ದಿನಪತ್ರಿಕೆ ಸಂಪಾದಕರನ್ನೇ ಕುಣಿಸಿದ 'ಉಪ್ಪಿ-2'

ಕನ್ನಡ ದಿನಪತ್ರಿಕೆಗಳ ಪ್ರಧಾನ ಸಂಪಾದಕರನ್ನೇ ಉಪೇಂದ್ರ ಕುಣಿಸಿದ್ದಾರೆ. ಇವನ್ಯಾರೋ ಡಿಫರೆಂಟು ಎಂದು ರಿಯಲ್ ಸ್ಟಾರ್ ಗೆ ಉಪೇಂದ್ರ ಕುರಿತು ಹೇಳೋದೆ ಬೇಕಿಲ್ಲ. ಅಂಥ ಉಪ್ಪಿ ತಮ್ಮ ಉಪ್ಪಿ -2 ಚಿತ್ರದ ಧ್ವನಿಸುರುಳಿ ಕಾರ್ಯಕ್ರಮವನ್ನು ಡಿಫರೆಂಟಾಗೇ ಮಾಡಿ ಮುಗಿಸಿದ್ದಾರೆ.

ಪೆನ್ನು ಬಿಟ್ಟು ಸ್ಟೆಪ್ಸ್ ಹಾಕಿದ ಕನ್ನಡ ದಿನಪತ್ರಿಕೆಯ ಸಂಪಾದಕರು, ಕನ್ನಡ ಮಾತನಾಡಿದ ವಿದೇಶಿ ಬೆಡಗಿ ಕ್ರೀಸ್ಟೀನಾ, ಉಪ್ಪಿ ಆಯ್ದ ಗೀತೆಗಳನ್ನು ಹಾಡಿ ಹೆಜ್ಜೆ ಹಾಕಿದ ಗುರುಕಿರಣ್,,,, ಇವು ಉಪ್ಪಿ 2 ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಂಡುಬಂದ ದೃಶ್ಯವೈಭವದ ಕೆಲ ತುಣುಕುಗಳು. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 14 ಅಥವಾ 15ಕ್ಕೆ ಉಪ್ಪಿಟ್ಟು ಸವಿಯುವ ಭಾಗ್ಯ ಸಿಗಲಿದೆ. ['ಸೂಪರ್ ಸ್ಟಾರ್'ಗಳನ್ನ ಬೆಂಡೆತ್ತಿ ಬ್ರೇಕ್ ಹಾಕಿದ ಉಪೇಂದ್ರ]

ಉಪ್ಪಿಯ ರುಪ್ಪೀಸ್ ರೆಸಾರ್ಟ್ ನಲ್ಲಿ ಬಹು ನಿರೀಕ್ಷಿತ ಉಪ್ಪಿ-2 ಧ್ವನಿಸುರುಳಿ ಬಿಡುಗಡೆ ಸಮಾರಂಭ. ಒಟ್ಟು ಚಿತ್ರದಲ್ಲಿ ಐದು ಹಾಡುಗಳಿದ್ದು ಒಂದೊಂದನ್ನು ಒಂದೊಂದು ರೀತಿಯಲ್ಲಿ ಬಿಡುಗಡೆ ಮಾಡಲಾಯಿತು. ರುಪ್ಪೀಸ್ ನಲ್ಲಿ ಉಪ್ಪಿ ಬಿಡುಗಡೆ ಮಾಡಿದ ಉಪ್ಪಿ-2 ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಹೋಗಿ ಬರೋಣ...

ನಾನು ಅಂದರೆ ಯಾರು? ನೀನು ಅಂದರೆ ಯಾರು? ರಮೇಶ್ ಅರವಿಂದ್ ಗೆ ಗೊತ್ತಿಲ್ಲ. ಕಾಶಿನಾಥ್ ಯೋಚನೆ ಮಾಡಲ್ಲ. ಮಿಮಿಕ್ರಿ ದಯಾನಂದ್ ಬೇಕುಗಳಿಗೆ ಮಿತಿಇಲ್ಲ....ಅರ್ಥ ಆಗಲಿಲ್ವಾ ...ಮುಂದಕ್ಕೆ ಓದಿ

ಪ್ರಿಯಾಂಕಾ ಕೈಯಲ್ಲಿ ಅರಳಿದ ಫ್ಯಾಷನ್ ಝಲಕ್

ಪ್ರಿಯಾಂಕಾ ಕೈಯಲ್ಲಿ ಅರಳಿದ ಫ್ಯಾಷನ್ ಝಲಕ್

ಕಾರ್ಯಕ್ರಮದ ಆರಂಭವೇ ವಿಭಿನ್ನ. ಉಪ್ಪಿಯ 'ಎ' ಚಿತ್ರದ ಗೆಟಪ್ ನಿಂದ ಸೂಪರ್ ಚಿತ್ರದ ಗೆಟಪ್ ಗಳ ಮೂಲಕ ಆಗಮಿಸಿದ ಮಾಡೆಲ್ ಗಳು ಸಮಾರಂಭದ ಕಳೆ ಹೆಚ್ಚಿಸಿದರು. ಪಕ್ಕಾ ವೆಸ್ಟರ್ನ್ ಮ್ಯೂಸಿಕ್ ಗೆ ಹೆಜ್ಜೆ ಹಾಕಿದ ಪರಿ ಅಬ್ಬಬ್ಬಾ...

ಗುರುಕಿರಣ್ ಸಂಗೀತ ವೈಭವ

ಗುರುಕಿರಣ್ ಸಂಗೀತ ವೈಭವ

ಉಪೇಂದ್ರ ಮತ್ತು ಗುರುಕಿರಣ್ ಕಾಂಬಿನೇಷನ್ ನ 'ಎ' ಮತ್ತು 'ಉಪೇಂದ್ರ' ಚಿತ್ರಗಳ ಸಾಲುಗಳು ಗುರುಕಿರಣ್ ಕಂಠಸಿರಿಯಲ್ಲಿ ಮೂಡಿಬಂತು. ಬರಿ ಓಳು, ಮಸ್ತ್ ಮಸ್ತ್ ಹುಡುಗಿ ಬಂದ್ಳು ಅಂತ ಗುರು ಮತ್ತೊಮ್ಮೆ ಹೇಳಿ ರಂಜಿಸಿದರು. ಸ್ಟೇಜ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಜನರ ಮಧ್ಯಕ್ಕೆ ಶಿಫ್ಟ್ ಆಗಿತ್ತು.

ದ್ರೋಣಾಚಾರ್ಯ ಕಾಶಿನಾಥ್ ಯೋಚ್ನೆ ಮಾಡಲ್ವಂತೆ

ದ್ರೋಣಾಚಾರ್ಯ ಕಾಶಿನಾಥ್ ಯೋಚ್ನೆ ಮಾಡಲ್ವಂತೆ

ನೀವು ಏನೇ ಮಾಡ್ಬೇಕಿದ್ರೂ ಯೋಚ್ನೆ ಮಾಡ್ಬೇಡಿ, ನಿಮ್ಮಷ್ಟಕ್ಕೆ ನೀವು ಮಾಡಿ, ಅದರಷ್ಟಕ್ಕೆ ಅದಾಗುತ್ತದೆ ಎಂಬ ಕಾಶಿನಾಥ್ ಮಾತಿಗೆ ಎಲ್ಲರೂ ದಂಗು. ನೀವ್ಯಾಕೆ ಸಿನ್ಮಾ ಮಾಡಲ್ಲ ಅಂದಿದಕ್ಕೆ ಭೀಮ, ಅರ್ಜುನರನ್ನು ತರಬೇತಿ ನೀಡಿ ಕಳಿಸಿದ್ದೇನೆ ಅವರೆ ಎಲ್ಲಾ ನೋಡ್ಕೋತಾರೆ ಅಂದ್ರು ಕಾಶಿನಾಥ್.

ರಮೇಶ್ ಅರವಿಂದ್ ನಾನು? ನೀನು?

ರಮೇಶ್ ಅರವಿಂದ್ ನಾನು? ನೀನು?

ನಮ್ಮೊಳಗೆ ಎರಡು ನಾನುಗಳಿರುತ್ತವೆ. ಒಂದು ಒಳ್ಳೆ ನಾನು, ಇನ್ನೊಂದು ಕೆಟ್ಟ ನಾನು, ಆದ್ರೆ ನೀನು ದಲ್ಲಿ ಒಂದೇ, ಕಣ್ಣು ನನ್ನನ್ನು ನೋಡಲ್ಲ, ನಿಮ್ಮನ್ನು ನೋಡುತ್ತದೆ, ನೀನುನೇ ಮುಖ್ಯ, ನಾನಲ್ಲ. ಇದನ್ನೇ ಇದನ್ನಿಟ್ಟುಕೊಂಡೆ ಉಪ್ಪಿ ಸಿನಿಮಾ ಮಾಡಿದ್ದಾರೆ ಎಂಬ ರಮೇಶ್ ಅರವಿಂದ್ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.

ಮಿಮಿಕ್ರಿ ದಯಾನಂದ್ ಗೇನು ಬೇಕು?

ಮಿಮಿಕ್ರಿ ದಯಾನಂದ್ ಗೇನು ಬೇಕು?

ಉಪೇಂದ್ರ ಅವರಿಗೆ ಹಿಟ್ ಬೇಕು, ಮಾಧ್ಯಮದವರಿಗೆ ಟಿಆರ್ ಪಿ ಬೇಕು, ಪ್ರಸರಣ ಬೇಕು, ಅದು ಬೇಕು, ಇದು ಬೇಕು ಹೌದು ಎಲ್ಲಾ ಬೇಕು, ಬೇಕು ಎನ್ನುತ್ತಲೇ ಪಕ್ಕಾ ಕುಡುಕರ ಶೈಲಿಯಲ್ಲೇ ನಿರಂತರವಾಗಿ ಡೈಲಾಗ್ ಉದುರಿಸಿದ ಮಿಮಿಕ್ರಿ ದಯಾನಂದ್ ಮೆಚ್ಚುಗೆ ಪಡ್ಕೊಂಡ್ರು.

ಹರಿಪ್ರಕಾಶ್ ಕೋಣೆಮನೆ ನೃತ್ಯ

ಹರಿಪ್ರಕಾಶ್ ಕೋಣೆಮನೆ ನೃತ್ಯ

ಶಾರ್ಟ್ ಆಂಡ್ ಸ್ವೀಟಾಗೆ ಹಾಡೊಂದನ್ನು ಬಿಡುಗಡೆ ಮಾಡಿದ ವಿಜಯವಾಣಿ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಹ ಎರಡು ಹೆಜ್ಜೆ ಹಾಕಿದರು. ಸಂಯುಕ್ತ ಕರ್ನಾಟಕದ ಸಂಪಾದಕರಾದ ಜಗನ್ನಾಥ್ ಸಹ ಉಪ್ಪಿ 2 ಗೀತೆಯನ್ನು ಲೋಕಾರ್ಪಣೆ ಮಾಡಿದರು.

ರವಿ ಹೆಗಡೆ ಡ್ಯಾನ್ಸ್

ರವಿ ಹೆಗಡೆ ಡ್ಯಾನ್ಸ್

ಹಾಡೊಂದನ್ನು ಬಿಡುಗಡೆ ಮಾಡಲು ವೇದಿಕೆ ಏರಿದ್ದು ಉದಯವಾಣಿ ಪ್ರಧಾನ ಸಂಪಾದಕ ರವಿ ಹೆಗಡೆ. ರವಿ ಹೆಗಡೆಯವರ ಬಳಿಯೂ ಗುರುಕಿರಣ್ ಎರಡು ಸ್ಟೆಪ್ಸ್ ಹಾಕಿಸಿಯೇ ಬಿಟ್ಟರು.

ಪ್ರಿಯಾಂಕಾ ಝಲಕ್

ಪ್ರಿಯಾಂಕಾ ಝಲಕ್

ಪುನೀತ್ ರಾಜ್ ಕುಮಾರ್ ಕಂಠದಲ್ಲಿ ಮೂಡಿಬಂದಿರುವ ಉಪ್ಪಿ-2 ಟೈಟಲ್ ಸಾಂಗ್ ಅನ್ನು ಸ್ವತಃ ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು. ನಂತರ ಉಪೇಂದ್ರ ಆದಿಯಾಗಿ ಎಲ್ಲರೂ ನೃತ್ಯ ಮಾಡುವ ಮೂಲಕ ಧ್ವನಿಸುರುಳಿ ಕಾರ್ಯಕ್ರಮಕ್ಕೆ ವಿರಾಮ ಹಾಕಿದರು.

More from Filmibeat

English summary
Kannada Actor Upendra directorial 'Uppi-2' audio has launched on Friday July. 17. The Highlights of 'Uppi-2' audio release function.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X