ಊವರ್ಶಿ ಚಿತ್ರಮಂದಿರದಲ್ಲಿ ಉಪ್ಪಿಯ ಯುಐ ಬರೆದ ದಾಖಲೆ ಏನು ? ಚಿತ್ರದ ಟೈಟಲ್ ಕಾರ್ಡ್‌ ಹೇಗಿದೆ ?

ತಮಿಳು ನಿರ್ದೇಶಕ ಶಂಕರ್, ಪ್ರಶಾಂತ್ ನೀಲ್, ಸೇರಿ ಕಳೆದ ಎರಡೂವರೆ ದಶಕಗಳಲ್ಲಿ ಜಗದ್ವಿಖ್ಯಾತರಾದ ಅನೇಕ ನಿರ್ದೇಶಕರಿಗೆ ಸ್ಫೂರ್ತಿಯ ಚಿಲುಮೆ ಉಪೇಂದ್ರ. ನಿರ್ದೇಶಕರಾಗಿ ಮೊದಲಿಂದ ಎಲ್ಲರನ್ನೂ ಅಚ್ಚರಿಗೆ ದೂಡುತ್ತಾ ಬಂದ ಉಪೇಂದ್ರ ನಾಯಕನಾಗುವ ಮೊದಲು ನಿರ್ದೇಶಕರಾಗಿಯೇ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದವರು. ಇದಕ್ಕೆ ಕೈಗನ್ನಡಿ ಎಂಬಂತೆ ಉಪೇಂದ್ರ ಡೈರೆಕ್ಟರ್ ಕುರ್ಚಿಯ ಮೇಲೆ ಕುಳಿತ ದಿನದಿಂದನೇ ಅನೇಕರಲ್ಲಿ ಕುತೂಹಲ ಗರಿಗೇದರಿರುತ್ತೆ. ನಿರೀಕ್ಷೆ ಹೆಚ್ಚಾಗುತ್ತೆ. ಯುಐ ಕೂಡ ಇದರಿಂದ ಹೊರತಾಗಿರಲಿಲ್ಲ.

ಹೀಗಾಗಿಯೇ ಮೊದಲ ದಿನ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿದ್ದಾರೆ. ಇದಕ್ಕೆ ಒಂದು ಚಿಕ್ಕ ಸಾಕ್ಷಿ ಎನ್ನುವಂತೆ ಉಪೇಂದ್ರ ತಮ್ಮ ಯುಐ ಚಿತ್ರದ ಮೂಲಕ ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ ಊವರ್ಶಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.

Upendra s UI which was released today created a record in Urvashi Theatre

ಇನ್ನು ಈ ಊವರ್ಶಿಯಲ್ಲಿ ಚಿತ್ರವೊಂದಕ್ಕೆ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೆ, ಟಿಕೆಟ್‌ಗಳು ವೇಗವಾಗಿ ಸೇಲ್ ಆದರೆ ಬೇರೆ ಎಲ್ಲ ಕಡೆ ಅದ್ಭುತವಾದ ಓಪನಿಂಗ್ ಸಿಗುತ್ತೆ ಎನ್ನುವ ನಂಬಿಕೆ ಅನೇಕರಿಗೆ ಇದೆ. ಯುಐ ಚಿತ್ರದ ವಿಚಾರದಲ್ಲಿ ಈ ನಂಬಿಕೆ ನಿಜವಾಗುತ್ತಾ ಎನ್ನುವುದಕ್ಕೆ ಉತ್ತರ ಕೆಲವೇ ಗಂಟೆಗಳಲ್ಲಿ ಸಿಗಲಿದೆಯಾದರೂ ಈ ನಂಬಿಕೆ ನಿಜವಾಗಲಿ ಎನ್ನುವುದೇ ಗಾಂಧಿನಗರದ ಸದ್ಯದ ಪ್ರಾರ್ಥನೆ.

ಇನ್ನು ಇಂದು ಬಿಡುಗಡೆಯಾದ ಯುಐದಲ್ಲಿ ಹಲವು ವಿಶೇಷತೆಗಳಿವೆ. ಆ ಪೈಕಿ ಚಿತ್ರದ ಟೈಟಲ್ ಕಾರ್ಡ್‌ ಕೂಡ ಒಂದು. ಹೌದು ತಮ್ಮ ಪ್ರತಿ ಚಿತ್ರದಲ್ಲಿ ಟೈಟಲ್ ಕಾರ್ಡ್‌ನ ಭಿನ್ನವಾಗಿ ಪ್ರೆಸೆಂಟ್ ಮಾಡುವ ಉಪೇಂದ್ರ ತಮ್ಮ ಯುಐ ಚಿತ್ರದಲ್ಲಿ ಕೂಡ ಟೈಟಲ್ ಕಾರ್ಡ್‌ನ ವಿಶೇಷವಾಗಿಸಿದ್ದಾರೆ. ಚಿತ್ರದ ಆರಂಭದಲ್ಲಿಯೇ ಪ್ರೇಕ್ಷಕರ ಬುದ್ದಿವಂತಿಕೆಗೆ ಸವಾಲು ಹಾಕುವ ಉಪೇಂದ್ರ ಒಂದಲ್ಲ ಈ ಬಾರಿ ಎರಡು ಸಲ ಚಿತ್ರದ ಟೈಟಲ್‌ ಕಾರ್ಡ್‌ ತೋರಿಸಿದ್ದಾರೆ.

ಇನ್ನುಳಿದಂತೆ ಯುಐ ಚಿತ್ರದಲ್ಲಿ ಇನ್ನು ಕೆಲ ವಿಶೇಷತೆಗಳಿವೆ. ಅದು ಉಪೇಂದ್ರ ಅವರ ಎಂಟ್ರಿ ದೃಶ್ಯ ಇರಬಹುದು ಚಿತ್ರದ ಸಂಭಾಷಣೆಗಳಿರಬಹುದು ಅಥವಾ ಕಲ್ಕಿಯ ಅವತಾರ ಇರಬಹುದು. ಈ ಎಲ್ಲವನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿದರೆ ಚೆಂದ. ಅಂದ್ಹಾಗೇ ಯುಐ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ಉಪೇಂದ್ರ ಅವರ ಜೊತೆ ರೀಶ್ಮಾ ನಾಣಯ್ಯ, ಸಾಧು ಕೋಕಿಲಾ, ಮಠ ಗುರುಪ್ರಸಾದ್, ಹೀಗೆ ಅನೇಕರು ಈ ಚಿತ್ರದ ಭಾಗವಾಗಿದ್ದಾರೆ. ಇನ್ನು ಯುಐ ಚಿತ್ರದಲ್ಲಿ ತಂತ್ರಜ್ಞಾನವನ್ನು ಉಪ್ಪಿ ಸಮರ್ಪಕವಾಗಿ ಬಳಿಸಿಕೊಂಡಿದ್ದಾರೆ. ಈ ಹಿಂದೆ ಅವರೇ ಹೇಳಿರುವಂತೆ ಚಿತ್ರದಲ್ಲಿ 14000 ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ. ತಲೆಯನ್ನು ಖರ್ಚು ಮಾಡುವುದಲ್ಲದೇ ಉಪೇಂದ್ರ ಈ ಬಾರಿ ತಂತ್ರಜ್ಞಾನದ ಸದ್ಭಳಕೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. AI ತಂತ್ರಜ್ಞಾನ, ವರ್ಚುವಲ್ ರಿಯಾಲಿಟಿ ಮತ್ತು ಬಾಡಿ ಸ್ಕ್ಯಾನಿಂಗ್ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಉಪೇಂದ್ರ ಒಂಬತ್ತು ವರ್ಷಗಳ ನಂತರ ನಿರ್ದೇಶನದಕ್ಕೆ ಮರಳಿದ ಹಿನ್ನೆಲೆ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಕುತೂಹಲ ಇತ್ತು. ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆ ಇತ್ತು. ಸದ್ಯ ಮೊದಲ ದಿನ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದ್ದು ಚಿತ್ರ ಬಹುತೇಕ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರದ ಗಳಿಕೆ ಈ ವಾರಾಂತ್ಯಕ್ಕೆ ಎಷ್ಟು ಆಗಲಿದೆ. ಚಿತ್ರ ಒಟ್ಟಾರೆಯಾಗಿ ಎಷ್ಟು ಗಳಿಸಲಿದೆ, ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಬಿಡುಗಡೆಯಾದ ಯುಐಗೆ ಅಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎನ್ನುವುದಕ್ಕೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.

More from Filmibeat

Read more about: upendra ui filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X