'ಕಾಂತಾರ 2' ಚಿತ್ರದಲ್ಲಿ ಐರಾವತ ನಟಿ ನಟನೆ? ರಿಷಬ್ ಜತೆಗಿನ ಫೋಟೊ ವೈರಲ್!

ಕಳೆದ ವರ್ಷ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಲೂಟಿ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಬೃಹತ್ ಬಜೆಟ್, ದೊಡ್ಡ ದೊಡ್ಡ ಹೀರೊಗಳು, ವೈಭವದ ಸೆಟ್‌ಗಳ ಅಗತ್ಯವೇನಿಲ್ಲ, ಕೇವಲ ಚಿತ್ರದ ಕಂಟೆಂಟ್ ಚೆನ್ನಾಗಿದ್ದರೆ ಸಾಕು ಎಂಬುದನ್ನು ಸಾಬೀತುಪಡಿಸಿದ ಕಾಂತಾರ ಚಿತ್ರದ ಎರಡನೇ ಭಾಗದ ಮೇಲೆ ಇದೀಗ ಕನ್ನಡ ಸಿನಿ ರಸಿಕರು ಮಾತ್ರವಲ್ಲದೇ ಪರಭಾಷಾ ಸಿನಿ ರಸಿಕರ ಗಮನವೂ ಸಹ ನೆಟ್ಟಿದೆ.

ಹೌದು, ಕಾಂತಾರ ಚಿತ್ರದ ಎರಡನೇ ಭಾಗ 'ಕಾಂತಾರ 2' ಬರಲಿದೆಯಂತೆ ಎಂದು ಅಂತೆಕಂತೆಗಳ ಮೂಲಕ ಶುರುವಾದ ಈ ಸುದ್ದಿ ಇದೀಗ ನಿಜವಾಗಿದೆ. ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ 2 ಬರಲಿದೆ, ಸಿದ್ಧತೆಗಳು ನಡೆಯುತ್ತಿವೆ ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಕಥೆ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂಬ ಸುದ್ದಿ ಇದೆ. ಇನ್ನು ಕಾಂತಾರ ಶತದಿನೋತ್ಸವದ ಕಾರ್ಯಕ್ರಮದಲ್ಲಿ ಕಾಂತಾರ 2 ಚಿತ್ರವು ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರಲಿದೆ ಎಂಬುದನ್ನು ತಿಳಿಸಿದ್ದರು. ಅಂದರೆ ಕಾಂತಾರ ಚಿತ್ರದಲ್ಲಿನ ಕಥೆಗೂ ಹಿಂದೆ ಏನಾಗಿತ್ತು ಎಂಬುದನ್ನು ಚಿತ್ರ ತಿಳಿಸಲಿದೆ ಎಂಬುದನ್ನು ರಿಷಬ್ ಶೆಟ್ಟಿ ತಿಳಿಸಿ ಕುತೂಹಲ ಹೆಚ್ಚಾಗುವಂತೆ ಮಾಡಿದ್ದರು. ಇನ್ನು ಈ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಡದಿದ್ದರೂ ಯಾವ ಪಾತ್ರಗಳು ಇರಬಹುದು ಎಂಬುದನ್ನು ಸಿನಿ ರಸಿಕರು ಊಹಿಸತೊಡಗಿದ್ದರು. ಹೀಗಿರುವಾಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ರಿಷಬ್ ಶೆಟ್ಟಿ ಜತೆಗೆ ಫೋಟೊ ಹಂಚಿಕೊಳ್ಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ.

ರಿಷಬ್ ಜತೆ ಊರ್ವಶಿ ರೌಟೆಲಾ

ರಿಷಬ್ ಜತೆ ಊರ್ವಶಿ ರೌಟೆಲಾ

ಬಾಲಿವುಡ್‌ ನಟಿ ಊರ್ವಶಿ ರೌಟೆಲಾ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ರಿಷಬ್ ಶೆಟ್ಟಿ ಜತೆಗಿ ಪೋಟೊ ಹಂಚಿಕೊಂಡು ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಖಾತೆಗಳನ್ನು ಟ್ಯಾಗ್ ಮಾಡಿ 'ಕಾಂತಾರ 2 ಲೋಡಿಂಗ್' ಎಂದು ಬರೆದುಕೊಂಡಿದ್ದಾರೆ. ಸದ್ಯ ನಟಿ ಬರೆದುಕೊಂಡಿರುವ ಈ ಸಾಲುಗಳನ್ನು ನೋಡಿ ಸಿನಿ ರಸಿಕರು ಊರ್ವಶಿ ರೌಟೆಲಾ ಏಕೆ ಕಾಂತಾರ 2 ಬಗ್ಗೆ ಬರೆದುಕೊಂಡಿದ್ದಾರೆ, ಚಿತ್ರದಲ್ಲಿ ಈಕೆ ಪಾತ್ರವನ್ನೇನಾದರೂ ನಿರ್ವಹಿಸುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಗಿಮಿಕ್ ಪೋಸ್ಟ್!

ಗಿಮಿಕ್ ಪೋಸ್ಟ್!

ಇನ್ನು ಊರ್ವಶಿ ರೌಟೆಲಾ ಸಾಮಾಜಿಕ ಜಾಲತಾಣದಲ್ಲಿ ಇಂತಹ ಗಿಮಿಕ್ ಪೋಸ್ಟ್‌ಗಳನ್ನು ಹಂಚಿಕೊಂಡು ನೆಟ್ಟಿಗರ ತಲೆಗೆ ಹುಳಬಿಡುವುದು ಹೊಸದೇನಲ್ಲ. ಈ ಹಿಂದೆಯೂ ಕ್ರಿಕೆಟಿಗ ರಿಷಬ್ ಪಂತ್ ವಿಚಾರದಲ್ಲಿ ಆತನ ಹೆಸರನ್ನು ಎಲ್ಲೂ ಉಲ್ಲೇಖಸದೇ ಪೋಸ್ಟ್ ಮಾಡಿ ಕಾಲೆಳೆದಿದ್ದರು ಹಾಗೂ ಇದು ದೊಡ್ಡ ಮಟ್ಟದ ವಿವಾದಕ್ಕೂ ಸಹ ಕಾರಣವಾಗಿತ್ತು. ಹೀಗಾಗಿ ಕೆಲವರು ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ಫೋಟೊಗೆ ಗೊಂದಲ ಹುಟ್ಟಿಸುವ ಬರಹವನ್ನು ಊರ್ವಶಿ ರೌಟೆಲಾ ಬರೆದುಕೊಂಡಿರುತ್ತಾರೆ ಅಷ್ಟೇ ಎಂದು ಹೇಳುತ್ತಿದ್ದಾರೆ.

ಐರಾವತದಲ್ಲಿ ನಟನೆ

ಐರಾವತದಲ್ಲಿ ನಟನೆ

2013ರಲ್ಲಿ ತೆರೆಕಂಡ ಸಿಂಗ್ ಸಾಬ್ ದ ಗ್ರೇಟ್ ಎಂಬ ಹಿಂದಿ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ಸಿನಿ ಜರ್ನಿಯನ್ನು ಆರಂಭಿಸಿದ್ದ ನಟಿ ಊರ್ವಶಿ ರೌಟೆಲಾ 2015ರಲ್ಲಿ ತೆರೆಕಂಡ ದರ್ಶನ್ ನಟನೆಯ ಐರಾವತ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇದು ಈಕೆ ವೃತ್ತಿ ಜೀವನದ ಎರಡನೇ ಸಿನಿಮಾವಾಗಿದ್ದು, ಬಳಿಕ ಏಳೆಂಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ತೆರೆಕಂಡ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದ ಊರ್ವಶಿ ರೌಟೆಲಾ ಮತ್ತೆ ದಕ್ಷಿಣ ಇಂಡಸ್ಟ್ರಿಗಳತ್ತ ಮುಖ ಮಾಡಿದ್ದು, ಮತ್ತೆರಡು ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.

More from Filmibeat

English summary
Urvashi Rautela shared a pic with Rishab Shetty with Kantara 2 loading caption. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X