ಕ್ರೇಜಿ ಸ್ಟಾರ್ ರವಿಚಂದ್ರನ್ ಕಂಡಂತೆ 'ನಾಗರಹಾವು'
Recommended Video

'ನಾಗರಹಾವು' ನಾಲ್ಕು ದಶಕಗಳ ನಂತರ ಮತ್ತೆ ಹೊಸ ತಂತ್ರಜ್ಙಾನದ ಜೊತೆಯಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಇತಿಹಾಸವನ್ನು ಸೃಷ್ಟಿಮಾಡಿದ್ದ ಚಿತ್ರವನ್ನು ಮತ್ತೆ ಕಣ್ತುಂಬಿಕೊಳ್ಳು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ವಾರಕ್ಕೂ ಮುಂಚೆಯೇ ಸಿನಿಮಾ ಬಿಡುಗಡೆಯ ದಿನ ಬೇಕಿರುವ ತಯಾರಿಗಳನ್ನು ಅಭಿಮಾನಿಗಳು ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ ಕಲಾವಿದರೆಲ್ಲರೂ 'ನಾಗರಹಾವು' ಚಿತ್ರದ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸಿನಿಮಾ ನಿರ್ಮಾಣ ಹಂತದಲ್ಲಿ ಏನೆಲ್ಲಾ ಸವಾಲುಗಳಿದ್ದವು ಎನ್ನುವುದನ್ನು ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ, ರವಿಚಂದ್ರನ್ ಪತ್ರದ ಮೂಲಕ ಹೇಳಿಕೊಂಡಿದ್ದಾರೆ.
'ನಾಗರಹಾವು' ಸಿನಿಮಾ ನೋಡುವ ಮುಂಚೆ ವೀಕ್ಷಕರಿಗೆ ಸಾಕಷ್ಟು ವಿಚಾರಗಳು ಹಲವಾರು ರೀತಿಯಲ್ಲಿ ಸಿಗುತ್ತಿದೆ. ಅದರಲ್ಲಿ ನಿರ್ಮಾಣ ಹೇಗಾಯ್ತು ಎನ್ನುವುದರ ಬಗ್ಗೆ ರವಿಚಂದ್ರನ್ ಮಾಹಿತಿ ನೀಡಿದ್ದಾರೆ. ಏನೆಲ್ಲಾ ಹೇಳಿದ್ದಾರೆ ಪತ್ರದಲ್ಲಿ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಅತೀ ಹೆಚ್ಚು ನೋಡಿದ ಚಿತ್ರ 'ನಾಗರಹಾವು'
'ನಾಗರಹಾವು' ಚಿತ್ರದ ಬಗ್ಗೆ ರವಿಚಂದ್ರನ್ ಪತ್ರದಲ್ಲಿ ಬರೆದಿರುವ ವಿಚಾರ ಹೀಗಿದೆ... ನನಗೆ ಸಂಖ್ಯೆ ಮರೆತು ಹೋಗಿದೆ. ಅಷ್ಟು ಬಾರಿ 'ನಾಗರಹಾವು' ಸಿನಿಮಾವನ್ನು ನೋಡಿದ್ದೇನೆ. ನಾನು ಯುವಕನಾಗಿದ್ದಾಗಲೇ ಈಶ್ವರಿ ಪ್ರೊಡಕ್ಷನ್ಸ್ ನ ಕೆಲಸಗಳನ್ನು ನೋಡಿಕೊಳ್ಳುತ್ತಿದೆ. ಆದ್ದರಿಂದಲೇ ನನಗೆ ಚಿತ್ರಮಂದಿರಗಳಿಗೆ ಭೇಟಿ ನೀಡುವ ಅವಕಾಶಗಳು ಸಿಕ್ಕಿತ್ತು. ಆಗ ಪ್ರೇಕ್ಷಕರು ಎಂತಹ ದೃಶ್ಯಗಳನ್ನು ಸಂತಸದಿಂದ ನೋಡುತ್ತಾರೆ ಎನ್ನುವುದು ತಿಳಿಯುತ್ತಿತ್ತು.

ಹಳೆ ನೆನಪು ಮೆಲಕು ಹಾಕಿದ ರವಿಮಾಮ
ನನಗೆ ಇನ್ನೂ ನೆನಪಿಗೆ 'ನಾಗರಹಾವು' ಸಿನಿಮಾ ಚಿತ್ರೀಕರಣ ಅಷ್ಟು ಸುಲಭವಾಗಿ ಇರಲಿಲ್ಲ. ಸಾಕಷ್ಟು ಸವಾಲುಗಳನ್ನು ದಾಟಿಕೊಂಡು ಚಿತ್ರ ನಿರ್ಮಾಣ ಮಾಡಿದ್ದೇವು. 'ನಾಗರಹಾವು' ಸಿನಿಮಾ ಸೂಪರ್ ಹಿಟ್ ಚಿತ್ರ ಹಾಗೂ ನಮ್ಮ ತಂದೆಯವರಿಗೆ ತುಂಬಾನೇ ಸ್ಪೆಷಲ್ ಆಗಿದ್ದ ಚಿತ್ರವಾಗಿತ್ತು.

ಕಾಸ್ಟ್ಯೂಮ್ಸ್ ಗಳ ಸಂರಕ್ಷಣೆ
'ನಾಗರಹಾವು' ಸಿನಿಮಾದ ಪಾತ್ರಧಾರಿಗಳು ಬಳಸಿದ್ದ ಉಡುಪುಗಳನ್ನು ಸುಮಾರು 25 ವರ್ಷಗಳು ಸಂರಕ್ಷಿಸಲಾಗಿತ್ತು. ಪುಟ್ಟಣ್ಣ ಅವರ ಸೃಷ್ಟಿ ಕೇವಲ ಸಿನಿಮಾ ಆಗಿರಲಿಲ್ಲ. ಅದು ಪ್ರತಿ ಕಲಾವಿದರಿಗೆ ಹಾಗೂ ತಂತ್ರಜ್ಙನರಿಗೆ ಬೈಬಲ್ ನಂತೆ ಆಗಿತ್ತು. ಒಂದೊಂದು ಫ್ರೇಮ್ ನಲ್ಲಿಯೂ ಕಲಿಯುವ ವಿಚಾರ ಸಾಕಷ್ಟು ಇದೆ. ಸಿನಿಮಾ ನೋಡಿದ ಜನರು ಚಿತ್ರದ ಮೂಲಕ ಕಲಿಯುವುದು ಸಾಕಷ್ಟಿದೆ. ಸಣ್ಣ ಸಣ್ಣ ಪಾತ್ರವೂ ಒಂದೊಂದು ಕಥೆಯನ್ನು ಹೊಂದಿತ್ತು.

ಇಂದಿನ ಯುವ ಜನಾಂಗಕ್ಕೆ ವಿಷ್ಣು ತಲುಪಲಿ
'ನಾಗರಹಾವು' ಸಿನಿಮಾದಲ್ಲಿ ಇರುವ ಅನೇಕ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಆರ್ಥಿಕ ಬಿಕ್ಕಟ್ಟು ಬಂದಾಗ ನಮ್ಮ ತಂದೆ 'ನಾಗರಹಾವು' ಚಿತ್ರವನ್ನು ಮರು ಬಿಡುಗಡೆ ಮಾಡಿ ಹಣ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಇಂದಿನ ಜನರಿಗೆ ಸಿನಿಮಾ ಬಗ್ಗೆ ತಿಳಿಯಲಿ ಎನ್ನುವ ಉದ್ದೇಶದಿಂದ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ವಿ.ರವಿಚಂದ್ರನ್


Click it and Unblock the Notifications











