ಉತ್ತರ ಕರ್ನಾಟಕದಲ್ಲಿ ಮಹಾಮಳೆ: 'ಕುರುಕ್ಷೇತ್ರ'ಕ್ಕೆ ಭಾರಿ ನಷ್ಟ.!

Recommended Video

Kurukshetra Movie: ಕುರುಕ್ಷೇತ್ರದ ಅಬ್ಬರಕ್ಕೆ ಬ್ರೇಕ್ ಹಾಕಿದ ಉತ್ತರಕರ್ನಾಟಕದ ಸಂಕಷ್ಟ

ಎಲ್ಲವೂ ಚೆನ್ನಾಗಿದಿದ್ದರೇ ಈ ಸಂದರ್ಭದಲ್ಲಿ ರಾಜ್ಯದಲ್ಲೆಡೆ ಕುರುಕ್ಷೇತ್ರ ಸಿನಿಮಾದ ಅಬ್ಬರ ಆಗಬೇಕಿತ್ತು. ದರ್ಶನ್ ಸಿನಿಮಾ ಬರ್ತಿದೆ ಅಂದ್ರೆ ಒಂದು ವಾರಕ್ಕೆ ಮುಂಚೆಯೇ ಹಬ್ಬ ಮಾಡುವ ಅಭಿಮಾನಿಗಳಿದ್ದಾರೆ. ಆದ್ರೆ, ಅಂತಹ ಅಭಿಮಾನಿಗಳ ಸಂಭ್ರಮಕ್ಕೆ ಮಹಾಮಳೆ ಬ್ರೇಕ್ ಹಾಕಿದೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ರಾಜ್ಯದಲ್ಲಿ ಉಂಟಾಗಿರುವ ಭಾರಿ ಮಳೆಯಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಕೆಲವರು ಮೃತಪಟ್ಟಿದ್ದಾರೆ. ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸಾವಿರಾರು ಜನರು ಮನೆಯಿಲ್ಲದೇ ಗಂಜಿಕೇಂದ್ರಗಳಲ್ಲಿ ನೆಲೆಸುವಂತಾಗಿದೆ.

ಬೆಳಗಾವಿಯಲ್ಲಿ ಭಾರಿ ಮಳೆ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಇಂತಹ ಘನಘೋರ ಪರಿಸ್ಥಿತಿಯಿಂದಾಗಿ ಕುರುಕ್ಷೇತ್ರ ಸಿನಿಮಾಗೂ ಭಾರಿ ಹಿನ್ನಡೆಯಾಗುವ ಸುಳಿವು ಸಿಕ್ಕಿದೆ. ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಗುವ ನಿರೀಕ್ಷೆಯಲ್ಲಿದ್ದ ಚಿತ್ರತಂಡಕ್ಕೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ನಿರಾಸೆ ಎದುರಾಗಬಹುದು. ಇದರಿಂದ ಕುರುಕ್ಷೇತ್ರಕ್ಕೆ ನಷ್ಟವೂ ಆಗಲಿದೆ. ಏನದು? ಮುಂದೆ ಓದಿ....

ಜನರ ಆಸಕ್ತಿ ಕಮ್ಮಿಯಾಗಬಹುದು

ಜನರ ಆಸಕ್ತಿ ಕಮ್ಮಿಯಾಗಬಹುದು

ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸುತ್ತ ಮುತ್ತಾ ಮಳೆ ಬೀಳುತ್ತಿದೆ. ಅದರಲ್ಲೂ ಬೆಳಗಾವಿ ಕಡೆ ಮಹಾಮಳೆ ಬಿದ್ದಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಸಿನಿಮಾಗೆ ಹೋಗುವ ಮನಸ್ಸು ಮತ್ತು ಆಸಕ್ತಿ ಯಾರಿಗೂ ಇರುವುದಿಲ್ಲ. ಸೋ, ಆ ಭಾಗದಲ್ಲಿ ಕುರುಕ್ಷೇತ್ರ ಸಿನಿಮಾ ಸದ್ಯಕ್ಕೆ ನೋಡುವವರ ಸಂಖ್ಯೆ ಕಮ್ಮಿಯಾಗಬಹುದು.

ಕಲೆಕ್ಷನ್ ಮೇಲೆ ಪರಿಣಾಮ

ಕಲೆಕ್ಷನ್ ಮೇಲೆ ಪರಿಣಾಮ

ಜನರೇ ಚಿತ್ರಮಂದಿರಕ್ಕೆ ಬರಲಿಲ್ಲ ಅಂದ್ಮೇಲೆ ಕಲೆಕ್ಷನ್ ಎಲ್ಲಿಂದ ಆಗುತ್ತೆ. ಸೋ, ಉತ್ತರ ಕರ್ನಾಟಕ ಭಾಗ ಮತ್ತು ಕರಾವಳಿ ಭಾಗದ ಕಡೆ ಕುರುಕ್ಷೇತ್ರ ಚಿತ್ರದ ಗಳಿಕೆ ಕಮ್ಮಿಯಾಗುತ್ತೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಹುಶಃ ಇದು ಒಟ್ಟಾರೆ ಗಳಿಕೆಗೂ ಸ್ವಲ್ಪ ಹಿನ್ನಡೆ ತರಬಹುದು.

ನೆರವು ನೀಡಲು ದರ್ಶನ್ ಮನವಿ

ನೆರವು ನೀಡಲು ದರ್ಶನ್ ಮನವಿ

ಸ್ವತಃ ದರ್ಶನ್ ಅವರೇ ನೆರೆ ಸಂತ್ರಸ್ಥರಿಗೆ ಸಹಾಯ ಮಾಡಿ ಎಂದು ತಮ್ಮ ಅಭಿಮಾನಿ ಬಳಗಕ್ಕೆ ಕರೆ ನೀಡಿದ್ದು, ಬಹುಶಃ ಈ ಕೆಲಸದಲ್ಲಿ ಬಹುತೇಕ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಹೀಗಾಗಿ, ಮೊದಲ ದಿನ ಅಥವಾ ಮೊದಲ ಮೂರು ದಿನ ಕುರುಕ್ಷೇತ್ರದ ಸದ್ದು ಆ ಭಾಗದಲ್ಲಿ ಕಾಣಿಸುವುದು ಅನುಮಾನ.

ಬೆಂಗಳೂರು ಸುತ್ತಮುತ್ತಾ ಅಬ್ಬರ

ಬೆಂಗಳೂರು ಸುತ್ತಮುತ್ತಾ ಅಬ್ಬರ

ಮಳೆ ಪ್ರದೇಶಗಳನ್ನ ಬಿಟ್ಟರೇ ಬೇರೆ ಜಿಲ್ಲೆಗಳಲ್ಲಿ ಕುರುಕ್ಷೇತ್ರ ಸಿನಿಮಾ ಅಬ್ಬರಿಸಲಿದೆ. ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ದುರ್ಯೋಧನನ ಎಂಟ್ರಿಯಾಗಲಿದೆ. ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಮೊದಲ ದಿನ ದಾಖಲೆಯ ಕಲೆಕ್ಷನ್ ಆಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.

More from Filmibeat

English summary
Uttara Karnataka Flood Effect On Darshan Kurukshetra movie release. the movie will releasing on this friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X