For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ರವಿಚಂದ್ರನ್ ಮತ್ತಷ್ಟು ಹತ್ತಿರ: ಫಿಲ್ಮಿ ಶೈಲಿಯಲ್ಲಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡ್ತಿದ್ದಾರೆ ಕ್ರೇಜಿಸ್ಟಾರ್

  |

  ಇವತ್ತು ಸಾಮಾಜಿಕ ಜಾಲತಾಣಗಳನ್ನು ಬಳಸದೆ ಇರುವವರ ಸಂಖ್ಯೆ ತೀರ ವಿರಳ. ಫೇಸ್ ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಅಂತ ಜನ ಹೆಚ್ಚು ಸೋಶಿಯಲ್ ಮೀಡಿಯಾದಲ್ಲೇ ಮುಳುಗಿರುತ್ತಾರೆ. ಅದರಲ್ಲೂ ಸಿನಿ ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾ ಮತ್ತಷ್ಟು ಹತ್ತಿರ.

  ಸಿನಿಮಾ ಪ್ರಮೋಷನ್, ಅಭಿಮಾನಿಗಳ ಜೊತೆ ಸಂವಾದ ಸೇರಿದಂತೆ ಪ್ರತಿಯೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣದ ಮೂಲಕವೇ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣವನ್ನು ಬಳಸದೆ ಇರುವ ಕಲಾವಿದರು ತೀರ ಅಪರೂಪ. ಆದರೆ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಸೋಶಿಯಲ್ ಮೀಡಿಯಾದಿಂದ ತುಂಬಾ ದೂರ ಉಳಿದ್ದರು.

  ಇನ್ಮುಂದೆ ಸುದೀಪ್ ಮಾಡಬೇಕಿರುವ ಕೆಲಸಗಳ ಬಗ್ಗೆ ನಟ ರವಿಚಂದ್ರನ್ ಹೇಳಿದ್ದೇನು?ಇನ್ಮುಂದೆ ಸುದೀಪ್ ಮಾಡಬೇಕಿರುವ ಕೆಲಸಗಳ ಬಗ್ಗೆ ನಟ ರವಿಚಂದ್ರನ್ ಹೇಳಿದ್ದೇನು?

  ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಯಾವುದನ್ನೂ ಸಹ ಕ್ರೇಜಿಸ್ಟಾರ್ ಬಳಸುತ್ತಿರಲಿಲ್ಲ. ಆದರೀಗ ರವಿಚಂದ್ರನ್ ಕೂಡ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ರವಿಚಂದ್ರನ್ ಸುಳಿವು ನೀಡಿದ್ದಲ್ಲದೆ, ಫಿಲ್ಮಿ ಶೈಲಿಯಲ್ಲಿ ಎಂಟ್ರಿಗೆ ಸಜ್ಜಾಗಿದ್ದಾರೆ. ಸದ್ಯ ಪುಟ್ಟ ಟೀಸರ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್‌ಗೆ ರವಿಚಂದ್ರನ್ ಸದ್ಯಯಲ್ಲೇ ಪದಾರ್ಪಣೆ ಮಾಡಲಿದ್ದಾರೆ.

  ಆದರೆ ಯಾವತ್ತು ಅಂತ ಇನ್ನು ಡೇಟ್ ರಿವೀಲ್ ಮಾಡಿಲ್ಲ. 'ಕಮಿಂಗ್ ಸೂನ್..' ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಮುಂದೆ ಕ್ರೇಜಿ ಸ್ಟಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರಲಿದ್ದಾರೆ. ತಮ್ಮ ಅಭಿಪ್ರಾಯ ಮತ್ತು ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೂ ನೇರ ಉತ್ತರ ನೀಡಲಿದ್ದಾರೆ. ಆದರೆ ಯಾವಾಗ ಎಂದು ಕಾದು ನೋಡಬೇಕು.

  ಜಿಮ್ ಮೇಲಿರುವ ನಿರ್ಬಂಧ ತೆಗೆಯುವಂತೆ ಯಶ್ ಒತ್ತಾಯ | Filmibeat Kannada

  ರವಿಚಂದ್ರನ್ ಸದ್ಯ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರವಿಚಂದ್ರನ್ ಗುಣಭದ್ರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರವಿ ಬೋಪಣ್ಣ ಸಿನಿಮಾ ಕೂಡ ರವಿಚಂದ್ರನ್ ಕೈಯಲ್ಲಿದೆ. ಇನ್ನು ಯಾವೆಲ್ಲ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಸದ್ಯದಲ್ಲೇ ಬಹಿರಂಗವಾಗಲಿದೆ.

  English summary
  Actor V.Ravichandran will soon making with debut on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X