»   » ಉಪೇಂದ್ರ ಚಿತ್ರ ಜಪಾನ್‌ನ ಬುದ್ಧಿ ಜೀವಿಗಳಿಗೆ, ಚಿತ್ರೋದ್ಯಮಿಗಳಿಗೆ ಇಷ್ಟವಾಗಿದೆ. ನಲುವತ್ತು ದೇಶಗಳಿಂದ ಬಂದ ಅನೇಕಾನೇಕ ಚಿತ್ರಗಳ ಪೈಕಿ most discussed

ಉಪೇಂದ್ರ ಚಿತ್ರ ಜಪಾನ್‌ನ ಬುದ್ಧಿ ಜೀವಿಗಳಿಗೆ, ಚಿತ್ರೋದ್ಯಮಿಗಳಿಗೆ ಇಷ್ಟವಾಗಿದೆ. ನಲುವತ್ತು ದೇಶಗಳಿಂದ ಬಂದ ಅನೇಕಾನೇಕ ಚಿತ್ರಗಳ ಪೈಕಿ most discussed

Subscribe to Filmibeat Kannada

ಜಪಾನ್‌ನ ಯುಬಾರಿ (Ubari) ಚಿತ್ರ ಪ್ರೇಮಿಗಳ ಸ್ವರ್ಗ. ಟೋಕಿಯೋ ಬಿಟ್ಟರೆ ಹೆಚ್ಚಿನ ಚಿತ್ರೋತ್ಸವಗಳು ನಡೆಯುವುದು ಯುಬಾರಿಯಲ್ಲೇ. ಜಗತ್ತಿನ ಬೇರೆ ಬೇರೆ ದೇಶಗಳ ಚಿತ್ರಗಳು ಅಲ್ಲಿ ಪ್ರದರ್ಶನ ಕಾಣುತ್ತವೆ. ಜನ ಚಿತ್ರ ನೋಡಿ ಚರ್ಚೆ ಮಾಡುತ್ತಾರೆ. ನಿರ್ದೇಶಕರನ್ನು ಭೇಟಿಯಾಗುತ್ತಾರೆ. ಮಾತುಕತೆ ನಡೆಯುತ್ತದೆ. ತಂತ್ರಜ್ಞಾನ, ಪ್ರತಿಭೆಯ ಕೊಡುಕೊಳ್ಳುವಿಕೆ ನಡೆಯುತ್ತಿದೆ.

ಈ ಬಾರಿ ಯುಬಾರಿ ಚಲನಚಿತ್ರೋತ್ಸವಕ್ಕೆ ಭಾರತದಿಂದ ಹೋದ ಚಿತ್ರ - ಉಪೇಂದ್ರ. ಭಾರತದ ನಿರ್ದೇಶಕ ಉಪೇಂದ್ರ. ಕಲಾವಿದ ಉಪೇಂದ್ರ.

ಹೌದು. ಉಪೇಂದ್ರ ಚಿತ್ರ ಜಪಾನ್‌ನ ಬುದ್ಧಿ ಜೀವಿಗಳಿಗೆ, ಚಿತ್ರೋದ್ಯಮಿಗಳಿಗೆ ಇಷ್ಟವಾಗಿದೆ. ನಲುವತ್ತು ದೇಶಗಳಿಂದ ಬಂದ ಅನೇಕಾನೇಕ ಚಿತ್ರಗಳ ಪೈಕಿ most discussed ಚಿತ್ರ ಉಪೇಂದ್ರ. ಅದು ಸ್ಪರ್ಧೆಯಲ್ಲ. ಸಹೃದಯರ ವೀಕ್ಷಣೆ ಅಷ್ಟೆ . ಸ್ಪರ್ಧೆಯಾದರೆ ಅಲ್ಲಿ ಲಾಬಿಯೂ ಇರುತ್ತದೆ. ಆದರೆ ಪ್ರದರ್ಶನಕ್ಕೆ ಲಾಬಿಯಿಲ್ಲ. ಲಾಭ ಅಷ್ಟೆ.

ಜಪಾನ್‌ನಲ್ಲಿ ನಡೆದ ಉಪೇಂದ್ರೋತ್ಸವದ ಹೈಲೈಟ್‌ ಇದು.

- ಉಪೇಂದ್ರ ಸಿನಿಮಾದಲ್ಲಿ ಎಂಟ್ರಿ ಆಗುತ್ತಿದ್ದಂತೆ ಇಲ್ಲಿಯ ಅಭಿಮಾನಿಗಳಿಂದ ಸಿಳ್ಳೆ ಕೇಳಿ ಬಂತು.

- ಒಬ್ಬರು ವಿತರಕರು ಆ ಚಿತ್ರವನ್ನು ಜಪಾನ್‌ ಆದ್ಯಂತವಾಗಿ ಪ್ರದರ್ಶಿಸುವುದಾಗಿ ಹೇಳಿದರು. 2.50 ಲಕ್ಷ ರೂಪಾಯಿಗೆ ಚಿತ್ರದ ಹಕ್ಕುಗಳು ಮಾರಾಟವಾದವು.

- ಅಭಿಮಾನಿಗಳು ಆಟೋಗ್ರಾಫ್‌ ಹಾಕಿಸಿಕೊಂಡರು.

- ಉಪೇಂದ್ರ ಚಿತ್ರದ ಬ್ಯಾನರ್‌ಗಳು ಎಲ್ಲೆಲ್ಲೂ ರಾರಾಜಿಸಿದವು.

ಪ್ರದರ್ಶನದ ನಂತರ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಅಲ್ಲಿ ಕೇಳಿದ ಪ್ರಶ್ನೆಗಳು ಕೂಡ ಕುತೂಹಲಕಾರಿಯಾಗಿದ್ದವು.

- ಉಪೇಂದ್ರ ಚಿತ್ರ ಭಾರತೀಯ ಸಮಾಜದ ಪ್ರತಿಬಿಂಬವೇ ಅಥವಾ ನಿಮ್ಮೊಳಗಿನ ಅಶಾಂತ ವ್ಯಕ್ತಿಯ ರೂಪಾಂತರವೇ?

- ಚಿತ್ರದ ಕೊನೆಯಲ್ಲಿ ನಾಯಕ ಎಲ್ಲರನ್ನೂ ಬಿಟ್ಟು ದೂರ ನಡೆದುಹೋಗುತ್ತಾನಲ್ಲ . ಅದನ್ನು ಚಿತ್ರಿಸುವಾಗ ನಿಮ್ಮ ಮನಸ್ಸಿನಲ್ಲಿ ಬುದ್ಧನ ಚಿತ್ರ ಇತ್ತೇ ? ಬುದ್ಧನಿಂದ ನೀವು ಪ್ರಭಾವಿತರಾಗಿದ್ದೀರಾ ?

- ಕನ್ನಡ ಚಿತ್ರರಂಗ ತಾಂತ್ರಿಕವಾಗಿ ಇಷ್ಟೊಂದು ಮುಂದುವರಿದಿದೆಯೇ ?

ಅಂದ ಹಾಗೆ ಚಿತ್ರವನ್ನು ಅವರವರ ಭಾವಕ್ಕೆ ತಕ್ಕಂತೆ ಅಲ್ಲಿಯ ಮಂದಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರಿಗೆ ಅದು ತಾಂತ್ರಿಕವಾಗಿ ಇಷ್ಟವಾದರೆ, ಮತ್ತೆ ಕೆಲವರಿಗೆ ಚಿತ್ರದ ವೇಗ ಖುಷಿಕೊಟ್ಟಿದೆ. ಮನರಂಜನೆಗಾಗಿ ಕೆಲವರು ಮೆಚ್ಚಿಕೊಂಡರೆ, ಅದರ ಸಂದೇಶಕ್ಕಾಗಿ ಇಷ್ಟ ಪಟ್ಟಿದ್ದಾರೆ.

ಜಪಾನೀಯರಿಗೆ ಡಬ್ಬಿಂಗ್‌ ಅಂದರೆ ಅಲರ್ಜಿ. ಅವರ ಚಿತ್ರರಂಗವೂ ಅಂಥ ಸುಸ್ಥಿತಿಯಲ್ಲೇನಿಲ್ಲ. ದೇಶದ ಬೇರೆ ಬೇರೆ ಕಡೆ ತಯಾರಾದ ಚಿತ್ರಗಳನ್ನು ಅವರು ಸಬ್‌ಟೈಟಲ್‌ ಹಾಕಿ ನೋಡುತ್ತಾರೆ. ಉಪೇಂದ್ರ ಚಿತ್ರವನ್ನು ಅವರು ಇಷ್ಟ ಪಟ್ಟಿದ್ದೂ ಸಬ್‌ಟೈಟಲ್‌ನೊಂದಿಗೇ. ಉಪೇಂದ್ರ ಚಿತ್ರದ ವೇಗಕ್ಕೆ ಸಬ್‌ಟೈಟಲ್‌ ಹಾಕುವುದೂ ಕಷ್ಟವೆ. ಆದರೆ ಜನ ಮೆಚ್ಚಿಕೊಂಡಿದ್ದಾರೆ.

ಉಪೇಂದ್ರ ಅವರನ್ನು ಜಪಾನಿಗೆ ಆಹ್ವಾನಿಸಿದ್ದಾರಂತೆ. ಇಲ್ಲೇ ಒಂದು ಸಿನಿಮಾ ಮಾಡಿ. ಎಲ್ಲವನ್ನೂ ಉಚಿತವಾಗಿ ಒದಗಿಸುತ್ತೇವೆ ಎಂದಿದ್ದಾರಂತೆ. ಹಾಗೇನಾದರೂ ಆದರೆ ಉಪೇಂದ್ರ, ಜಪಾನ್‌ನಲ್ಲೂ ಸ್ಟಾರ್‌ ಆಗುತ್ತಾರೆ. ಕನ್ನಡದಿಂದ ಜಪಾನ್‌ಗೆ ಹೋಗಿ ಗೆದ್ದ ಏಕೈಕ ನಾಯಕ ಎಂಬ ಖ್ಯಾತಿಗಂತೂ ಅವರು ಪಕ್ಕಾಗಿದ್ದಾರೆ.

ಕಂಗ್ರಾಟ್ಸ್‌ ಉಪ್ಪಿ!

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada