ತೆಲುಗು ರಾಜ್ಯದಲ್ಲಿ ಕೆಜಿಎಫ್ ಗೆ ಸಿಕ್ಕಿದ್ದ ಬಲ ಪೈಲ್ವಾನ್ ಗೂ ಸಿಕ್ಕಿದೆ
Recommended Video
ಕೆಜಿಎಫ್ ಚಿತ್ರದ ಬಳಿಕ ಕನ್ನಡದ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ತಲುಪುತ್ತಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ.
ಕುರುಕ್ಷೇತ್ರ ಬಳಿಕ ಈಗ ಸುದೀಪ್ ಅಭಿನಯದ ಪೈಲ್ವಾನ್ ಸರದಿ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬರ್ತಿದೆ. ಕೆಜಿಎಫ್ ಚಿತ್ರಕ್ಕೆ ಎಲ್ಲ ಭಾಷೆಯಲ್ಲು ದೊಡ್ಡ ಯಶಸ್ಸು ಸಿಕ್ಕಿತ್ತು. ತೆಲುಗು ದೇಶದಲ್ಲಿ ಕೆಜಿಎಫ್ ಚಿತ್ರಕ್ಕೆ ಸಿಕ್ಕಿದ್ದ ಬಲ ಈಗ ಪೈಲ್ವಾನ್ ಗೂ ಸಿಕ್ಕಿದೆ.
ಹೌದು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕೆಜಿಎಫ್ ಸಿನಿಮಾ ವಿತರಣ ಮಾಡಿದ್ದ ವರಾಹಿ ಚಲನಚಿತ್ರ ಸಂಸ್ಥೆ ಅವರೇ ಪೈಲ್ವಾನ್ ಚಿತ್ರವನ್ನ ಕೂಡ ಹಂಚಿಕೆ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ವಿತರಣ ಸಂಸ್ಥೆ ಕಿಚ್ಚನ ಪೈಲ್ವಾನ್ ಗೆ ಸಾಥ್ ಕೊಡ್ತಿರುವುದು ಖುಷಿಯ ವಿಚಾರ.

ನಿನ್ನೆಯಷ್ಟೇ ಹೈದರಾಬಾದ್ ನಲ್ಲಿ ಪೈಲ್ವಾನ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಈ ಶೋಗೆ ಅತಿಥಿಯಾಗಿ ಆಗಮಿಸಿದ್ದರು.

ಈಗ, ಬಾಹುಬಲಿ ಚಿತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರ ಮನಗೆದ್ದಿರುವ ಸುದೀಪ್, ಈಗ ಪೈಲ್ವಾನ್ ತಾವೆ ಖುದ್ದು ಡಬ್ ಮಾಡಿದ್ದಾರೆ. ಉಳಿದಂತೆ ಸೆಪ್ಟೆಂಬರ್ 12 ರಂದು ಪೈಲ್ವಾನ್ ಚಿತ್ರಮಂದಿಕ್ಕೆ ಬರ್ತಿದ್ದು, ಕೃಷ್ಣ ನಿರ್ದೇಶನ ಮಾಡಿದ್ದಾರೆ. ಆಕಾಂಕ್ಷ್ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











