For Quick Alerts
  ALLOW NOTIFICATIONS  
  For Daily Alerts

  18 ವರ್ಷಗಳ ನಂತರ ಮತ್ತೆ ನಿರ್ದೇಶಕನಾದ ವಿ.ಮನೋಹರ್

  By Naveen
  |

  ಸಂಗೀತ ನಿರ್ದೇಶಕ, ಗೀತರಚನೆಗಾರ, ಹಾಸ್ಯ ನಟ, ನಿರ್ದೇಶಕ ಹೀಗೆ ಸಕಲ ಕಲಾವಲ್ಲಭರಾಗಿರುವ ವಿ.ಮನೋಹರ್ ಈಗ ಮತ್ತೆ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ 18 ವರ್ಷಗಳ ಬಳಿಕ ಮನೋಹರ್ ಡೈರೆಕ್ಷನ್ ಕ್ಯಾಪ್ ತೊಡುತ್ತಿದ್ದಾರೆ.

  ಮನೋಹರ್ ಅವರ ಹೊಸ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ. ಇದೊಂದು ಮರ್ಡರ್ ಮಿಸ್ಟ್ರಿ ಕಥೆ ಇರುವ ಪಕ್ಕಾ ಹಾರರ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಅವರೇ ಸಂಗೀತ ಕೂಡ ನೀಡುತ್ತಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆಯಂತೆ. ಚಿತ್ರದ ತಾರಾ ಬಳಗ ಇನ್ನು ಫೈನಲ್ ಆಗಿಲ್ಲ.

  ಪ್ರಾರಂಭದಲ್ಲಿ ನಟ ಉಪೇಂದ್ರ ಅವರ 'ತರ್ಲೆ ನನ್ ಮಗ' ಚಿತ್ರಕ್ಕೆ ಸಂಗೀತದ ನಿರ್ದೇಶನದ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮನೋಹರ್ 'ಓ ಮಲ್ಲಿಗೆ' ಸಿನಿಮಾದ ಮೂಲಕ ನಿರ್ದೇಶಕರಾದರು. 2000ದಲ್ಲಿ ಬಂದ 'ಇಂದ್ರ ಧನುಷ್' ಮನೋಹರ್ ನಿರ್ದೇಶನ ಮಾಡಿದ ಕೊನೆಯ ಸಿನಿಮಾವಾಗಿತ್ತು.

  ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿ.ಮನೋಹರ್ ಈಗ ತಾವೇ ಹೊಸ ಸಿನಿಮಾ ಶುರು ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದರೆ ಕನ್ನಡದಲ್ಲಿ 100 ಸಿನಿಮಾಗಳನ್ನು ಪೂರೈಸಿದ ಕೆಲವೇ ಕೆಲವು ಸಂಗೀತ ನಿರ್ದೇಶಕರಲ್ಲಿ ಮನೋಹರ್ ಒಬ್ಬರಾಗಿದ್ದಾರೆ.

  English summary
  Kannada music director V Manohar directing a movie after 18 years.
  Thursday, May 10, 2018, 15:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X