»   » ತತ್ವಜ್ಞಾನಕ್ಕೆ ಉಪ್ಪಿ ಉಪ್ಪು-ಖಾರ

ತತ್ವಜ್ಞಾನಕ್ಕೆ ಉಪ್ಪಿ ಉಪ್ಪು-ಖಾರ

Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್‌ ಉಂಟು ಮಾಡಿದ ಉಪೇಂದ್ರರ ‘ಎ’ ಚಿತ್ರವನ್ನು ಕೊಂಡಾಡಿದವರೂ ಇದ್ದಾರೆ, ‘ಉಪೇಂದ್ರ’ ಚಿತ್ರವನ್ನು ಬಾಯಿತುಂಬ ಬೈದವರೂ ಇದ್ದಾರೆ. ಅದೇನೇ ಇರಲಿ ಈ ಚಿತ್ರಗಳ ನಿರ್ದೇಶಕನಾಗಿ, ನಟನಾಗಿ ಮಿಂಚಿದ, ಮಿಂಚುತ್ತಿರುವ ಉಪ್ಪಿಗೆ ಗೊತ್ತು ಗುರಿ ಏನೂ ಇಲ್ಲವಂತೆ. ಅವರೇ ಹೇಳಿಕೊಂಡಂತೆ ಅವರಿಗೆ ಒಂದು ನಿರ್ದಿಷ್ಟ ಗುರಿ ಎಂಬುದೇ ಇಲ್ಲ. ಗುರಿ ಏನೆಂಬುದು ಗೊತ್ತಿದ್ದರೂ ಅವರು ಅದನ್ನು (ಒಕೇಮಾಟ) ಒಂದೇ ಮಾತಿನಲ್ಲಿ ಹೇಳುವುದಿಲ್ಲವಂತೆ.

ಅಕಸ್ಮಾತ್‌ ಅವರು ಹೇಳಿದರೆ ನಾವದನ್ನು ಜೋಕು ಎಂದು ಕೇಳಿ ನಕ್ಕು ಬಿಡುತ್ತೇವಂತೆ. ನಮ್ಮ ಮುಂದೆ ನಗೆಪಾಟಲಿಗೆ ಗುರಿಯಾಗಲು ಉಪ್ಪಿಗೆ ಇಚ್ಛೆ ಇಲ್ಲ. ಹೀಗಾಗಿ ಅವರ ಗುರಿ ಏನೆಂಬುದನ್ನು ತಮ್ಮೊಳಗೆ ಮುಚ್ಚಿಟ್ಟುಕೊಂಡು, ತಮಗೆ ಒಂದು ಗುರಿಯೇ ಇಲ್ಲ ಎಂದೇ ಹೇಳುತ್ತಾರೆ.

ಗುರಿ ಏನೆಂದು ಹೇಳದಿದ್ದರೂ ಅದನ್ನು ಮಾಡುತ್ತೇನೆ, ಮಾಡಿ ತೋರಿಸುತ್ತೇನೆ ಎನ್ನುವ ಉಪ್ಪಿ ತಾವು ಚಿತ್ರರಂಗಕ್ಕೆ ನಿರ್ದೇಶಕನಾಗಲೂ ಬರಲಿಲ್ಲ. ನಟನಾಗಲೂ ಬರಲಿಲ್ಲ . ಆದರೆ ಈ ಎರಡೂ ಆಗಿದ್ದೇನೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ. ಮತ್ತೊಂದು ವಿಷಯ ನಿಮಗೆ ಗೊತ್ತೆ ? ಈಗ ಏನೆಲ್ಲಾ ನಡೆದಿದೆಯೋ ಅದು ತಮ್ಮ ಪುರೋಭಿವೃದ್ಧಿಯ ಮುಂದಿನ ಮೆಟ್ಟಿಲು ಎನ್ನುವ ಉಪ್ಪಿ ತತ್ವಜ್ಞಾನಿಯಾಗಲೂ ಹೊರಟಂತಿದೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada