'ಕೆಜಿಎಫ್ 2' ಕೋಟೆಗೆ ತಮಿಳು ನಟನ ಆಗಮನ

'ಕೆಜಿಎಫ್' ಸಿನಿಮಾ ಮಾಡಿದ ಜಾದುವಿನಿಂದ 'ಕೆಜಿಎಫ್ 2' ಚಿತ್ರದ ಮೇಲೆ ಎಲ್ಲರೂ ಕಣ್ಣು ಇಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳಲ್ಲಿಯೂ ಸಿನಿಮಾ ದೊಡ್ಡ ಚರ್ಚೆ ಮಾಡುತ್ತಿದೆ.

ಬಾಲಿವುಡ್ ನಟ ಸಂಜಯ್ ದತ್ 'ಕೆಜಿಎಫ್ 2' ಸಿನಿಮಾದ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಬಂದಿತ್ತು. ಅದರ ನಂತರ ಇದೀಗ ಮತ್ತೊಬ್ಬ ಪರಭಾಷೆಯ ನಟ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

ತಮಿಳಿನ ನಟ ಶರಣ್ 'ಕೆಜಿಎಫ್ 2' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ವಿಟ್ಟರ್ ನಲ್ಲಿ ಈ ರೀತಿಯ ಪೋಸ್ಟ್ ಗಳು ಹರಿದಾಡುತ್ತಿದೆ. ಈ ಪೋಸ್ಟ್ ಅನ್ನು ಸ್ವತಃ ಅವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ನಂಬಲು ಅರ್ಹವಾದ ಸುದ್ದಿ ಅನಿಸುತ್ತಿದೆ.

Vada Chennai Fame Saran Enters To Kgf Chapter 2 Movie Team

ಈ ಹಿಂದೆ ನಟ ಧನುಷ್ ಜೊತೆಗೆ 'ವಡ ಚೆನ್ನೈ' ಸಿನಿಮಾದಲ್ಲಿ ನಟಿಸಿದ್ದ ಶರಣ್ ಈಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಯುವಕನಾಗಿರುವ ರಾಕಿ ರೋಲ್ ನಲ್ಲಿ ಶರಣ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳಿದೆ. ಆದರೆ, ಅವರ ಪಾತ್ರದ ಬಗ್ಗೆ ಅಧಿಕೃತ ಘೋಷಣೆ ಆಗುವ ವರೆಗೆ ಕಾಯಬೇಕಿದೆ.

'ಕೆಜಿಎಫ್ 2' ಹೊಂಬಾಳೆ ಫಿಲ್ಮ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾವಾಗಿದೆ.

More from Filmibeat

English summary
'Vada Chennai' fame actor Saran enters to KGF chapter 2 movie team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X