»   » ಗಾಂಧಿನಗರದಲ್ಲಿ ರೆಡಿಯಾಗುತ್ತಿದೆ ಪಾತ್ರಗಳೇ ಇಲ್ಲದ ಸಿನಿಮಾ!

ಗಾಂಧಿನಗರದಲ್ಲಿ ರೆಡಿಯಾಗುತ್ತಿದೆ ಪಾತ್ರಗಳೇ ಇಲ್ಲದ ಸಿನಿಮಾ!

Posted By:
Subscribe to Filmibeat Kannada

ಸಾಮಾನ್ಯವಾಗಿ ಸ್ಟಾರ್ ನಟರು ಇಲ್ಲದಿದ್ರೇನೇ ಪ್ರೇಕ್ಷಕರು ಸಿನಿಮಾ ನೋಡಲು ಬೇಸರ ವ್ಯಕ್ತಪಡಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ಇಲ್ಲದೇ ಹೊಸಬರ ಅಭಿನಯದ ಪ್ರಯೋಗಾತ್ಮಕ ಸಿನಿಮಾಗಳು ಮೂಡಿಬರುತ್ತಿವೆ. ಜೊತೆಗೆ ಯಶಸ್ಸು ಕಾಣುತ್ತಿವೆ. ಇವುಗಳ ಜೊತೆಗೆ ಸಿನಿಮಾ ಇತಿಹಾಸದಲ್ಲೇ ಮೊದಲು ಎಂಬಂತೆ ಈಗ ಚಂದನವನದಲ್ಲಿ ಕಲಾವಿದರೇ ಇಲ್ಲದ ಚಿತ್ರವೊಂದು ತಯಾರಾಗುತ್ತಿದೆ.

ಹೌದು, ಸ್ಯಾಂಡಲ್ ವುಡ್ ನಲ್ಲಿ ಪಾತ್ರಗಳೇ ಇಲ್ಲದ 'ವಿ ಮೈನಸ್ (ಆತ್ಮ)' ಸಿನಿಮಾ ಬೆಳ್ಳಿತೆರೆಗೆ ಬರಲು ಸಜ್ಜಾಗುತ್ತಿದ್ದು, ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದೆ. ಕೇವಲ ಸನ್ನಿವೇಶ, ಮರಗಿಡ, ವಸ್ತುಗಳೇ ಪಾತ್ರಗಳಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗ ಸಿನಿ ಪ್ರಿಯರಲ್ಲಿ ಸಿನಿಮಾಗಳ ಬಗ್ಗೆ ಹೊಸ ಕುತೂಹಲ ಮೂಡಿಸಿದೆ.

V- Minus (AATHMA) kannada movie teaser

ಅಂದಹಾಗೆ ಎರಡು ಅಪರೂಪದ ಆತ್ಮಗಳ ಪ್ರೇಮಕಥೆ ಆಗಿರುವ 'ವಿ ಮೈನಸ್' ಚಿತ್ರವನ್ನು ಹೊಸಬರ ತಂಡವೊಂದು ನಿರ್ಮಿಸಿದ್ದು, ಶ್ರೀರಾಮ್ ಬಾಬು ಎಂಬುವವರು ನಿರ್ದೇಶನ ಮಾಡಿದ್ದಾರೆ. ಫೋಕಸ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ ಶಿವಕುಮಾರ್ ಎಂಬುವವರು ಚಿತ್ರ ನಿರ್ಮಾಣ ಮಾಡಿದ್ದಾರೆ.

V- Minus (AATHMA) kannada movie teaser

'ವಿ ಮೈನಸ್ (ಆತ್ಮ)' ಚಿತ್ರತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆ ಮೇಲೆ ತರುವ ಪ್ಲಾನ್ ಮಾಡಿದೆಯಂತೆ. ಚಿತ್ರ ಬಿಡುಗಡೆ ಆದ ಒಂದು ವರ್ಷದ ನಂತರ ಕೆಲವು ಕಲಾವಿದರನ್ನು ಸೇರಿಸಿಕೊಂಡು ಪುನಃ ಚಿತ್ರೀಕರಿಸಿ ಮತ್ತೆ ಚಿತ್ರ ಬಿಡುಗಡೆ ಮಾಡುವ ಯೋಜನೆ ನಿರ್ದೇಶಕರಿಗಿದೆಯಂತೆ. ಜೊತೆಗೆ ಈ ಸಿನಿಮಾವನ್ನು ಭಾರತದ ಇತರೆ ಭಾಷೆಗಳಿಗೂ ಡಬ್ ಮಾಡಲಾಗುತ್ತದೆಯಂತೆ.

'ವಿ ಮೈನಸ್ (ಆತ್ಮ)' ಚಿತ್ರದ ಟೀಸರ್ ನೋಡಲು ಕ್ಲಿಕ್ ಮಾಡಿ

English summary
First time in the sandalwood movie history 'V- Minus' Film getting ready to hit the silver screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada