twitter
    For Quick Alerts
    ALLOW NOTIFICATIONS  
    For Daily Alerts

    ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ರಿಯಲ್ ಸ್ಟಾರ್ ಉಪೇಂದ್ರ

    |

    ಚುನಾವಣ ಆಯೋಗ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅನರ್ಹ ಶಾಸಕರಿಂದ ಖಾಲಿಯಾಗಿರುವ 17 ಕ್ಷೇತ್ರಗಳ ಪೈಕಿ ಆರ್.ಆರ್ ನಗರ ಹಾಗೂ ಮಸ್ಕಿ ಕ್ಷೇತ್ರ ಬಿಟ್ಟು ಉಳಿದ 15 ಕ್ಷೇತ್ರದಲ್ಲಿ ಅಕ್ಟೋಬರ್ 21 ರಂದು ಬೈ ಎಲೆಕ್ಷನ್ ನಡೆಯಲಿದೆ.

    ಈ ಉಪಚುನಾವಣೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕೂಡ ಸ್ಪರ್ಧೆ ಮಾಡಲಿದ್ದಾರೆ ಎಂದು ಸ್ವತಃ ಉಪೇಂದ್ರ ಘೋಷಿಸಿದ್ದಾರೆ.

    Big Breaking: ಅನರ್ಹ ಶಾಸಕರು ಉಪ ಚುನಾವಣೆ ಸರ್ಧಿಸಲು ಅವಕಾಶವಿಲ್ಲ

    ''ಇದೇ ಅಕ್ಟೋಬರ್ 21 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ... ಪ್ರಜಾಕೀಯದ ವಿಚಾರಗಳಿಗೆ ತಮ್ಮ ಅಮೂಲ್ಯವಾದ ಮತ ಮೀಸಲಾಗಿರಿಸಿ..'' ಎಂದು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

    Uttama Prajaakeeya Party Candidates Will Contest In Bye Elections

    ಆರ್.ಆರ್ ನಗರ, ಮಸ್ಕಿ ಕ್ಷೇತ್ರದಲ್ಲಿ ಉಪಚುನಾವಣೆ ಇಲ್ಲ: ಕಾರಣವೇನು?

    ಯುಪಿಪಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿರುವ ಉಪೇಂದ್ರ, ತಾವು ಸ್ಪರ್ಧೆ ಮಾಡುವುದರ ಬಗ್ಗೆ ಯಾವುದೇ ತೀರ್ಮಾನ ತಿಳಿಸಿಲ್ಲ. ಬೈ ಎಲೆಕ್ಷನ್ ನಡೆಯುವ ಯಾವೂದಾರೂ ಒಂದು ಕ್ಷೇತ್ರದಲ್ಲಿ ಉಪೇಂದ್ರ ಸ್ಪರ್ಧೆ ಮಾಡಬಹುದು ಎಂಬ ಚರ್ಚೆ ಮಾತ್ರ ಅಭಿಮಾನಿಗಳಲ್ಲಿ ಉಳಿದುಕೊಂಡಿದೆ.

    ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ಆದರೆ, ಒಂದೇ ಒಂದು ಸೀಟು ಕೂಡ ಗೆಲ್ಲಲಿಲ್ಲ. ಇದೀಗ, ಉಪಚುನಾವಣೆಯಲ್ಲಿ ಮತ್ತೆ ಭರವಸೆ ಇಟ್ಟು ಸ್ಪರ್ಧಿಗಳನ್ನ ಕಣಕ್ಕೆ ಇಳಿಸಲು ತೀರ್ಮಾನಿಸಿದ್ದಾರೆ ಪ್ರಜಾಕೀಯ ನಾಯಕ.

    English summary
    In the upcoming bye elections on oct 21 Uttama prajaakeeya party (UPP) candidates will contest in all the 15 constituencies.
    Sunday, September 22, 2019, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X