For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಜೊತೆಗೆ ನಟಿ ವೈಭವಿ ಶಾಂಡಿಲ್ಯ ಹೆಸರು: ಏನಿದು ಹೊಸ ವಿಚಾರ?

  |

  ನಟ ಧ್ರುವ ಸರ್ಜಾ ಜೊತೆಗೆ ಹೊಸ ನಾಯಕಿಯ ಹೆಸರು ತಳುಕು ಹಾಕಿಕೊಂಡಿದೆ. ನಟಿ ವೈಭವಿ ಶಾಂಡಿಲ್ಯ ಹೆಸರು ಧ್ರುವ ಸರ್ಜಾ ಜೊತೆಗೆ ಕೇಳಿ ಬಂದಿದೆ. ಇವರಿಬ್ಬರ ಹೆಸರು ತಳುಕು ಹಾಕಿಕೊಳ್ಳಲು ಬಲವಾದ ಕಾರಣ ಧ್ರುವ ಅಭಿನಯದ ಮುಂದಿನ ಸಿನಿಮಾ 'ಮಾರ್ಟಿನ್'.

  'ಮಾರ್ಟಿನ್' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸದ್ಯ ಚಿತ್ರಕ್ಕೆ ನಾಯಕಿಯ ಆಗಮನ ಆಗಿದ್ದು, ಚಿತ್ರೀಕರಣದಲ್ಲಿ ವೈಭವಿ ಪಾಲ್ಗೊಂಡಿದ್ದಾರೆ.

  ಅಷ್ಟಕ್ಕೂ ಈ ಬಾರಿ ಧ್ರುವ ಸರ್ಜಾ ಅವರ ಜೊತೆಗೆ ತೆರೆಹಂಚಿಕೊಳ್ಳಲಿರುವ ನಟಿಯ ಬಗ್ಗೆ ಅಧಿಕೃತವಾಗಿ ಚಿತ್ರ ತಂಡ ಹೇಳಿ ಕೊಂಡಿಲ್ಲ. ಆದರೆ ಈ ಸುದ್ದಿ ಈಗ ಹೊರ ಬಿದ್ದಿದೆ ಧ್ರುವ ಸರ್ಜಾ ಅವರ ಜೊತೆಗೆ ಮಾರ್ಟಿನ್‌ನಲ್ಲಿ 'ವೈಭವಿ ಶಾಂಡಿಲ್ಯ' ನಾಯಕಿ ಆಗಿ ನಟಿಸುತ್ತಿದ್ದಾರೆ.

  ಭರ್ಜರಿಯಾಗಿ ನಡೆಯುತ್ತಿದೆ ಮಾರ್ಟಿನ್ ಶೂಟಿಂಗ್!

  ಭರ್ಜರಿಯಾಗಿ ನಡೆಯುತ್ತಿದೆ ಮಾರ್ಟಿನ್ ಶೂಟಿಂಗ್!

  ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಕನ್ನಡದ ಬಹುನಿರೀಕ್ಷೆ ಚಿತ್ರಗಳಲ್ಲಿ ಒಂದು. ಪೊಗರು ನಂತರ ಧ್ರುವ ಸರ್ಜಾ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಮಾರ್ಟಿನ್ ಲುಕ್‌ ಈಗಾಗಲೇ ಬಿಡುಗಡೆ ಆಗಿದೆ. ಚಿತ್ರದ ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಲುಕ್‌ ಅನಾವರಣ ಆಗಿದೆ. ಸದ್ಯ ಚಿತ್ರದ ನಾಯಕಿ ಯಾರು ಎನ್ನುವುದು ಗೊತ್ತಾಗಿದೆ. ಚಿತ್ರದ ಮುಂದಿನ ಹಂತದ ಚಿತ್ರೀಕರಣ ಆರಂಭ ಆಗಿದ್ದು, ನಟಿ ವೈಭವಿ ಶಾಂಡಿಲ್ಯ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ.

  ವೈಭವಿ ಶ್ಯಾಂಡಿಲ್ಯಗೆ ಇದು ಕನ್ನಡದ 3ನೇ ಚಿತ್ರ!

  ವೈಭವಿ ಶ್ಯಾಂಡಿಲ್ಯಗೆ ಇದು ಕನ್ನಡದ 3ನೇ ಚಿತ್ರ!

  ಮರಾಠಿ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ವೈಭವಿ ಶ್ಯಾಂಡಿಲ್ಯ ರಾಜ್‌ ವಿಷ್ಣು ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಯೋಗರಾಜ್‌ ಭಟ್‌ ನಿರ್ದೇಶನದ ಗಾಳಿಪಟ2 ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ 'ಮಾರ್ಟಿನ್' ಚಿತ್ರಕ್ಕೂ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

  'ಮಾರ್ಟಿನ್' ಹಿಟ್‌ ಕೊಡುವುದು ಅನಿವಾರ್ಯ!

  'ಮಾರ್ಟಿನ್' ಹಿಟ್‌ ಕೊಡುವುದು ಅನಿವಾರ್ಯ!

  ನಟ ಧ್ರುವ ಸರ್ಜಾ ಅಭಿನಯದ ಮೊದಲ ಮೂರು ಸಿನಿಮಾಗಳು ಹಿಟ್‌ ಲಿಸ್ಟ್‌ ಸೇರಿವೆ. ಧ್ರುವ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಅದ್ದೂರಿ ಸೂಪರ್ ಹಿಟ್‌ ಆಯ್ತು. 'ಅದ್ದೂರಿ' ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನವಿತ್ತು. ಬಳಿಕ 'ಬಹದ್ದೂರ್', 'ಭರ್ಜರಿ' ಚಿತ್ರಗಳು ಹಿಟ್ ಲಿಸ್ಟ್‌ ಸೇರಿದ್ದವು. ಇನ್ನೂ ಇತ್ತೀಚೆಗೆ ತೆರೆಗೆ ಬಂದ 'ಪೊಗರು' ಅಂದು ಕೊಂಡ ಹಾಗೆ ಯಶಸ್ಸಿನ ಶಿಖರ ಏರಲಿಲ್ಲ. ಹಾಗಾಗಿ ಈಗ 'ಮಾರ್ಟಿನ್' ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಮನೆ ಮಾಡಿವೆ. ಈ ಚಿತ್ರ ಹಿಟ್‌ ಲಿಸ್ಟ್‌ ಸೇರುವ ಅನಿವಾರ್ಯತೆಯೂ ಎದುರಾಗಿದೆ.

  ಇನ್ಮುಂದೆ ಸಿನಿಮಾ ಲೇಟ್ ಮಾಡಲ್ಲ ಧ್ರುವ!

  ಇನ್ಮುಂದೆ ಸಿನಿಮಾ ಲೇಟ್ ಮಾಡಲ್ಲ ಧ್ರುವ!

  ನಟ ಧ್ರುವ ಸರ್ಜಾ ಅವರ ಒಂದು ಸಿನಿಮಾದ ರಿಲೀಸ್ ಬಳಿಕ ಮತ್ತೊಂದು ತೆರೆಗೆ ಬರಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು. ಅದರಲ್ಲೂ ಲುಕ್‌ ಬದಲಾವಣೆಗಾಗಿ 'ಭರ್ಜರಿ' ಬಳಿಕ 'ಪೊಗರು' ರಿಲೀಸ್‌ ಆಗುವುದು ಹೆಚ್ಚು ತಡವಾಯಿತು. ಹಾಗಾಗಿ ಧ್ರುವ ಅವರ ಅಭಿಮಾನಿಗಳು ಹೆಚ್ಚು ಗ್ಯಾಪ್‌ ಕೊಡಬೇಡಿ ಎಂದು ಕೇಳಿಕೊಂಡಿದ್ದರು. ಹಾಗಾಗಿ ಧ್ರುವ ಸರ್ಜಾ ಕೂಡ ಇನ್ನು ಮುಂದೆ ಸಿನಿಮಾ ಮಾಡುವುದನ್ನು ತಡ ಮಾಡುವುದಿಲ್ಲ. ವರ್ಷಕ್ಕೆ ಒಂದಾದರೂ ಸಿನಿಮಾ ಮಾಡುತ್ತೇನೆ ಎಂದಿದ್ದರು. ಈಗ 'ಮಾರ್ಟಿನ್' ಬಳಿಕ ಧ್ರುವ ನಿರ್ಮಾಪಕ ವಿಶ್ವನಾಥ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

  English summary
  Actress Vaibhavi Shandilya female lead opposite Dhruva Sarja in Martin Movie, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X