For Quick Alerts
  ALLOW NOTIFICATIONS  
  For Daily Alerts

  'ನೀವು ನನ್ನ ಸಿನಿಮಾ ಮಾಡೋದಿಲ್ಲ ಅಂದಿದ್ರಿ, ಅದು ಚೆನ್ನಾಗಿ ಓಡಿಲ್ಲ': ಕನ್ನಡ ನಟಿಗೆ ಕಿಚ್ಚಾಯಿಸಿದ ಕ್ರೇಜಿ!

  |

  ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮಾಡಿರೋ ಸಿನಿಮಾ ಬಗ್ಗೆ ಅಚ್ಚರಿ ಮೂಡುವಂತೆ ಮಾಡಿದೆ.

  ಇನ್ನೇನು ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇದೆ. ಈ ವೇಳೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಬನಾರಸ್' ಸಿನಿಮಾ ಟ್ರೈಲರ್ ಲಾಂಚ್ ಮಾಡಿದೆ. ದೇಶ ಮೂಲೆಯಿಂದಲೂ ಪತ್ರಕರ್ತರನ್ನು ಕರೆಸಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಲಿವುಡ್ ನಟ ಅರ್ಬಾಜ್ ಖಾನ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಬಂದಿದ್ರು.

  ಜಮೀರ್ ಪುತ್ರನ ಚೊಚ್ಚಲ ಚಿತ್ರ 'ಬನಾರಸ್' ಟ್ರೈಲರ್‌ ಲಾಂಚ್‌ಗೆ ಅರ್ಬಾಜ್ ಖಾನ್ ರವಿಚಂದ್ರನ್ ಗೆಸ್ಟ್!ಜಮೀರ್ ಪುತ್ರನ ಚೊಚ್ಚಲ ಚಿತ್ರ 'ಬನಾರಸ್' ಟ್ರೈಲರ್‌ ಲಾಂಚ್‌ಗೆ ಅರ್ಬಾಜ್ ಖಾನ್ ರವಿಚಂದ್ರನ್ ಗೆಸ್ಟ್!

  'ಬನಾರಸ್' ಟ್ರೈಲರ್ ಲಾಂಚ್ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಓಪನ್ ಟಾಕ್ ಹೈಲೈಟ್ ಆಗಿತ್ತು. ವೇದಿಕೆ ಮೇಲೆ 'ಬನಾರಸ್' ಸಿನಿಮಾದ ನಟಿ ಸೋನಾಲ್ ಮಾಂಟೇರೋ ಕಾಲೆಳಿದಿದ್ದಾರೆ. ಹಾಗೇ ಯುವ ನಟ ಝೈದ್ ಖಾನ್‌ರನ್ನೂ ಬಿಟ್ಟಿಲ್ಲ. ಹಾಗಿದ್ರೆ, ಕ್ರೇಜಿ ಆಡಿ ಮಾತುಗಳು ಹೈಲೈಟ್ ಇಲ್ಲಿದೆ.

  'ನೀವು ನನ್ನ ಸಿನಿಮಾ ಮಾಡೋದಿಲ್ಲ ಅಂದಿದ್ರಿ,

  'ನೀವು ನನ್ನ ಸಿನಿಮಾ ಮಾಡೋದಿಲ್ಲ ಅಂದಿದ್ರಿ,

  ಕ್ರೇಜಿಸ್ಟಾರ್ 'ಬನಾರಸ್' ಸಿನಿಮಾದ ನಟಿ ಸೋನಾಲ್ ಮಾಂಟೇರೋಗೆ ತಮ್ಮ ಸಿನಿಮಾದಲ್ಲಿ ನಟಿಸೋಕೆ ಆಫರ್ ಕೊಟ್ಟಿದ್ರಂತೆ. ಆದರೆ, ಆ ವೇಳೆ ಈ ನಟಿ ರವಿಚಂದ್ರನ್ ಜೊತೆ ನಟಿಸಲು ಒಪ್ಪಿಕೊಂಡಿರಲಿಲ್ಲ. ಅದನ್ನು ಓಪನ್ ಆಗಿ ಕ್ರೇಜಿಸ್ಟಾರ್ ಹೇಳಿಕೊಂಡಿದ್ದಾರೆ. "ನೀವೂ ಈ ಹಿಂದೆ ನಮ್ಮ ಮನಗೆ ಬಂದಿದ್ರಿ ಅಲ್ವಾ? ಅವಾಗ ನೀವು ನನ್ನ ಸಿನಿಮಾ ಮಾಡೋದಿಲ್ಲ ಅಂದಿದ್ರಿ. ಇರಲಿ ಪರ್ವಾಗಿಲ್ಲ. ನಿಮಗೆ ಒಳ್ಳೆ ಸಿನಿಮಾ ಸಿಕ್ಕಿದ್ಯಾಲ್ಲ ತೊಂದರೆ ಇಲ್ಲ. ನೀವು ಆ ಸಿನಿಮಾ ಮಾಡಿದ್ರೂ ಓಡುತ್ತಿರಲಿಲ್ಲ. ಅದು ಚೆನ್ನಾಗಿ ಓಡಿಲ್ಲ ಸಿನಿಮಾ. ತೊಂದರೆ ಏನೂ ಇಲ್ಲ." ಎಂದು ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ.

  28 ವರ್ಷ ಆದರೂ ಗಂಡನಿಗೆ 'ಐಲವ್ ಯು' ಹೇಳಿಲ್ಲ: ಪ್ರೇಮ್ ಕಹಾನಿ ಬಿಚ್ಚಿಟ್ಟ 'ರಣಧೀರ'ನ ರಾಣಿ!28 ವರ್ಷ ಆದರೂ ಗಂಡನಿಗೆ 'ಐಲವ್ ಯು' ಹೇಳಿಲ್ಲ: ಪ್ರೇಮ್ ಕಹಾನಿ ಬಿಚ್ಚಿಟ್ಟ 'ರಣಧೀರ'ನ ರಾಣಿ!

  ಈಗಿನ ಕಾಲದವರೆಲ್ಲಾ ಲೇಟು

  ಈಗಿನ ಕಾಲದವರೆಲ್ಲಾ ಲೇಟು

  'ಬನಾರಸ್' ಟ್ರೈಲರ್ ಲಾಂಚ್‌ಗೆ ಸಿನಿಮಾದ ನಾಯಕಿ ಸೋನಾ ಮಾಂಟೆರೋ ಲೇಟ್ ಆಗಿ ಬಂದಿದ್ದರು. ಈ ಕಾರಣಕ್ಕೂ ನಾಯಕಿಯನ್ನು ಹಿಡ್ಕೊಂಡಿದ್ದರು. ಈಗಿನ ಕಾಲದವರು ಲೇಟಾಗಿ ಬರ್ತಾರೆ ಅಂತ ಟಾಂಗ್ ಕೊಟ್ಟಿದ್ದಾರೆ. "ನೀವು ಬಂದಿದ್ದೇ ಗೊತ್ತಿಲ್ಲ ನನಗೆ. ಲೇಟಾಗಿ ಬಂದ್ರಿ ಅನ್ಸುತ್ತೆ. ಈಗಿನ ಕಾಲದವರೆಲ್ಲಾ ಲೇಟಾಗಿ ಬರುತ್ತಾರೆ. ಇವತ್ತು ಲೇಟ್ ಅಲ್ವಾ? ಬಂದಿದ್ದೇ ಗೊತ್ತಿಲ್ಲ ನನಗೆ." ಎಂದು ನಾಯಕಿಯ ಕಾಲೆಳಿದಿದ್ದಾರೆ.

  ತಪ್ಪಿಕೊಂಡಿ ಓಡಾಡಿದ್ದೇಕೆ ಕ್ರೇಜಿಸ್ಟಾರ್?

  ತಪ್ಪಿಕೊಂಡಿ ಓಡಾಡಿದ್ದೇಕೆ ಕ್ರೇಜಿಸ್ಟಾರ್?

  "ಈ ಒಂದು ತಿಂಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದೆ. ಯಾರ ಕೈಗೂ ಸಿಕ್ಕಿಲ್ಲ ನಾನು. ಫೋನೂ ಇಲ್ಲ ಏನೂ ಇಲ್ಲ. ಹೆಂಗೋ ಹುಡುಕಿಕೊಂಡು ಮನೆಗೆ ಬಂದು ಕರೆದಿದ್ದಾರೆ. ನಾನು ಇಲ್ಲ ಅಂತ ಹೇಳುತ್ತಿದ್ದೇನೆ. ಇಲ್ಲ ನೀವು ಬರ್ತೀರಾ ಸರ್ ಅಂತಾನೆ. ಫ್ಲೈಟ್ ಟಿಕೆಟ್ ಆರೂವರೆಗೆ ಇದೆ ಅಂದರೆ, ಎಂಟೂವರೆಗೆ ಬದಲಾಯಿಸಿಕೊಳ್ಳಿ ಅಂತಾನೆ. ಅವನು ಫಿಕ್ಸ್ ಮಾಡಿಕೊಂಡು ಬಂದ್ಬಿಟ್ಟ. ನೀವೇ ಬರ್ತೀರಾ. ನೀವೇ ಇರ್ತೀರಾ. ಇಷ್ಟು ದಿನ ಇರ್ಲಿಲ್ಲ. ಈಗ್ಯಾಕೆ ಅಂದೆ. ಅದೇ ಇಷ್ಟು ದಿನ ಇರ್ಲಿಲ್ಲ. ಈಗ ಬನ್ನಿ ಅಂದ. ಸರಿ.. ಝೈದ್ ಖಾನ್ ತುಂಬಾ ಕ್ಯೂಟ ಆಗಿ ಕಾಣಿಸುತ್ತೀರಾ? ನಿಮಗೂ ವೆಲ್‌ ಕಮ್." ಝೈದ್ ಖಾನ್‌ಗೆ ಸ್ವಾಗತ ಕೋರಿದ್ದಾರೆ.

  ನವೆಂಬರ್‌ನಲ್ಲಿ ಸಿನಿಮಾ ರಿಲೀಸ್

  ನವೆಂಬರ್‌ನಲ್ಲಿ ಸಿನಿಮಾ ರಿಲೀಸ್

  ಝೈದ್ ಖಾನ್ ಅಭಿನಯದ ಸಿನಿಮಾ 'ಬನಾರಸ್' ಐದು ಭಾಷೆಗಳಲ್ಲಿ ಬಿಡುಗಡೆ ಸಜ್ಜಾಗಿ ನಿಂತಿದೆ. ನವೆಂಬರ್ 4ರಂದು ದೇಶಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ ಈಗಿನಿಂದಲೇ ಸಿನಿಮಾ ಪ್ರಚಾರಕ್ಕೆ ಮುಂದಾಗಿದೆ. ಝೈದ್ ಖಾನ್, ಸೋನಾಲ್ ಮಾಂಟೇರೋ ನಟಿಸಿದ್ರೆ, ಜಯತೀರ್ಥ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  English summary
  V. Ravichandran about Sonal Monteiro In Banaras Trailer Launch Event, Know More.
  Tuesday, September 27, 2022, 17:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X