For Quick Alerts
  ALLOW NOTIFICATIONS  
  For Daily Alerts

  'ವಾಸ್ತುಪ್ರಕಾರ' ಬೇಸ್ತು ಬಿದ್ದು ಸುಸ್ತಾದ ಭಟ್ಟರು

  By ಜೀವನರಸಿಕ
  |

  ಹೌದು ಇದು ಸ್ಯಾಂಡಲ್ ವುಡ್ ನಲ್ಲಿ ಹಾಕಿರೋ ಲೆಕ್ಕಾಚಾರ. ನಾವ್ ಮಾತಾಡ್ತಿರೋದು ಅಂದ ಚಂದದ ಬಗ್ಗೆ ಅಲ್ಲ. ಅವರವರ ವಾಸ್ತು ಬಗ್ಗೆ. ಯಾವ ವಾಸ್ತು ಪ್ರವೀಣರು ಈ ಕೆಲಸ ಮಾಡಿದ್ರು ಅಂದ್ರೆ ಯೋಗರಾಜ ಭಟ್ಟರು. 'ವಾಸ್ತುಪ್ರಕಾರ' ಸಿನಿಮಾ ಶುರುವಾದಾಗಿನಿಂದ ಭಟ್ರು ತುಂಬಾನೇ ಚೇಂಜಸ್ ಮಾಡ್ತಿದ್ದಾರೆ.

  'ವಾಸ್ತುಪ್ರಕಾರ' ಅನ್ನೋ ಟೈಟಲ್ಗೊಂದು ಸಾಂಗ್ ಬರೆದ ಭಟ್ರು ಎಲೆಕ್ಷನ್ ಟೈಮಲ್ಲಿ ಪಬ್ಲಿಸಿಟಿ ಕಲೆಕ್ಷn ಜೋರಾಗೇ ಮಾಡಿದ್ರು. ಆಮೇಲೆ ಸೈಲೆಂಟಾಗಿ ಅಕ್ಷಯ ತೃತೀಯದ ದಿನ ಯಾರಿಗೂ ಹೇಳ್ದೇ ಮುಹೂರ್ತ ಮಾಡ್ಕೊಂಡು ಈಗ ಫಾರಿನ್ ಗೆ ಹಾರಿದ್ದಾರೆ.

  ಭಟ್ರ ಸಿನಿಮಾ ಶೂಟಿಂಗ್ ಫಾರೀನ್ನಲ್ಲಾ ಅಂತ ಕೆಲವರು ಅಚ್ಚರಿ ಪಟ್ಟಿದ್ದಾರೆ. ಆದರೆ ಅಲ್ಲೂ ಭಟ್ರು ಚೇಂಜ್ ಮಾಡಿದ್ದಾರೆ. ಮಲೇಶ್ಯಾದಿಂದ ಮತ್ತೊಂದು ಕಡೆ ಅಂತ ಹೇಳಿ ಅದೂ ಬೇಡ ಅಂತ ಹೇಳಿ ಮೂರನೇ ಲೊಕೇಷನನ್ನ ಫೈನಲ್ಲಾಗಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಲ್ಯಾಂಡ್ ಆಗಿ ವಾಸ್ತು ಚೆನ್ನಾಗಿದೆ ಅಂದಿದ್ದಾರೆ.

  ವಾಸ್ತುಪ್ರಕಾರ ಅನ್ನೋ ಪದ ಬಳಕೆ ಸ್ವಲ್ಪ ಜಾಸ್ತಿಯಾದ್ರೂ ಬೇಜಾರ್ ಮಾಡ್ಕೋಬೇಡಿ ಯಾಕಂದ್ರೆ ವಾಸ್ತುಪ್ರಕಾರ ಸರಿಯಾಗಿ ಬರ್ಬೇಕಲ್ಲ. ಅದೆಲ್ಲ ಓಕೆ ಈ ಹೀರೋಯಿನ್ಗಳ ವಾಸ್ತೂನೂ ಸರಿ ಇಲ್ಲದೆ ಅದನ್ನೂ ಚೇಂಜ್ ಮಾಡಿರೋ ಇಂಟರೆಸ್ಟಿಂಗ್ ಕಥೆ ಇಲ್ಲಿದೆ ನೋಡಿ.

  ರಾಗಿಣಿ - ಜಗ್ಗೇಶ್ ಗೆ ಜೋಡಿ

  ರಾಗಿಣಿ - ಜಗ್ಗೇಶ್ ಗೆ ಜೋಡಿ

  ವಾಸ್ತು ಪ್ರಕಾರ ಜಗ್ಗೇಶ್ ಸೆಲೆಕ್ಟ್ ಆದ ನಂತರ ಅವರಿಗೆ ಜೋಡಿಯಾಗಿ ರಾಗಿಣಿ ಬರ್ತಾರೆ ಅಂತ ಸುದ್ದಿಯಾಯ್ತು. ಆದ್ರೆ ಅದೂ ಕನ್ಫರ್ಮ್ ಆಗಲಿಲ್ಲ.

  ನೀತೂ ಅಥವಾ ರಾಗಿಣಿ

  ನೀತೂ ಅಥವಾ ರಾಗಿಣಿ

  ಸ್ವಲ್ಪ ದಿನಗಳಲ್ಲೇ ಭಟ್ಟರ ಸಿನಿಮಾಗೆ ವಾಸ್ತುಪ್ರಕಾರ ಸ್ವಲ್ಪ ದಪ್ಪ ಇರೋರು ಅಷ್ಟೇ ಹೈಟು ಇರೋರು ಬೇಕು ಅಂತ ನೀತೂ ಅಥವಾ ರಾಗಿಣಿ ಅಂತ ಸುದ್ದಿ ಬಂತು ಅದೂ ಬದಲಾಯ್ತು.

  ನವರಸನಾಯಕನಿಗೆ ನಿಖಿತಾ ಜೋಡಿ

  ನವರಸನಾಯಕನಿಗೆ ನಿಖಿತಾ ಜೋಡಿ

  ಈಗಾಗ್ಲೇ ಸಾಫ್ಟ್ ವೇರ್ ಗಂಡ ಸಿನಿಮಾದಲ್ಲಿ ಜಗ್ಗೇಶ್ ಗೆ ಜೋಡಿಯಾಗಿರೋ ನಿಖಿತಾ ಈಗ ಮತ್ತೆ ವಾಸ್ತುಪ್ರಕಾರದಲ್ಲೂ ನವರಸನಾಕಯಕನಿಗೆ ಜೋಡಿಯಂತೆ. ಇವರಿಬ್ಬರ ವಾಸ್ತು ಸರಿ ಬಂದಿರಬಹುದು ಅನ್ನಿಸ್ತಿದೆ.

  ಅಮೂಲ್ಯಾ ಹೈಟ್ ವಾಸ್ತು ಸರಿ ಇಲ್ಲ

  ಅಮೂಲ್ಯಾ ಹೈಟ್ ವಾಸ್ತು ಸರಿ ಇಲ್ಲ

  ವಾಸ್ತು ಪ್ರಕಾರದಲ್ಲಿರೋ ಮತ್ತೊಂದು ಜೋಡಿಯಲ್ಲಿ ರಕ್ಷಿತ್ ಶೆಟ್ಟಿಗೆ ಅಮೂಲ್ಯ ಫಿಕ್ಸ್ ಅಂತ ಸುದ್ದಿಯಾಯ್ತು. ಆದ್ರೆ ಅಮೂಲ್ಯ ಹೈಟ್ ರಕ್ಷಿತ್ ಶೆಟ್ಟಿ ಹೈಟ್ಗೆ ಮ್ಯಾಚ್ ಆಗಲ್ಲ ಅಂತ ಸುಮ್ಮನಾದ್ರು.

  ರಚಿತಾರಾಮ್ ಕೂಡ ಬರಲಿಲ್ಲ

  ರಚಿತಾರಾಮ್ ಕೂಡ ಬರಲಿಲ್ಲ

  ರಕ್ಷಿತ್ ಶೆಟ್ಟಿಗೆ ರಚಿತಾರಾಮ್ ಜೋಡಿ ಅಂದ್ರು. ರಚಿತಾರಾಮ್ 'ರಣವಿಕ್ರಮ'ದಲ್ಲಿ ಬಿಜಿ ಅಂತ ಆ ಸುದ್ದಿ ಕೂಡ ಠುಸ್ ಆಯ್ತು.

  ಈಗ ಐಶಾನಿ ಶೆಟ್ಟಿ

  ಈಗ ಐಶಾನಿ ಶೆಟ್ಟಿ

  ಭಟ್ರು ಕೊನೆಗೆ ಶೆಟ್ರಿಗೆ ಶೆಟ್ರ ವಾಸ್ತೂನೇ ಸರಿ ಹೊಂದೋದು ಅಂತ ಐಶಾನಿ ಶೆಟ್ಟಿ ಅನ್ನೋ ನಟಿಯನ್ನ ವಾಸ್ತುಪ್ರಕಾರ ಜೋಡಿಸಿದ್ದಾರೆ.

  English summary
  Sandalwood well known director Yograj Bhat frequently changing heroines and locations for his upcoming movie Vaastu Prakara. The shooting of Yograj Bhat's latest Kannada film Vaastu Prakara will be shot in Switzerland. The film was earlier planned to be shot in Malaysia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X