»   » ಇದು ಇಬ್ಬರೇ ನಟಿಸಿ, ಚಿತ್ರೀಕರಿಸಿದ ಸಿನಿಮಾ!!

ಇದು ಇಬ್ಬರೇ ನಟಿಸಿ, ಚಿತ್ರೀಕರಿಸಿದ ಸಿನಿಮಾ!!

By: ಯಶಸ್ವಿನಿ ಎಂ.ಕೆ
Subscribe to Filmibeat Kannada

ಸಿನಿಮಾ ಅಂದ್ರೆ ಹಲವು ಕಲಾವಿದರು ಬೇಕು. ಕ್ಯಾಮೆರಾ ಮ್ಯಾನ್‌, ನಿರ್ದೇಶಕ, ನಟ, ನಟಿ, ಚಿತ್ರೀಕರಣಕ್ಕೆ ಹಲವು ಸಹಾಯಕರು ಬೇಕು ಅಲ್ವಾ? ಆದ್ರೆ ಇಬ್ಬರೇ ನಟಿಸಿ, ಅದೇ ಇಬ್ಬರು ಛಾಯಾಗ್ರಾಹಕರಾಗಿ ಒಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದರೆ ನಂಬ್ತಿರಾ?... ಖಂಡಿತ ನಂಬಲೇ ಬೇಕು.

ಮೈಸೂರಿನ ಕುವೆಂಪು ನಗರದ ನಾಗರಾಜ್ ಹಾಗು ಕೃಷ್ಣನಾಗ್ ಇಬ್ಬರೇ 'ವೀ2' ಎಂಬ ಸಿನಿಮಾವನ್ನು ಸದ್ದಿಲ್ಲದೇ ನಿರ್ಮಿಸುತ್ತಿದ್ದಾರೆ. ನಾಗರಾಜ್‌ ಆಲಿಯಾಸ್ ಭಯಾನಕ ನಾಗ ರವರು ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಇಬ್ಬರೇ ಕಲಾವಿದರು. ಅವರೇ ಕ್ಯಾಮೆರಾ ಮ್ಯಾನ್‌ ಗಳು ಸಹ.

'V2' Kannada Movie Making by only Two Person

'ವೀ2' ಸಿನಿಮಾ ಚಿತ್ರೀಕರಣವನ್ನು ನಾಗರಾಜ್‌ ಮತ್ತು ಅವರ ಸ್ನೇಹಿತ ಸೇರಿ ಇಬ್ಬರೇ ನಿರ್ಮಿಸುತ್ತಿದ್ದು, ಸಹಾಯಕ್ಕಾಗಿ ವಿಕ್ರಮ್‌ ಎಂಬ ಯುವಕನನ್ನು ಬಳಸಿಕೊಳ್ಳಲಾಗಿದೆ. 2 ಗಂಟೆ 15 ನಿಮಿಷ ಇರುವ ಚಿತ್ರ ಈಗಾಗಲೇ ಶೇ.80 ರಷ್ಟು ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಮಾತ್ರ ಬಾಕಿ ಇದೆಯಂತೆ.

30 ಲಕ್ಷ ವೆಚ್ಚದಲ್ಲಿ ಚಿತ್ರ ನಿರ್ಮಾಣ

ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕರಿಘಟ್ಟ ಸೇರಿದಂತೆ ಮೈಸೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ 'ವೀ2' ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ ಒಬ್ಬರು ಅಭಿನಯಿಸುವಾಗ ಮೊತ್ತೊಬ್ಬ ಕಲಾವಿದ ಕ್ಯಾಮೆರಾ ಹ್ಯಾಂಡಲ್ ಮಾಡಿ, ಮತ್ತೋರ್ವ ನಟನೆ ಮಾಡುವಾಗ ಇನ್ನೊಬ್ಬ ಕ್ಯಾಮೆರಾ ಹ್ಯಾಂಡಲ್ ಮಾಡಿ ಚಿತ್ರ ನಿರ್ಮಿಸಲಾಗುತ್ತಿದೆ. ಹಣದ ಹಿಂದೆ ಬಿದ್ದು ಕೆಲವರು ಯಾವ ರೀತಿ ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಾರೆ, ಕಷ್ಟ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿ, ವಾಮ ಮಾರ್ಗದ ಮೂಲಕ ಹಣ ಸಂಪಾದಿಸಲು ಹೋಗಿ ಏನೆಲ್ಲಾ ಕಷ್ಟ ಅನುಭವಿಸುತ್ತಾರೆ ಎಂಬುದು ಚಿತ್ರದ ಸಾರಾಂಶ.

'V2' Kannada Movie Making by only Two Person

ಮಗಳ ಮದುವೆ ಹಣದಲ್ಲಿ ಚಿತ್ರ ನಿರ್ಮಾಣ

ಈ ಭಯಾನಕ ನಾಗರಾಜ್ ಸಿನಿಮಾ ಹುಚ್ಚಿನಿಂದ ತಮ್ಮ ಮಗಳ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಚಿತ್ರಕ್ಕಾಗಿ ವೆಚ್ಚ ಮಾಡಿದ್ದಾರೆ. ಚಿತ್ರ ಗೆದ್ದೇ ಗೆಲ್ಲುತ್ತೆ, ಪ್ರೇಕ್ಷಕ ಪ್ರಭು ನಮ್ಮ ಕೈ ಹಿಡಿಯುತ್ತಾನೆ ಎಂಬ ನಂಬಿಕೆ ಅವರಿಗಿದೆಯಂತೆ. ಸಿನಿಮಾದಲ್ಲಿ ಹೊಡೆದಾಟ, ಬಡಿದಾಟ, ಮರಸುತ್ತುವ ಹಾಡುಗಳು ಇಲ್ಲವಂತೆ.

'V2' Kannada Movie Making by only Two Person

ನಾಗರಾಜ್‌ ರವರ ಹೊಸ ಪ್ರಯೋಗಾತ್ಮಕ ಚಿತ್ರ ನೋಡಲು ಸ್ಯಾಂಡಲ್ ವುಡ್ ಸಿನಿ ಪ್ರಿಯರು ಸ್ವಲ್ಪ ಸಮಯ ಕಾಯಬೇಕಿದೆ.

English summary
Kannada Movie 'V2' will be made only by two persons, Mysuru Nagaraju alias Bayanaka Naaga and Krishna Nag. Mysuru Nagaraju will be Producing and Directing along with Acting in the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada