»   » ರವಿಚಂದ್ರನ್ ಫೋಟೋ ತಂದ ಗೊಂದಲ: ಇದು ಯಾರ ಎಡವಟ್ಟು?

ರವಿಚಂದ್ರನ್ ಫೋಟೋ ತಂದ ಗೊಂದಲ: ಇದು ಯಾರ ಎಡವಟ್ಟು?

Posted By:
Subscribe to Filmibeat Kannada

ಕನ್ನಡದ ಕ್ರೇಜಿಸ್ಟಾರ್, ಕನಸುಗಾರ, ಏಕಾಂಗಿ ಅಂತೆಲ್ಲಾ ಕರೆಸಿಕೊಳ್ಳುವ ವಿ.ರವಿಚಂದ್ರನ್ ಸ್ಯಾಂಡಲ್ ವುಡ್ ನ ನಿಜವಾದ ಶೋ ಮ್ಯಾನ್.

ಈ 'ಶೋ ಮ್ಯಾನ್' ಹೆಸರು ಮತ್ತು ಫೋಟೋ ಈಗ ಗೊಂದಲಕ್ಕೆ ಕಾರಣವಾಗಿದೆ. ಗೂಗಲ್, ವಿಕಿಪೀಡಿಯದಲ್ಲಿ ಬರುವುದೆಲ್ಲ ನಿಜ ಎಂದು ನಂಬುವ ಜನರಿದ್ದಾರೆ. ಆದ್ರೆ, ಅದು ಒಮ್ಮೊಮ್ಮೆ ತಪ್ಪು ತೋರಿಸುತ್ತೆ ಎಂಬುದು ಆಗಾಗ ಸಾಬೀತಾಗುತ್ತೆ.

ಈಗ ಅಂತಹದೇ ಒಂದು ಎಡವಟ್ಟು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಫೋಟೋದಿಂದ ಆಗಿದೆ. ಏನಿದು ರವಿಚಂದ್ರನ್ ಅವರು ಹೆಸರು ಮತ್ತು ಫೋಟೋ ತಂದಿಟ್ಟಿರುವ ಗೊಂದಲವೆಂದು ಮುಂದೆ ಓದಿ.....ಪೂರ್ತಿ ವಿವರವಾಗಿ ನೀಡಲಾಗಿದೆ.

ವೇಣು ರವಿಚಂದ್ರನ್ ವಿಕಿಪೀಡಿಯದಲ್ಲಿ ಕ್ರೇಜಿಸ್ಟಾರ್

ತಮಿಳಿನ ಖ್ಯಾತ ನಿರ್ಮಾಪಕ, ವಿತರಕ ವೇಣು ರವಿಚಂದ್ರನ್ ಅವರ ವಿಕಿಪೀಡಿಯದಲ್ಲಿ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಫೋಟೋ ಕಾಣಿಸುತ್ತಿದೆ. ಅಷ್ಟೇ ಅಲ್ಲ ವಿಶ್ವನಾಥ್ ರವಿಚಂದ್ರನ್ ಎಂದು ವೇಣು ರವಿಚಂದ್ರನ್ ಅವರ ಪೂರ್ತಿ ಹೆಸರು ಹುಡುಕಿದರು ಕೂಡ ಕ್ರೇಜಿಸ್ಟಾರ್ ಭಾವಚಿತ್ರ ಬರುತ್ತಿದೆ. ಇದು ಸಹಜವಾಗಿ ಗೊಂದಲ ಉಂಟು ಮಾಡಿದೆ.

'ಅಪ್ಪಾ.. ಐ ಲವ್ ಯು ಪಾ' ಹಾಡಿಗೆ ಭಾವುಕರಾದ ಕ್ರೇಜಿ ಸ್ಟಾರ್ ರವಿಚಂದ್ರನ್

ಯಾರು ಈ ಮತ್ತೊಬ್ಬ ರವಿಚಂದ್ರನ್

ವೇಣು ರವಿಚಂದ್ರನ್ ತಮಿಳಿನ ಖ್ಯಾತ ನಿರ್ಮಾಪಕ ಮತ್ತು ವಿತರಕ. ಇವರ ಪೂರ್ತಿ ಹೆಸರು ವಿಶ್ವನಾಥ್ ರವಿಚಂದ್ರನ್ ಆಸ್ಕರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಿಕ. ಇವರನ್ನ ಆಸ್ಕರ್ ರವಿಚಂದ್ರನ್ ಅಂತಲೂ ಕರೆಯುತ್ತಾರೆ.

'ಪ್ರೇಮಲೋಕ' ಟೈಟಲ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರದಲ್ಲವಂತೆ !

ತಮಿಳು ಯ್ಯೂಟ್ಯೂಬ್ ನಲ್ಲೂ ಎಡವಟ್ಟು

ಕಳೆದ ಎರಡು ವರ್ಷದ ಹಿಂದೆ ಅಪ್ ಲೌಡ್ ಆಗಿರುವ ವಿಡಿಯೋದಲ್ಲಿ ಆಸ್ಕರ್ ರವಿಚಂದ್ರನ್ ಗೆ ಸಂಬಂಧಪಟ್ಟಂತೆ ಸುದ್ದಿ ನೀಡಿದ್ದಾರೆ. ಆದ್ರೆ, ಫೋಟೋಗಳು ಮಾತ್ರ ರವಿಚಂದ್ರನ್ ಅವರದ್ದನ್ನ ಬಳಸಿದ್ದಾರೆ. ಇದು ಯಾರ ಎಡವಟ್ಟು ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

'ಆಸ್ಕರ್ ರವಿಚಂದ್ರನ್' ಫೋಟೋನೋ ಸಿಗಲ್ಲ

ಇನ್ನು ಗೂಗಲ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಆಸ್ಕರ್ ರವಿಚಂದ್ರನ್ ಅವರ ಫೋಟೋ ಹುಡುಕಿದರೇ ಸಿಗೋದೇ ಇಲ್ಲ. ಅಲ್ಲೊಂದು ಇಲ್ಲೊಂದು ಫೋಟೋ ಕಂಡರು, ಅದೊಂಥರ ನಮ್ಮ ರವಿಚಂದ್ರನ್ ಅವರ ಮುಖವನ್ನೇ ಹೋಲುವಂತೆ ಇದೆ.

'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!

ವಿಕಿಪೀಡಿಯದವರು ಎಚ್ಚೆತ್ತಕೊಳ್ಳಬೇಕು

ವಿಕಿಪೀಡಿಯವನ್ನ ನಿಯಂತ್ರಿಸುವವರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಗೊತ್ತಿಲ್ಲದೇ ಇರುವವರು, ಯಾರೋ ಎಂದು ತಿಳಿದುಕೊಂಡು, ಮತ್ಯಾರದೋ ಫೋಟೋ ತಗೊಂಡು ಸುದ್ದಿ ಮಾಡ್ತಾರೆ.

English summary
Wikipedia shows V.Ravichandran image for Venu Ravichandran Wikipedia. ತಮಿಳಿನ ನಿರ್ಮಾಪಕ, ವಿತರಕ ವೇಣು ರವಿಚಂದ್ರನ್ ಅವರ ವಿಕಿಪೀಡಿಯದಲ್ಲಿ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಫೋಟೋ ಕಾಣುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada