For Quick Alerts
  ALLOW NOTIFICATIONS  
  For Daily Alerts

  ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಉಪ್ಪಿನ ಕಾಗದ' ಪ್ರದರ್ಶನ

  |

  ಬಿ.ಸುರೇಶ್ ನಿರ್ದೇಶನದ 'ಉಪ್ಪಿನ ಕಾಗದ' ಸಿನಿಮಾ 'ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಪ್ರದರ್ಶನವಾಗಲಿದೆ. ಈ ವಿಷಯವನ್ನು ಸ್ವತಃ ಬಿ.ಸುರೇಶ್ ಅವರು ತಮ್ಮ ಫೇಸ್ ಬುಕ್ ಪುಟದ ಮೂಲಕ ಹಂಚಿಕೊಂಡಿದ್ದಾರೆ.

  ''ಇದೇ ಶನಿವಾರ (ಮೇ 27) 'ಉಪ್ಪಿನ ಕಾಗದ' ಸಿನಿಮಾ ದೆಹಲಿಯ ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಇನ್ನು ಪ್ರದರ್ಶನದ ವಿವರಗಳು ಹ್ಯಾಬಿಟಾಟ್ ನಲ್ಲಿಯೇ ಸಿಗಲಿದೆ'' ಎಂದು ದೆಹಲಿಯಲ್ಲಿರುವ ಕನ್ನಡಾಭಿಮಾನಿಗಳನ್ನು ಬಿ.ಸುರೇಶ್ ಆಹ್ವಾನಿಸಿದ್ದಾರೆ.

  9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಈಗಾಗಲೇ ಅನೇಕ ಚಲನಚಿತ್ರೋತ್ಸವಗಳಲ್ಲಿ 'ಉಪ್ಪಿನ ಕಾಗದ' ಸಿನಿಮಾ ಪ್ರದರ್ಶನಗೊಂಡಿದೆ. ಈಗ 'ಹ್ಯಾಬಿಟಾಟ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿರುವುದು ದೆಹಲಿಯ ಕನ್ನಡಿಗರಿಗೆ ಸಿನಿಮಾ ನೋಡುವ ಸುವರ್ಣಾವಕಾಶ ಸಿಕ್ಕಿದೆ.

  ಅಂದ್ಹಾಗೆ, ಬಿ.ಸುರೇಶ್ ನಿರ್ದೇಶನದ 'ಉಪ್ಪಿನ ಕಾಗದ' ಚಿತ್ರದಲ್ಲಿ ಟಿ.ಎಸ್.ನಾಗಾಭರಣ, ಮಂಡ್ಯ ರಮೇಶ್, ಮುರಳಿ ಶಂಗೇರಿ, ಅಪೂರ್ವ ಭಾರದ್ವಾಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ಇದೆ.

  English summary
  B.Suresh's kannada movie 'Uppina Kagada' to screen in Habitat International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X