For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಮೊದಲ ಶೋ ಟಿಕೆಟ್ ಕೊಡ್ತೀನಂದ್ರು ಪ್ರಶಾಂತ್ ನೀಲ್: ಯಾರಿಗೆ? ಯಾಕೆ?

  |

  'ಕೆಜಿಎಫ್ 2' ಸಿನಿಮಾದ ಬಿಡುಗಡೆಗೆ ಈಗಾಗಲೇ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆ ದಿನವಂತೂ ಟಿಕೆಟ್‌ಗಾಗಿ ನೂಕು-ನುಗ್ಗಲು ಖಾಯಂ. ಒಂದು ಟಿಕೆಟ್‌ಗಾಗಿ ಸಾವಿರಾರುಗಟ್ಟಲೆ ವ್ಯಯಿಸಲು ಸಹ ಅಭಿಮಾನಿಗಳು ತಯಾರಾಗಿರುತ್ತಾರೆ.

  ಆದರೆ 'ಕೆಜಿಎಫ್ 2' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಮಾತ್ರ ಸಿನಿಮಾದ ಬಿಡುಗಡೆ ದಿನ ಮೊದಲ ಶೋಗೆ ಟಿಕೆಟ್ ಅನ್ನು ನೀಡುವುದಾಗಿ ಅಭಿಮಾನಿಯೊಬ್ಬರಿಗೆ ಭರವಸೆ ನೀಡಿದ್ದಾರೆ.

  ವೈವಸ್ವತ್ ತಾಂಡುಲ ಎಂಬ 12ನೇ ತರಗತಿ ವಿದ್ಯಾರ್ಥಿಯೊಬ್ಬ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆಗೆ ಪತ್ರವೊಂದನ್ನು ಬರೆದಿದ್ದು, 'ಹೊಂಬಾಳೆ', 'ಕೆಜಿಎಫ್ 2' ಎಂದು ಅಕ್ಕಿ ಕಾಳಿನ ಮೇಲೆ ಸುಂದರವಾಗಿ ಬರೆದು ಅದನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಪತ್ರದಲ್ಲಿ ಹೊಂಬಾಳೆ ಫಿಲಮ್ಸ್‌ನಿಂದ ಹೊರಬರುತ್ತಿರುವ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿದ್ಯಾರ್ಥಿ ವೈವಸ್ವತ್ ತಾಂಡುಲ, ''ನಿಮ್ಮ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ, ಮೆಚ್ಚಿಕೊಂಡಿದ್ದೇನೆ. 'ಕೆಜಿಎಫ್ 2' ಸಿನಿಮಾವು ದೊಡ್ಡ ಯಶಸ್ಸು ಗಳಿಸಲಿ'' ಎಂದು ಹಾರೈಸಿದ್ದಾರೆ.

  ವೈವಸ್ವತ್ ತಾಂಡುಲಾ ಅಕ್ಕಿಕಾಳಿನ ಮೇಲೆ ಬರವಣಿಗೆ ಮಾಡುವ ಅಪರೂಪದ ಕಲಾವಿದನಾಗಿದ್ದು, ವೈವಸ್ವತ್‌ನ ಪ್ರತಿಭೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ದೊರೆತಿದೆ ಜೊತೆಗೆ ರಾಜ್ಯ ಪ್ರಶಸ್ತಿಯೂ ದೊರೆತಿದೆ.

  KGF 2 ಮೊದಲ ಶೋ ಟಿಕೆಟ್ ಕೊಡ್ತೀನಂದ್ರು ಪ್ರಶಾಂತ್ ನೀಲ್ : ಯಾರಿಗೆ ಯಾಕೆ ?

  ವೈವಸ್ವತ್‌ನ ಉಡುಗೊರೆಯಿಂದ ಖುಷಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್, 'ಕೆಜಿಎಫ್ 2' ಸಿನಿಮಾದ ಮೊದಲ ದಿನದ ಮೊದಲ ಶೋಗೆ ಟಿಕೆಟ್ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಭರವಸೆ ನೀಡಿದ್ದಾರೆ. ಹೊಂಬಾಳೆ ಫಿಲಮ್ಸ್ ಸಹ ವೈವಸ್ವತ್ ಕಳಿಸಿರುವ ಉಡುಗೊರೆಯ ಚಿತ್ರ ಹಾಗೂ ವೈವಸ್ವತ್ ಬರೆದಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  English summary
  Vaivaswat Tandula created Hombale Films and KGF rice inscription; Prashanth Neel promised FDFS Ticket for KGF 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X