»   » 'ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್

'ಲಕ್ಷ್ಮಣ'ನಿಗೆ 'ದಶರಥ'ನಾದ ಕ್ರೇಜಿಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada

'ಅಪೂರ್ವ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹರೆಯದ ಹುಡುಗಿಯೊಂದಿಗೆ ರೋಮ್ಯಾನ್ಸ್ ಮಾಡಬಹುದು. ಹಾಗೇ, ಹೀರೋಗಳಿಗೆ ಅಪ್ಪನಾಗಿ ಬುದ್ಧಿವಾದ ಕೂಡ ಹೇಳ್ಬಹುದು.

ಈಗಾಗಲೇ 'ಮಾಣಿಕ್ಯ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಅಪ್ಪನಾಗಿ ರವಿಚಂದ್ರನ್ ಮಿಂಚಿದ್ದರು. ಈಗ 'ಲವ್ ಯು ಆಲಿಯ' ಚಿತ್ರದಲ್ಲೂ ನಾಯಕಿಗೆ ತಂದೆಯಾಗಿ 'ರಣಧೀರ' ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇದೇ ಲಿಸ್ಟ್ ಗೆ ಎಂಟ್ರಿಕೊಡುತ್ತಿರುವ ಲೇಟೆಸ್ಟ್ ಸಿನಿಮಾ 'ಲಕ್ಷ್ಮಣ'. [ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್]

ravichandran

ಹೌದು, ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ಸುದ್ದಿ ನಿಮ್ಗೆ ಗೊತ್ತಲ್ವಾ. ಹಾಗೆ, ಅನೂಪ್ ಗೆ ಸುಂದರ್ ರಾಜ್ ಮಗಳು ಮೇಘನಾ ರಾಜ್ ನಾಯಕಿ ಆದ ವಿಷಯವನ್ನ ನಾವೇ ನಿಮಗೆ ಹೇಳಿದ್ದು ನೆನಪಿದೆ ತಾನೆ?

ಈಗ ಇದೇ 'ಲಕ್ಷ್ಮಣ' ಚಿತ್ರತಂಡದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. 'ಲಕ್ಷ್ಮಣ' ಚಿತ್ರದಲ್ಲಿ ಅನೂಪ್ ರೇವಣ್ಣಗೆ ತಂದೆಯಾಗಿ ಕನಸುಗಾರ ರವಿಚಂದ್ರನ್ ಅಭಿನಯಸಲಿದ್ದಾರೆ. [ರಾಜಕಾರಣಿ ಪುತ್ರನ ಕೈಲಿ ಲಾಂಗು-ಗನ್ ಕೊಟ್ಟ ಚಂದ್ರು]

lakshama

'ಲಕ್ಷ್ಮಣ'ನಿಗೆ ದಶರಥನಾಗುವುದಕ್ಕೆ ರವಿಮಾಮ ಒಪ್ಪಿಕೊಂಡಿದ್ದಾರೆ. ಹಾಗಂತ ಖುದ್ದು ನಿರ್ದೇಶಕ ಆರ್.ಚಂದ್ರು ಖುಷಿಯಿಂದ ಬಹಿರಂಗ ಪಡಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಶುರುವಾಗಲಿದೆ. 'ಲಕ್ಷ್ಮಣ' ಚಿತ್ರದ ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Crazy Star V.Ravichandran is roped into play father role for Anup Revanna in R.Chandru directorial 'Lakshmana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada