For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ 2' ಚಿತ್ರದ ಪಾತ್ರ ಮಾಡಲು ಕಷ್ಟ ಆಯ್ತು: ವೈಭವಿ ಶಾಂಡಿಲ್ಯ ಮನದಾಳ

  |

  ಯೋಗರಾಜ್‌ ಭಟ್ ನಿರ್ದೇಶನದ 'ಗಾಳಿಪಟ 2' ಸಿನಿಮಾ ಸೂಪರ್ ಹಿಟ್ ಆಗಿದೆ. ಬಹಳ ದಿನಗಳ ನಂತರ ಭಟ್ರು ಹಾಗೂ ಗಣೇಶ್‌ಗೆ ಚಿತ್ರ ದೊಡ್ಡ ಬ್ರೇಕ್‌ ಕೊಟ್ಟಿದೆ. ಅನಂತ್ ನಾಗ್, ಗಣೇಶ್, ದಿಗಂತ್, ರಂಗಾಯಣ ರಘುರಂತಹ ಪ್ರತಿಭಾವಂತ ಕಲಾವಿದರ ನಡುವೆ ಗಮನ ಸೆಳೆಯುವ ಇನ್ನೊಬ್ಬರೆಂದರೆ, ಅದು ಶ್ವೇತಾ ಪಾತ್ರಧಾರಿ ವೈಭವಿ ಶಾಂಡಿಲ್ಯ. ಈ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಮರಾಠಿ ಬೆಡಗಿ ಮಾತನಾಡಿದ್ದಾರೆ.

  'ಗಾಳಿಪಟ- 2' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ವೈಭವಿ ಮೂಲತಃ ಮರಾಠಿಯವರು. ಈಗಾಗಲೇ ಕೆಲವು ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ವೈಭವಿ, ಕೆಲವು ವರ್ಷಗಳ ಹಿಂದೆ 'ರಾಜ್-ವಿಷ್ಣು' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ 'ಗಾಳಿಪಟ- 2' ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ತಮ್ಮ ನಟನೆ ಹಾಗೂ ಚೆಲುವಿನಿಂದ ಮೋಡಿ ಮಾಡಿದ್ದಾರೆ.

  4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!

  ರಮೇಶ್ ರೆಡ್ಡಿ ನಿರ್ಮಾಣದ 'ಗಾಳಿಪಟ- 2' ಚಿತ್ರದಲ್ಲಿ ಗಣೇಶ್ ಜೊತೆಗೆ ದಿಗಂತ್, ಲೂಸಿಯಾ ಪವನ್‌ ಕುಮಾರ್ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯಾ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್‌ನಲ್ಲಿ ಸಾಂಗ್ಸ್ ಹಿಟ್‌ ಆಗಿ ಚಿತ್ರಕ್ಕೆ ಶಕ್ತಿ ತುಂಬಿತ್ತು. ಚಿತ್ರದಲ್ಲಿ ನಟಿಸಿದ ಅನುಭವವನ್ನು ನಟಿ ವೈಭವಿ ಶಾಂಡಿಲ್ಯ ಹಂಚಿಕೊಂಡಿದ್ದಾರೆ.

  ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು

  ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು

  ಶ್ವೇತಾ ಪಾತ್ರ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದ ಪಾತ್ರ ಎನ್ನುವ ವೈಭವಿ, "ನಾನು ನಿಜಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಎಮೋಷನಲ್ ಆಗಿ ಇರುವಂತಹ ಪಾತ್ರ ನನ್ನದು. ಹಾಗಾಗಿ, ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು. ಆದರೆ, ಇಡೀ ಚಿತ್ರತಂಡದ ಸಹಾಯದೊಂದಿಗೆ ಆ ಪಾತ್ರ ನಿರ್ವಹಿಸಿದೆ" ಎಂದು ಹೇಳಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ 'ಗಾಳಿಪಟ 2' ಭರ್ಜರಿ ಸಕ್ಸಸ್: ಗೆಲುವಿಗೆ 5 ಪ್ರಮುಖ ಕಾರಣಗಳು?ಬಾಕ್ಸಾಫೀಸ್‌ನಲ್ಲಿ 'ಗಾಳಿಪಟ 2' ಭರ್ಜರಿ ಸಕ್ಸಸ್: ಗೆಲುವಿಗೆ 5 ಪ್ರಮುಖ ಕಾರಣಗಳು?

  ಜನ ನನ್ನ ಪಾತ್ರ ಗುರ್ತಿಸಿದ್ದು ಖುಷಿ ಕೊಟ್ಟಿದೆ

  ಜನ ನನ್ನ ಪಾತ್ರ ಗುರ್ತಿಸಿದ್ದು ಖುಷಿ ಕೊಟ್ಟಿದೆ

  "ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದಾಗಿತ್ತು. ಅಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು ನಟಿಸಿದ್ದು ಫಲ ನೀಡಿದೆ. ಜನರ ಪ್ರೀತಿ ನೋಡಿದಾಗ ಬಹಳ ಖುಷಿಯಾಗುತ್ತದೆ. ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಅಭಿನಯವನ್ನು ಜನ ಗುರುತಿಸಿ ಮಾತನಾಡುವಾಗ ಹೃದಯ ತುಂಬಿ ಬರುತ್ತದೆ ಎನ್ನುವ ವೈಭವಿ, 'ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ಗಾಳಿಪಟ 2 ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದರು".

  ಜನ ನನ್ನ ಜೊತೆ ಸೆಲ್ಫಿ ಕೇಳ್ತಾರೆ

  ಜನ ನನ್ನ ಜೊತೆ ಸೆಲ್ಫಿ ಕೇಳ್ತಾರೆ

  "ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ, ನನ್ನನ್ನು 'ಗಾಳಿಪಟ -2' ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ" ಎಂದಿದ್ದಾರೆ. ಸದ್ಯ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್ ಚಿತ್ರದಲ್ಲಿ ವೈಭವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  'ಮಾರ್ಟಿನ್' ಬಗ್ಗೆ ವೈಭವಿ ಮಾತು

  'ಮಾರ್ಟಿನ್' ಬಗ್ಗೆ ವೈಭವಿ ಮಾತು

  "ಮಾರ್ಟಿನ್ ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ. ಅದು ಇನ್ನೊಂದು ಅದ್ಭುತವಾದ ಅನುಭವ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾದ ಪಾತ್ರ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾನಿಸಿಕೊಂಡಿದ್ದೇನೆ" ಎಂದು 'ಮಾರ್ಟಿನ್' ಚಿತ್ರದ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

  ಡ್ರಗ್ ಅಡಿಕ್ಟ್ ಆಗಿ ನಟಿಸುವ ಆಸೆ- ವೈಭವಿ

  ಡ್ರಗ್ ಅಡಿಕ್ಟ್ ಆಗಿ ನಟಿಸುವ ಆಸೆ- ವೈಭವಿ

  ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟ ಎನ್ನುವ ವೈಭವಿ, "ಯಾವುದೋ ಒಂದು ತರಹದ ಪಾತ್ರಕ್ಕೆ ನನಗೆ ಸೀಮಿತವಾಗುವುದಕ್ಕೆ ಇಷ್ಟವಿಲ್ಲ. ನನಗೆ ಡ್ರಗ್ ಅಡಿಕ್ಟ್ ಆಗಿ ನಟಿಸುವಾಸೆ. ಹಾರರ್ ಚಿತ್ರದಲ್ಲಿ ನಟಿಸುವಾಸೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವಾಸೆ. ಸೂಕ್ಷ್ಮಸಂವೇದನೆಯ ಚಿತ್ರಗಳ ಜೊತೆಗೆ ರಾಜಮೌಳಿ ಅವರ ಶೈಲಿಯ ಲಾರ್ಜರ್ ದ್ಯಾನ್ ಲೈಫ್ ಚಿತ್ರಗಳಲ್ಲೂ ನಟಿಸುವುದಕ್ಕೆ ಆಸೆ ಇದೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ. 'ಮಾರ್ಟಿನ್' ಬಿಟ್ಟು ಬೇರೆ ಸಿನಿಮಾ ಇನ್ನು ಒಪ್ಪಿಕೊಂಡಿಲ್ಲ ಎಂದಿದ್ದಾರೆ.

  English summary
  Vaibhavi Shandilya overwhelmed with audience response to Gaalipata 2. Know More.
  Monday, September 12, 2022, 15:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X