ಟ್ರಾಫಿಕ್ ನಿಯಮ ಕಾಪಾಡಲು 'KGF' ಮೊರೆ ಹೋದ ಉತ್ತರ ಪ್ರದೇಶ ಪೊಲೀಸರು
Recommended Video
ಒಂದು ಸಿನಿಮಾ ಜನರನ್ನು ಬದಲು ಮಾಡುತ್ತದೆಯೋ ಇಲ್ವೋ.. ಆದರೆ, ಜನರನ್ನು ಆಕರ್ಷಣೆ ಮಾಡುವ ಶಕ್ತಿ ಖಂಡಿತ ಹೊಂದಿದೆ. ಈಗ ಅದನ್ನೇ ಉಪಯೋಗಿಸಿಕೊಂಡು ಉತ್ತರ ಪ್ರದೇಶದ ಪೊಲೀಸರು ಟ್ರಾಫಿಕ್ ನಿಯಮ ಕಾಪಾಡಲು ಮುಂದಾಗಿದ್ದಾರೆ.
ವಿಶೇಷ ಅಂದರೆ, ಉತ್ತರ ಪ್ರದೇಶದ ಪೊಲೀಸರು ಸಂಚಾರಿ ನಿಯಮ ಪಾಲಿಸಲು ಕನ್ನಡದ 'KGF' ಸಿನಿಮಾದ ಟೈಟಲ್ ಅನ್ನು ಬಳಸಿಕೊಂಡಿದ್ದಾರೆ. ಸಂಕೇತಿಕವಾಗಿ 'KGF' ಮೂಲಕ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ.
K - Know the rules (ನಿಯಮ ತಿಳಿದುಕೊಳ್ಳಿ)
G - Grip well (ಹಿಡಿತವಿರಲಿ)
F - Focus (ಒಂದು ಕಡೆ ಗಮನವಿರಲಿ)

ಈ ರೀತಿ 'KGF' ಮೂಲಕ ವಾಹನ ಸವಾರರ ಗಮನ ಸೆಳೆದು, ಅವರಿಗೆ ಸಂಚಾರಿ ನಿಯಮದ ಮೇಲೆ ಅರಿವು ಮೂಡಿಸುತ್ತಿದ್ದಾರೆ. ದೂರದ ಉತ್ತರ ಪ್ರದೇಶದಲ್ಲಿ 'ಕೆಜಿಎಫ್' ಈಗಲೂ ಈ ರೀತಿ ಹವಾ ಮಾಡುತ್ತಿದೆ.

ಬಹು ಭಾಷೆಯಲ್ಲಿ ಬಿಡುಗಡೆಯಾದ 'ಕೆಜಿಎಫ್' ದೇಶಾದ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರಿದೆ. 'ಕೆಜಿಎಫ್ 2' ಸಿನಿಮಾದ ಮೇಲೆ ಉತ್ತರ ಭಾರತದಲ್ಲಿ ದೊಡ್ಡ ನಿರೀಕ್ಷೆ ಇದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಸಂಜಯ್ ದತ್ ಫಸ್ಟ್ ಲುಕ್ ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿದೆ.


Click it and Unblock the Notifications











