ಅಪ್ಪು ನಮನ ಕಾರ್ಯಕ್ರಮಕ್ಕೆ ಹಾಡು ಬರೆದಿದ್ದೆ ಬೇಸರ: ವಿ.ನಾಗೇಂದ್ರ ಪ್ರಸಾದ್!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿಕೊಂಡಿರುವ 'ಪುನೀತ್ ನಮನ' ಕಾರ್ಯಕ್ರಮವನ್ನು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಭಾವಪೂರ್ಣವಾಗಿ ನಡೆಯುತ್ತಿದೆ. ನಾಗೇಂದ್ರ ಪ್ರಸಾದ್, ಪುನೀತ್‌ಗಾಗಿ ರಚಿಸಿರುವ ವಿಶೇಷ ಹಾಡೊಂದು ಇಂದು ಬಿಡುಗಡೆ ಆಗಲಿದ್ದು, ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಈ ಹಾಡಾಗಿದೆ.
ಇನ್ನೂ ಕಾರ್ಯಕ್ರಮದ ಹೈಲೈಟ್ ಅಂದರೆ ಗೀತ ನಮನ. ಯಾವುದೇ ಆಡಂಬರ ಇಲ್ಲದೆ ಕೇಲವ ಗೀತ ನಮನ ಕಾರ್ಯಕ್ರಮಕ್ಕೆ ಸೀಮಿತ ಮಾಡಲಾಗಿದೆ. ವಿಜಯ್ ಪ್ರಕಾಶ್, ಗುರು ಕಿರಣ್ ಸೇರಿದಂತೆ ಹಲವರು ಅಪ್ಪುಗೆ ಗೀತ ನಮನ ಸಲ್ಲಿಸಲಿದ್ದಾರೆ.
''ಪುನೀತ್ ಎಂದರೆ ಅವರ ನಿಷ್ಕಲ್ಮಶ ಮುಗುಳು ನಗೆ, ಅವರ ಪ್ರೀತಿಯ ಅಪ್ಪುಗೆಯೇ ನೆನಪಾಗುತ್ತದೆ. ಅವರ ಸಾಧನೆ ಬಗ್ಗೆ ಹಾಡುಗಳನ್ನು ಬರೆದವನು ನಾನು, ಈಗ ಇಂಥಹಾ ಸಂದರ್ಭದಲ್ಲಿ ಹಾಡು ಬರೆವಂತಾಗಿದ್ದು ದುರ್ವಿಧಿ'' ಎಂದಿದ್ದಾರೆ.

ಗೀತ ನಮನಕ್ಕಾಗಿ ವಿಶೇಷ ಸಾಹಿತ್ಯ ಬರೆದ ವಿ.ನಾಗೇಂದ್ರ ಪ್ರಸಾದ್!
ಕಾರ್ಯಕ್ರಮದ ಪ್ರಮುಖ ಭಾಗ ಗೀತ ನಮನ. ಗೀತನಮನಕ್ಕಾಗಿ ವಿ.ನಾಗೇಂದ್ರ ಪ್ರಸಾದ್ ವಿಶೇಷ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿದ್ದರ ಬಗ್ಗೆ ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ. ಪ್ರತೀ ಬಾರಿ ಸಾಹಿತ್ಯ ಬರೆಯುವ ಖುಷಿಯೇ ಬೇರೆ ಆದರೆ ಈ ಬಾರಿ ವಲ್ಲದ ಮನಸ್ಸಿನಲ್ಲಿ, ಅಪ್ಪು ಇನ್ನಿಲ್ಲ ಎನ್ನುವ ಸಾಲುಗಳನ್ನು ಬರೆಯಲು ಎಷ್ಟು ವೇದನೆ ಇತ್ತು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಈ ಹಾಡು ಬರೆದಿದ್ದು ಬೇಸರದ ಸಂಗತಿ ಎಂದ ನಾಗೇಂದ್ರ ಪ್ರಸಾದ್
ಹೀಗೊಂದು ಹಾಡು ಬರೆಯುತ್ತೇನೆ ಎಂದು ಯಾವತ್ತು ಊಹಿಸಿರಲಿಲ್ಲ. ಆದರೆ ಅಂತಹ ಪರಿಸ್ಥಿತಿ ಇಂದು ಎದುರಾಗುದೆ. ಈ ಹಾಡು ಬರೆಯುವಾಗ ಸ್ವತಃ ನಾವೇಂದ್ರ ಪ್ರಸಾದ್ ಹಲವು ಬಾರಿ ಭಾವುಕರಾಗಿದ್ದರಂತೆ. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ. "ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಿಗೆ ಹಾಡು ಬರೆಯುವುದು, ಅವರ ಸಾಧನೆಗಳ ಬಗ್ಗೆ ಹಾಡು ಬರೆಯ ಬೇಕಿತ್ತು. ಆದರೆ ಹೀಗೆ ಹಾಡು ಬರೆಯುವ ಹಾಗೆ ಹಾಗಿದೆ. ಇದು ಬೇಸರದ ಸಂಗತಿ" ಎಂದು ಹೇಳಿಕೊಂಡಿದ್ದಾರೆ.

ಹಾಡು ಹಾಡುವಾಗ ಕಣ್ಣಿರು ಹಾಕಿದ್ದ ವಿಯಜ್ ಪ್ರಕಾಶ್!
ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಹಾಡು ಕಂಪೋಸ್ ಮಾಡಿ, ರೆಕಾರ್ಡ್ ಮಾಡಿ ಎಡಿಟ್ ಮಾಡುವಂತಹ ಸಮಯದಲ್ಲಿ ಇಡೀ ತಂಡ ಭಾವುಕವಾಗಿತ್ತಂತೆ. ಇನ್ನು ಹಾಡು ಹಾಡುವ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಕಣ್ಣಿರು ಹಾಕಿದ್ದರಂತೆ. ನಾಗೇಂದ್ರ ಪ್ರಸಾದ್ ಸೇರಿದಂತೆ ಇಡೀ ತಂಡ ಪುನೀತ್ ಅವರನ್ನು ನೆನೆದು ಹಲವು ಬಾರಿ ಕಣ್ಣಿರು ಹಾಕಿದೆಯಂತೆ. ಈ ವಿಚಾರವನ್ನು ಕೂಡ ನಾಗೇಂದ್ರ ಪ್ರಸಾದ್ ಹಂಚಿಕೊಂಡಿದ್ದಾರೆ.
''ಹಾಡು ಬರೆಯುವುದು ಅದನ್ನು ಹಾಡುವುದು, ಅದಕ್ಕೆ ಸೂಕ್ತವಾದ ಚಿತ್ರಗಳು, ವಿಡಿಯೋಗಳನ್ನು ಹೊಂದಿಸಿ ಎಡಿಟ್ ಮಾಡುವುದು ಹೀಗೆ ಪ್ರತಿಯೊಂದು ಹಂತದಲ್ಲಿಯೂ ನೂರಾರು ಭಾರಿ ನಾವು ಭಾವುಕತೆಗೆ ಒಳಗಾಗಿ ಕಣ್ಣೀರು ಹರಿಸಿದ್ದೇವೆ'' ಎಂದರು ನಾಗೇಂದ್ರ ಪ್ರಸಾದ್.

ಮುತ್ತು ರಾಜ ಹೆತ್ತ ಮುತ್ತೆ ಎತ್ತ ಹೋದೆಯೋ!
ಮುತ್ತು ರಾಜ ಹೆತ್ತ ಮುತ್ತು ಎತ್ತ ಹೋದೆಯೋ... ಅತ್ತು ಕರೆದರೂ ಬಾರದಾದೆಯೋ... ಎನ್ನುವ ಸಾಲುಗಳು ಸಾಲುಗಳಿಂದ ಈ ಹಾಡು ಶುರುವಾಗುತ್ತೆ. ಈ ಸಾಲುಗಳು ಅಪ್ಪು ಅವರನ್ನು ಇಡೀ ಕರುನಾಡು ಅಪ್ಪು ಕರೆದಿದೆ ಎನ್ನುವುದಕ್ಕೆ ಸಾಕ್ಷಿ ಆದಂತೆ ಇದೆ.
ಈ ಹಾಡಿನ ಮೂಲಕವೇ ಕಾರ್ಯಕ್ರಮ ಆರಂಭ. ಕಾರ್ಯಕ್ರಮ ಆರಂಭವಾದ ಕೂಡಲೇ ಹಾಡು ಬಿಡುಗಡೆ ಆಗುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಯೂಟ್ಯೂಬ್‌ನಲ್ಲಿಯೂ ಹಾಡು ಬಿಡುಗಡೆ ಆಗುತ್ತದೆ. ಎಲ್ಲರೂ ಹಾಡನ್ನು ಕೇಳಬಹುದಾಗಿದೆ. ಈ ಹಾಡು ಮಾತ್ರವೇ ಅಲ್ಲದೆ ಇನ್ನೂ ಹಲವು ಹಾಡುಗಳನ್ನು ಇಂದು ಗಾಯಕರು ಹಾಡಲಿದ್ದಾರೆ ಎಂದರು ನಾಗೇಂದ್ರ ಪ್ರಸಾದ್.


Click it and Unblock the Notifications











