'ಸಿನಿಮಾ ರಿಲೀಸ್ ಮಾಡಿ' ಎಂದು ದೊಡ್ಡ ನಿರ್ಮಾಪಕರಿಗೆ ರವಿಚಂದ್ರನ್ ಆಗ್ರಹ
ಕೊರೊನಾ ಭೀತಿಯಿಂದ ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಆ ಕಾರಣದಿಂದ ದೊಡ್ಡ ಬಜೆಟ್ ಚಿತ್ರಗಳು ಹಾಗೂ ದೊಡ್ಡ ನಟರ ಚಿತ್ರಗಳು ಬಿಡುಗಡೆ ಮಾಡಲು ಮುಂದೆ ಬರ್ತಿಲ್ಲ. ನೂರಕ್ಕೆ ನೂರರಷ್ಟು ಅವಕಾಶ ಕೊಡಿ ಆಮೇಲೆ ರಿಲೀಸ್ ಮಾಡ್ತೇವೆ ಎನ್ನುತ್ತಿದ್ದಾರೆ.
'ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡಿ, ಕೊರೊನಾ ಹೋಗುವವರೆಗೂ ಕಾಯ್ತೀವಿ ಅಂದ್ರೆ ಅದು ಸಾಧ್ಯವಿಲ್ಲ' ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೊಮ್ಮೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನಿರ್ಮಾಪಕ ಸಂಘದ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರವಿಚಂದ್ರನ್ ''ದೊಡ್ಡ ಚಿತ್ರಗಳು ಧೈರ್ಯವಾಗಿ ಬಿಡುಗಡೆ ಮಾಡಿ'' ಎಂದು ಒತ್ತಾಯಿಸಿದ್ದಾರೆ. ಮುಂದೆ ಓದಿ...

ಯಾವಾಗ ರಿಲೀಸ್ ಮಾಡಬೇಕು ಅಂದ್ಕೊಂಡಿದ್ದೀರಾ?
''ಕೊರೊನಾ ಭಯದಿಂದ ದೊಡ್ಡ ಚಿತ್ರಗಳು ಥಿಯೇಟರ್‌ಗೆ ಬರ್ತಿಲ್ಲ. ಯಾವಾಗ ರಿಲೀಸ್ ಮಾಡಬೇಕು ಅಂದುಕೊಂಡಿದ್ದೀರಾ. ಈ ಕೊರೊನಾ ಹೋಗಲ್ಲ. ಒಂದು ಸಮಯದಲ್ಲಿ ಕೊರೊನಾ ಬಂತು, ಹೋಯ್ತು. ಈಗ ಇದು ವ್ಯಾಪಾರ ಆಗಿದೆ ಅಷ್ಟೇ. ದೊಡ್ಡ ಚಿತ್ರಗಳು ಧೈರ್ಯ ಮಾಡಬೇಕು. ಬಿಡುಗಡೆ ಮಾಡಿ ಚಿತ್ರಗಳು. ಜನರ ಬರ್ತಾರೆ'' ಎಂದು ರವಿಚಂದ್ರನ್ ಆಗ್ರಹಿಸಿದ್ದಾರೆ.

ಥಿಯೇಟರ್ ಹೆಚ್ಚಾಗುತ್ತೆ
''ಕೊರೊನಾ ಹೋಗುವರೆಗೂ ಕಾಯ್ತೀರಾ ಅಂದ್ರೆ ಅದು ಹೋಗಲ್ಲ. ಸರಿ ಶೇಕಡಾ 50 ರಷ್ಟು ಚಿಂತೆನಾ, ರಿಲೀಸ್ ಮಾಡಿ, 50 ರಷ್ಟು ಜನ ಬಂದ್ರೆ ನಷ್ಟ ಆಗಲ್ಲ, ಚಿತ್ರಮಂದಿರ ತುಂಬತ್ತೆ. ಒಂದು ಥಿಯೇಟರ್‌ನಲ್ಲಿ ಬರ್ತಿದ್ದ ಸಿನಿಮಾ ಎರಡು ಥಿಯೇಟರ್ ಆಗುತ್ತೆ'' ಎಂದು ಆಶ್ವಾಸನೆ ನೀಡಿದ್ದಾರೆ.

ನಿರ್ಮಾಪಕರು ನುಗ್ಗಬೇಕು
''ಕೊರೊನಾ ಯಾವಾಗ ಹೋಗುತ್ತೆ ಅಂತ ಯೋಚನೆ ಮಾಡುತ್ತಾ ಕೂತರೆ ಆಗಲ್ಲ, ನಿರ್ಮಾಪಕರು, ನಟರು ನುಗ್ಗಬೇಕು. ಪೊಲೀಸರು ದಂಡ ಹಾಕ್ತಾರೆ ಅನ್ನೋದು ಬಿಟ್ಟರೆ ಯಾರಿಗೂ ಕೊರೊನಾ ಭಯ ಇಲ್ಲ. ಖಂಡಿತಾ ಜನ ಥಿಯೇಟರ್‌ಗೆ ಬಂದೇ ಬರ್ತಾರೆ. ಧೈರ್ಯ ಮಾಡಿ'' ಎಂದು ರವಿಚಂದ್ರನ್ ಧೈರ್ಯ ತುಂಬಿದರು.
Recommended Video

ದೊಡ್ಡ ಚಿತ್ರಗಳು ಅಂತ ಯಾವುದಿದೆ?
ರವಿಚಂದ್ರನ್ ಹೇಳುವಂತೆ ಸ್ಟಾರ್ ನಟರ ಚಿತ್ರಗಳು ಹಾಗು ದೊಡ್ಡ ನಿರ್ಮಾಪಕರ ಚಿತ್ರಗಳು ಅಂತ ನೋಡಿದ್ರೆ, ದರ್ಶನ್ ರಾಬರ್ಟ್, ಸುದೀಪ್ ಕೋಟಿಗೊಬ್ಬ 3, ಪುನೀತ್ ಯುವರತ್ನ, ದುನಿಯಾ ವಿಜಯ್ ಸಲಗ ಎಲ್ಲ ಕೆಲಸ ಮುಗಿಸಿ ರಿಲೀಸ್‌ಗೆ ಸಜ್ಜಾಗಿದೆ.


Click it and Unblock the Notifications











