

Upendra s UI has set new records despite the competition from Sudeep s movie Max

ವಿಭಿನ್ನ ರಿವ್ಯೂಗಳನ್ನು ಕೇಳಿ ಸಿನಿಮಾ ಹೇಗಿದೆ ನೋಡೋಣ ಎಂದು ಕೆಲವರು ಚಿತ್ರಮಂದಿರಕ್ಕೆ ಹೋಗಿದ್ದರು. ಉಪ್ಪಿ ನಿರ್ದೇಶನದ ಮೇಲೆ ನಂಬಿಕೆ ಇಟ್ಟು ಚಿತ್ರಮಂದಿರ ಪ್ರವೇಶಿಸಿದರಿಗೆ ಲೆಕ್ಕವಿಲ್ಲ. ಒಟ್ಟಾರೆ 'ಯುಐ' ಚಿತ್ರ ಕೂಡ ಗೆದ್ದಿತ್ತು. ಆದರೆ ಅಷ್ಟರಲ್ಲೇ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯಾಗಿ ಪೆಟ್ಟು ಕೊಟ್ಟಿತ್ತು. ಕಿಚ್ಚನ ದರ್ಬಾರ್ ಶುರುವಾಗುತ್ತಿದ್ದಂತೆ ಪ್ರೇಕ್ಷಕರ ಚಿತ್ತ ಅತ್ತ ಹರಿಯಿತು. ಪರಿಣಾಮ 'ಯುಐ' ಹವಾ ಕಮ್ಮಿ ಆಗಿತ್ತು.

ತೆಲುಗು ಹಾಗೂ ತಮಿಳು ಭಾಷೆಗಳಿಗೆ ಎರಡೂ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗಿತ್ತು. ಎರಡೂ ಚಿತ್ರಗಳಿಗೆ ತಕ್ಕಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ. ಬಾಕ್ಸಾಫೀಸ್ ಕ್ಲ್ಯಾಶ್ ಕಾರಣಕ್ಕೆ ಎರಡೂ ಸಿನಿಮಾಗಳಿಗೆ ಹಿನ್ನಡೆ ಆಗಿದೆ ಎನ್ನುವವರು ಇದ್ದಾರೆ.

'ಮ್ಯಾಕ್ಸ್' ಬಂದ ಮೇಲೆ 'ಯುಐ' ಕಲೆಕ್ಷನ್ ಇಳಿಕೆ ಆಗಿತ್ತು ಎನ್ನುವುದು ಒಂದು ಕಡೆ. ಅದೇ ರೀತಿ 'ಯುಐ' ನೋಡಿದ ಕೆಲವರು 'ಮ್ಯಾಕ್ಸ್' ನೋಡಲು ಹಿಂದೇಟು ಹಾಕಿದ್ದಾರೆ ಎನ್ನುವ ವಾದವೂ ಇದೆ. ಕೆಲವರ ಬಳಿ ಅಷ್ಟು ಹಣ ಇಲ್ಲ. ಒಂದೇ ವಾರದಲ್ಲಿ ಎರಡೂ ಸಿನಿಮಾ ನೋಡುವುದು ಕಷ್ಟ ಎನ್ನಲಾಗ್ತಿದೆ. ಹಾಗಾಗಿ ಕ್ಲ್ಯಾಶ್‌ ಕಾರಣಕ್ಕೆ 'ಮ್ಯಾಕ್ಸ್' ಚಿತ್ರಕ್ಕೂ ಕೊಂಚ ಪೆಟ್ಟು ಬಿದ್ದಿದೆ.

ಇನ್ನು 'ಮ್ಯಾಕ್ಸ್' ಆರ್ಭಟದ ನಡುವೆಯೂ 'ಯುಐ' ಒಂದೆರಡು ದಾಖಲೆಗಳನ್ನು ಸ್ವಂತ ಮಾಡಿಕೊಂಡಿದೆ. ಕರ್ನಾಟಕದ ಜೊತೆಗೆ ವಿದೇಶಗಳಲ್ಲಿ ಉಪ್ಪಿ ಸಿನಿಮಾ ಸದ್ದು ಮಾಡಿದೆ. ವಿಶ್ವದಾದ್ಯಂತ 2024ರಲ್ಲಿ ಅತಿ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಎನ್ನುವ ದಾಖಲೆ 'ಯುಐ' ಪಾಲಾಗಿದೆ. ಇನ್ನು 3 ದಿನ ಬುಕ್‌ಮೈ ಶೋನಲ್ಲಿ ತಲಾ 2 ಲಕ್ಷ ಟಿಕೆಟ್ ಬುಕ್‌ ಆಗಿದ್ದು ಮತ್ತೊಂದು ದಾಖಲೆ.

ತೆಲುಗಿಗೆ ಡಬ್ ಆಗಿ 2024ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎನ್ನುವ ದಾಖಲೆಯೂ 'ಯುಐ' ತನ್ನದಾಗಿಸಿಕೊಂಡಿದೆ. ಕೆಲ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ 'ಯುಐ' ಸಿನಿಮಾ 14 ದಿನಕ್ಕೆ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ.

'ಮ್ಯಾಕ್ಸ್' ಹಾಗೂ 'ಯುಐ' ಸಕ್ಸಸ್ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ಶೀಘ್ರದಲ್ಲೇ ಮತ್ತಷ್ಟು ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ವರ್ಷದ ಮೊದಲ ವಾರ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗಲಿಲ್ಲ. ಮುಂದಿನ ವಾರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 'ಛೂ ಮಂತರ್' ಹಾಗೂ 'ಸಂಜು ವೆಡ್ಸ್ ಗೀತಾ-2' ಚಿತ್ರಗಳು ತೆರೆಗೆ ಬರ್ತಿವೆ.

More from Filmibeat

English summary
Amid strong competition from Sudeep's movie Max, Upendra's UI has achieved remarkable new records;
Read more about: filmibeat original ui max
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X