ಟ್ರೆಂಡ್ ಆಯ್ತು ಉಪೇಂದ್ರ ಮತದಾನದ ಫೋಟೋ
ಸ್ಟಾರ್ ಗಳು ಏನೇ ಮಾಡಿದರು ಅಭಿಮಾನಿಗಳು ಫಾಲೋ ಮಾಡುತ್ತಾರೆ. ನಟರು ಮಾಡುವ ಎಷ್ಟೋ ವಿಷಯಗಳು ಟ್ರೆಂಡ್ ಆಗುತ್ತವೆ.
ಈಗ ನಟ ಉಪೇಂದ್ರ ಅಭಿಮಾನಿಗಳು ಉಪ್ಪಿಯ ಒಂದು ಫೋಟೋವನ್ನು ಟ್ರೆಂಡ್ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರ ಮತದಾನ ಮಾಡಿ ಫೋಟೋ ತೆಗೆದುಕೊಂಡ ಸ್ಟೈಲ್ ಅನ್ನು ಫ್ಯಾನ್ಸ್ ಅನುಸರಿಸುತ್ತಿದ್ದಾರೆ.

ಎಲ್ಲ ಸ್ಟಾರ್ ಗಳು ಇಂದು ಮತದಾನ ಮಾಡಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಉಪೇಂದ್ರ ವೋಟ್ ಮಾಡಿದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋ ಹಾಕಿದ್ದರು. ಕಣ್ಣಿನ ಸುತ್ತ ಕೈ ಇಟ್ಟು ಸೂಪರ್ ಎಂದು ಕೈ ನಲ್ಲಿ ತೋರಿಸಿದ್ದರು. ಅವರ ಫೋಟೋ ನೋಡಿದ ಸಾಕಷ್ಟು ಅಭಿಮಾನಿಗಳು ಅದೇ ರೀತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ, ನಟ ಉಪೇಂದ್ರ ಅವರ 'ಯುಪಿಪಿ' ಪಕ್ಷದ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದು ಯುಪಿಪಿ ಪಕ್ಷದ ಮೊದಲ ಚುನಾವಣೆಯಾಗಿದೆ.
English summary
Lok sabha elections 2019 : Kannada actor, UUP party precedent Upendra voting photo become trending.


Click it and Unblock the Notifications