ಬ್ರೇಕಿಂಗ್ ನ್ಯೂಸ್: 'ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ನಿರ್ದೇಶಕ.!
Recommended Video

''ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ನಿರ್ದೇಶಕ.!''
ಹೌದು, 'ಯಜಮಾನ' ಚಿತ್ರಕ್ಕೆ ವಿ.ಹರಿಕೃಷ್ಣ ಬರೀ ಸಂಗೀತ ನಿರ್ದೇಶಕ ಮಾತ್ರ ಅಲ್ಲ. ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.
ಅರೇ... 'ಯಜಮಾನ' ಚಿತ್ರಕ್ಕೆ ಪಿ.ಕುಮಾರ್ ನಿರ್ದೇಶಕ ಅಲ್ವಾ ಅಂತ ನೀವು ಬಾಯಿ ಮೇಲೆ ಬೆರಳಿಡಬಹುದು. ಆದ್ರೆ, ಪಿ.ಕುಮಾರ್ ಗಿಂತ ಹೆಚ್ಚಾಗಿ ನಿರ್ದೇಶನದ ಕೆಲಸಗಳನ್ನು ಅಚ್ಚುಕಟ್ಟಾಗಿ ಪಾಲಿಸಿದವರು ವಿ.ಹರಿಕೃಷ್ಣ. ಹೀಗಾಗಿ 'ಯಜಮಾನ' ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ವಿ.ಹರಿಕೃಷ್ಣಗೆ 'ಡೈರೆಕ್ಟರ್' ಸ್ಥಾನ ನೀಡಲಾಗಿದೆ.
'ಯಜಮಾನ' ಸಿನಿಮಾ ಸೆಟ್ಟೇರಿದಾಗ ವಿ.ಹರಿಕೃಷ್ಣ ಅವರಿಗೆ 'ಕ್ರಿಯೇಟಿವ್ ಹೆಡ್' ಎಂಬ ಸ್ಥಾನ ನೀಡಲಾಗಿತ್ತು. ಚಿತ್ರ ಮುಗಿಯುವ ಹೊತ್ತಿಗೆ ವಿ.ಹರಿಕೃಷ್ಣ ನಿರ್ದೇಶನದ ಬಹುಪಾಲು ಕೆಲಸ ಮಾಡಿದ್ದರಿಂದ ಅವರಿಗೆ 'ನಿರ್ದೇಶಕನ' ಪೋಸ್ಟ್ ಕೊಡಲಾಗಿದೆ. ಮುಂದೆ ಓದಿರಿ...

ವಿ.ಹರಿಕೃಷ್ಣ ಕೊಡುಗೆ
'ಯಜಮಾನ' ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆಯಲ್ಲಿ ವಿ.ಹರಿಕೃಷ್ಣ ಅವರ ಕೊಡುಗೆ ಜಾಸ್ತಿ ಇದೆ. ಹೀಗಾಗಿ, ನಿರ್ದೇಶಕನ ಕ್ರೆಡಿಟ್ ನ ವಿ.ಹರಿಕೃಷ್ಣ ಗೆ ಕೊಡಲು ನಿರ್ಮಾಪಕಿ ಶೈಲಜಾ ನಾಗ್ ಮನಸ್ಸು ಮಾಡಿದ್ದಾರೆ.

ಮೊದಲು ವಿ.ಹರಿಕೃಷ್ಣ ಹೆಸರು
ಚಿತ್ರದ ಕ್ರೆಡಿಟ್ ಕಾರ್ಡ್ ನಲ್ಲಿ ನಿರ್ದೇಶಕರ ಪೈಕಿ ವಿ.ಹರಿಕೃಷ್ಣ ಹೆಸರು ಮೊದಲು ಬರಲಿದೆ. ಅವರ ಕೆಳಗೆ ಪಿ.ಕುಮಾರ್ ಹೆಸರು ಹಾಕಲಾಗಿದೆ. 'ಭರ್ಜರಿ' ಸಿನಿಮಾ ಖ್ಯಾತಿಯ ಚೇತನ್ ಕುಮಾರ್ 'ಯಜಮಾನ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಂಭಾಷಣೆಯಲ್ಲೂ ವಿ.ಹರಿಕೃಷ್ಣ ಪಾಲು ಇರುವುದರಿಂದ ಅಲ್ಲಿಯೂ ಅವರಿಗೆ ಕ್ರೆಡಿಟ್ ಸಿಗಲಿದೆ.

ದರ್ಶನ್-ವಿ.ಹರಿಕೃಷ್ಣ ಜೋಡಿಯ 25ನೇ ಚಿತ್ರ
ಹಾಗ್ನೋಡಿದ್ರೆ, ದರ್ಶನ್ ಹಾಗೂ ವಿ.ಹರಿಕೃಷ್ಣ ದಶಕದಿಂದ ಆತ್ಮೀಯ ಸ್ನೇಹಿತರು. ದರ್ಶನ್ ನಿರ್ಮಾಣದ ಸಿನಿಮಾದಿಂದಲೇ ವಿ.ಹರಿಕೃಷ್ಣ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡವರು. ಇದೀಗ ದರ್ಶನ್ ನಟನೆಯ ಚಿತ್ರಕ್ಕೆ ವಿ.ಹರಿಕೃಷ್ಣ ಡೈರೆಕ್ಟರ್ ಆಗಿರುವುದು ವಿಶೇಷ. 'ಯಜಮಾನ' ದರ್ಶನ್ ಹಾಗೂ ವಿ.ಹರಿಕೃಷ್ಣ ಜೋಡಿ 25ನೇ ಸಿನಿಮಾ ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ಅಂಶ.

ನಿರ್ಮಾಪಕಿ ಏನಂತಾರೆ.?
''ಪ್ರಚಾರಕ್ಕೋಸ್ಕರ ವಿ.ಹರಿಕೃಷ್ಣಗೆ ನಿರ್ದೇಶಕನ ಸ್ಥಾನ ನೀಡಿಲ್ಲ. ಮೊದಲನೇ ದಿನದಿಂದಲೂ ವಿ.ಹರಿಕೃಷ್ಣ ಹೆಚ್ಚು ಕೆಲಸ ಮಾಡಿದ್ದಾರೆ. ಬಿ.ಸುರೇಶ್ ಸ್ವತಃ ನಿರ್ದೇಶಕರಾಗಿ ವಿ.ಹರಿಕೃಷ್ಣ ರವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅವರ ಶ್ರಮಕ್ಕೆ ನಾವು ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.

ಪಕ್ಕಾ ಮಾಸ್ ಎಂಟರ್ ಟೈನರ್
'ಯಜಮಾನ' ಪಕ್ಕಾ ಮಾಸ್ ಎಂಟರ್ ಟೇನರ್ ಆಗಿದ್ದು, ಚಿತ್ರದಲ್ಲಿ ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ಧನಂಜಯ, ಅನೂಪ್ ಸಿಂಗ್ ಠಾಕೂರ್, ಸಾಧು ಕೋಕಿಲ ರಂತಹ ದೊಡ್ಡ ತಾರಾಬಳಗ ಇದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.


Click it and Unblock the Notifications











