ಚಿರಂಜೀವಿ ಪುತ್ರನ ಮೇಲೆ 50 ಕೋಟಿ ವಂಚನೆ ಆರೋಪ
ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ 2 ರಂದು ಬಿಡುಗಡೆಗೆ ಸಜ್ಜಾಗಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಚಿರು ಪುತ್ರ ರಾಮ್ ಚರಣ್ ನಿರ್ಮಾಪಕ ಎನ್ನುವುದು ಗೊತ್ತಿರುವ ಸಂಗತಿ.
ಇದೀಗ, ಸೈರಾ ಚಿತ್ರದ ನಿರ್ಮಾಪಕ ರಾಮ್ ಚರಣ್ ಮೇಲೆ ಉಯ್ಯಾಲವಾಡ ಕುಟುಂಬದ ಸದಸ್ಯರು 50 ಕೋಟಿ ವಂಚನೆ ಆರೋಪ ಮಾಡಿದ್ದಾರೆ. ಸೈರಾ ಸಿನಿಮಾ ಹಿನ್ನೆಲೆ ಉಯ್ಯಾಲವಾಡ ಕುಟುಂಬದ 5ನೇ ಜನರೇಷನ್ ಅವರ 23 ಕುಟುಂಬಗಳಿಗೆ ತಲಾ 2 ಕೋಟಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದರಂತೆ.
ಆದರೆ ಇದುವರೆಗೂ ಯಾರಿಗೂ ಹಣಕೊಟ್ಟಿಲ್ಲ ಎಂದು ಉಯ್ಯಾಲವಾಡ ಕುಟುಂಬದ ಸದಸ್ಯ ದಸ್ತಗಿರಿ ರೆಡ್ಡಿ ದಂಪತಿ ಜ್ಯೂನ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ.

ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧಾರಿತ ಸಿನಿಮಾ ಮಾಡುತ್ತಿದ್ದ ಕಾರಣ, ಅವರ ಕುಟುಂಬದ ಬಳಿ ಕಥೆ ಕೇಳಿಕೊಂಡು, ಅವರದ್ದೇ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ಕೂಡ ಮಾಡಲಾಗಿದೆಯಂತೆ. ಹಾಗಾಗಿ, ಆ ಕುಟುಂಬಗಳಿಗೆ ಪರಿಹಾರ ಧನವಾಗಿ 50 ಕೋಟಿ ನೀಡುವುದಾಗಿ ತಿಳಿಸಿದ್ದರಂತೆ. ಸಿನಿಮಾ ರಿಲೀಸ್ ದಿನ ಹತ್ತಿರವಾಗುತ್ತಿದ್ದರೂ ಹಣ ನೀಡಿಲ್ಲ ಎಂದು ದೂರಿದ್ದಾರೆ.
ಅಂದ್ಹಾಗೆ, ಉಯ್ಯಾಲವಾಡ ನರಸಿಂಹ ರೆಡ್ಡಿ ಆಂಧ್ರದಲ್ಲಿ ಸ್ವಾತಂತ್ರ್ಯ ರಣಕಹಳೆ ಮೊಳಗಿಸಿದ ಮೊಲದ ವೀರಾ ಸೇನಾನಿ ಎಂದು ಹೇಳಲಾಗುತ್ತೆ. ಸುರೇಂದರ್ ರೆಡ್ಡಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಿರಂಜೀವಿ, ಸುದೀಪ್, ಅಮಿತಾಭ್ ಬಚ್ಚನ್, ವಿಜಯ್ ಸೇತಪತಿ, ನಯನತಾರ, ತಮನ್ನಾ, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











