''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು
''ಎಲ್ರು ಓದಿ ಪಾಸ್ ಆಗಿ ದೊಡ್ಡ ಮನುಷ್ಯರಾದ್ರು. ಇಲ್ಲಿ ಮಲೆನಾಡಿನಲ್ಲಿ ಹೆಣ ಎತ್ತುವುದಕ್ಕೂ ಯುವಕರಿಲ್ಲ ಇಲ್ಲ. ಮಲೆನಾಡು ವೃದ್ಧಾಶ್ರಮ ಆಗಿದೆ.''
ಇದು ಪಿಯುಸಿ ಫೇಲ್ ಆಗಿ ಹಳ್ಳಿಯಲ್ಲೇ ಉಳಿಯುವ ಒಬ್ಬ ಹುಡುಗನ ಮಾತು. ಫೇಲ್ ಆದೆ ಎಂಬ ಕಾರಣಕ್ಕೆ ಈ ಹುಡುಗ ಹಳ್ಳಿಯಲ್ಲಿ ಇದ್ದಾನೆ ಎನ್ನುವುದಕ್ಕಿಂತ, ಹಳ್ಳಿಯಲ್ಲೇ ಉಳಿಯಬೇಕು ಎಂಬ ಕಾರಣಕ್ಕೆ ಈತ ಫೇಲ್ ಆಗಿದ್ದಾನೆ. ಎಲ್ಲರೂ ಪಾಸ್ ಆಗಿ ಸಿಟಿಗೆ ಹೋದ್ರೆ ಮಲೆನಾಡಿನಲ್ಲಿ ಇರುವವರು ಯಾರು?.
ಈ ವಿಷಯವನ್ನೇ ಇಟ್ಟುಕೊಂಡು ಮಾಡಿರುವ ಕಿರುಚಿತ್ರ 'ವಡ್ಡಾರಾಧಕ'. ಈ ಸಣ್ಣ ಸಿನಿಮಾ ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರಶಂಸೆ ಪಡೆದಿದೆ. ಈ ಚಿತ್ರದ ವಿಷಯ ತುಂಬ ತುಂಬ ಚೆನ್ನಾಗಿದೆ. ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದ ಹುಡುಗರಿಗೆ ಈ ಕಿರುಚಿತ್ರ ಬಹಳ ಹತ್ತಿರ ಆಗುತ್ತದೆ. ಸಿನಿಮಾ ನೋಡಿದವರಿಗೆ ಅವರ ಊರು ನೆನಪಿಗೆ ಬರುತ್ತದೆ.

ಕಿರುಚಿತ್ರದ ಎಲ್ಲ ಪಾತ್ರಗಳು ತುಂಬ ಚೆನ್ನಾಗಿದೆ. ಪಿಯುಸಿ ಹುಡುಗನಾಗಿ ಅನೀಶ್ ಎಸ್ ಶರ್ಮ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಸದಾನಂದ ಶರ್ಮ, ಸತ್ಯನಾರಾಯಣ ರಾವ್ ಹಾಗೂ ಗಂಗಾ ಭವಾನಿ ನಟಿಸಿದ್ದಾರೆ. ಅನೀಶ್ ಎಸ್ ಶರ್ಮ ಅವರೇ ಇದರ ನಿರ್ದೇಶನ ಮಾಡಿದ್ದಾರೆ.
ಕ್ಯಾಮರಾ ವರ್ಕ್ ಮತ್ತು ಸಂಕಲನ ತನ್ವಿಕ್ ಗೌಡ, ಚೇತನ್ ಕುಮಾರ್ ಸಂಗೀತ 'ವಡ್ಡಾರಾಧಕ'ಗೆ ಪ್ಲಾಸ್ ಪಾಯಿಂಟ್ ಆಗಿದೆ. ಬೇರೆಲ್ಲ ಕಿರುಚಿತ್ರಗಳಿಗಿಂತ ತುಂಬ ಹೊಸತನದಿಂದ ಕೂಡಿದೆ. ಮಲೆನಾಡಿನ ಸೌಂದರ್ಯದ ಜೊತೆಗೆ ಅದ್ಭುತ ವಿಷಯವನ್ನು ಮನಮುಟ್ಟುವ ಹಾಗೆ ಹೇಳಿದ್ದಾರೆ.
ಅಂದಹಾಗೆ, ನಟ ಸತೀಶ್ ನೀನಾಸಂ ಆಡಿಯೋ ಹೌಸ್ ಯೂ ಟ್ಯೂಬ್ ಚಾನಲ್ ನಲ್ಲಿ ವಡ್ಡಾರಾಧಕ' ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ. ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











