»   » ಈ ಸಿನಿಮಾ ನೋಡಿದವರಿಗೆ 'ಬೈಕ್' ಗೆಲ್ಲುವ ಅವಕಾಶ.!

ಈ ಸಿನಿಮಾ ನೋಡಿದವರಿಗೆ 'ಬೈಕ್' ಗೆಲ್ಲುವ ಅವಕಾಶ.!

Posted By:
Subscribe to Filmibeat Kannada

ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯಲು ಕನ್ನಡ ಸಿನಿಮಾ ನಿರ್ಮಾಪಕರು ಹೊಸ ಹೊಸ ರೀತಿಯ ಯೋಚನೆಗಳನ್ನ ಮಾಡ್ತಿದ್ದಾರೆ. ಸಿನಿಮಾ ನೋಡಿದವರಿಗೆ ಲಕ್ಕಿ ಕೂಪನ್, ಗಿಫ್ಟ್ ಆಗಿ ಏನಾದರೂ ವಸ್ತುಗಳು ಕೊಡುವುದನ್ನ ನೋಡಿದ್ದೀವಿ. ಈಗ ಇಲ್ಲೊಂದು ಚಿತ್ರತಂಡ ಅವರ ಸಿನಿಮಾ ನೋಡಿದವರಿಗೆ ಮೋಟರ್ ಬೈಕ್ ನೀಡಲು ನಿರ್ಧರಿಸಿದೆ.

ಈ ಸಿನಿಮಾ ಹೆಸರು 'ವೈರ'. ನವಸರನ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರವನ್ನ ಧರ್ಮಶ್ರೀ ಮಂಜುನಾಥ್ ಅವರು ನಿರ್ಮಾಣ ಮಾಡಿದ್ದು, ಇದಕ್ಕೆ ಮುಂಚೆ ಶ್ರೀ ಮುರುಳಿ ಅಭಿನಯದ 'ರಥಾವರ್' ಚಿತ್ರವನ್ನ ನಿರ್ಮಾಣ ಮಾಡಿದ್ದರು.

ಹಾಗಿದ್ರೆ, ಎಷ್ಟು ಜನರಿಗೆ ಬೈಕ್ ಸಿಗುತ್ತೆ. ಅವರನ್ನ ಹೇಗೆ ಆಯ್ಕೆ ಮಾಡಲಾಗುತ್ತೆ ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....

50 ಜನರಿಗೆ ಬೈಕ್

'ವೈರ' ಸಿನಿಮಾ ನೋಡಿದ 50 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಮೋಟರ್ ಬೈಕ್ ಗಿಫ್ಟ್ ಆಗಿ ನೀಡಲಾಗುವುದು. ಚಿತ್ರಮಂದಿರಕ್ಕೆ ಬಂದು 'ವೈರ' ವೀಕ್ಷಿಸಬೇಕು. ಲಕ್ಕಿ ಡಿಪ್ ಮೂಲಕ ರಾಜ್ಯದಲ್ಲಿ ಒಟ್ಟು 50 ಜನರನ್ನು ಆಯ್ಕೆ ಮಾಡಲಾಗುವುದು.

ಹೆಣ್ಣು ಮಕ್ಕಳಿಗೆ ಸ್ಕೂಟಿ

ಯುವಕರಿಗೆ ಮೋಟರ್ ಬೈಕ್ ನೀಡಲು ನಿರ್ಧರಿಸಿರುವ ಚಿತ್ರತಂಡ ಹೆಣ್ಣು ಮಕ್ಕಳಿಗೆ ಸಹಕಾರಿಯಾಗುವಂತೆ ಸ್ಕೂಟಿ ನೀಡಲಿದ್ದಾರಂತೆ.

ಅದೃಷ್ಟವಂತರ ಆಯ್ಕೆ ಹೇಗೆ...?

ಪ್ರತಿ ಜಿಲ್ಲೆಗೆ ಒಂದು ಮತ್ತು ಬೆಂಗಳೂರಿನ ಹಲವು ಕಡೆ ಸೇರಿ ಒಟ್ಟು 50 ಬೈಕ್ ನೀಡಲಾಗುವುದು. ಸಿನಿಮಾ ನೋಡಿದ ನಂತರ ಟಿಕೆಟ್ ಹಿಂದೆ ಅವರ ಫೋನ್ ನಂಬರ್ ಬರೆದು ಹಿಂತಿರುಗಿಸಬೇಕು. ಲಕ್ಕಿ ಡಿಪ್ ಮೂಲಕ ಕೆಲವರನ್ನ ಆಯ್ಕೆ ಮಾಡಿ, ಸಿನಿಮಾ ಬಗ್ಗೆ ಸಿಂಪಲ್ ಪ್ರಶ್ನೆಗಳನ್ನ ಅವರಿಗೆ ಕೇಳಲಾಗುವುದು. ಸರಿಯಾಗಿ ಉತ್ತರ ನೀಡಿದವರಿಗೆ ಬೈಕ್ ವಿತರಿಸಲಾಗುವುದಂತೆ.

'ವೈರ''ಬಿಡುಗಡೆ ಯಾವಾಗ

ಸದ್ಯ, ಚಿತ್ರೀಕರಣ ಪೂರ್ತಿ ಮುಗಿಸಿರುವ ಚಿತ್ರತಂಡ ಸೆಪ್ಟಂಬರ್ ಎರಡನೇ ವಾರ ಬೆಳ್ಳಿತೆರೆಗೆ ಬರುವ ತಯಾರಿಯಲ್ಲಿದೆ.

'ವೈರ' ಚಿತ್ರದ ಬಗ್ಗೆ...

ನವರಸನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಸ್ವತಃ ಅವರೇ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಕೆಲವು ಭಾಗಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ರವಿ ಬಸ್ರೂರ್ ಅವರು ಈ ಚಿತ್ರದ ಸಂಗೀತ ನಿರ್ದೇಶಕ. ಪ್ರಿಯಾಂಕಾ ನಾಯಕಿ ಆಗಿದ್ದಾರೆ.

English summary
Producer Manjunath has announced gift of 50 motorbikes at the name of 'vaira' release in karnataka. the Movie releaseing on september second week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada