Valentine's Day: ಅಪ್ಪು to KGF: ಕನ್ನಡ ಸಿನಿಮಾಗಳಲ್ಲಿವೆ ಇಂಟ್ರೆಸ್ಟಿಂಗ್ ಲವ್ ಪ್ರಪೋಸ್ ದೃಶ್ಯಗಳು

ಫೆಬ್ರವರಿ 14. ಈ ದಿನವನ್ನು ಜಗತ್ತಿನೆಲ್ಲೆಡೆ ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್‌ ಡೇ ಎಂದು ಆಚರಿಸಲಾಗುತ್ತದೆ. ಪ್ರೀತಿ, ಪ್ರೇಮ ಇಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಬಹುತೇಕ ಸಿನಿಮಾಗಳಲ್ಲಿ ಲವ್‌ಸ್ಟೋರಿಯದ್ದೇ ಕಾರುಬಾರು.

ಸಿನಿಮಾಗಳನ್ನು ನೋಡಿ ನಾಯಕ ನಾಯಕಿಯಂತೆ ಪ್ರೀತಿಸುವವರು ಇರುತ್ತಾರೆ. ಸಿನಿಮಾಗಳಿಂದ ಸ್ಫೂರ್ತಿಗೊಂಡು ಪ್ರೀತಿಸುವವರನ್ನು, ಪ್ರಪೋಸ್ ಮಾಡುವವರನ್ನು ನೋಡಬಹುದು. ಒಟ್ಟಾರೆ ಲವ್ ವಿಚಾರದಲ್ಲೂ ಸಿನಿಮಾಗಳನ್ನು ಯುವಜನತೆಯ ಮೇಲೆ ಗಾಢವಾದ ಪರಿಣಾಮ ಬೀರಿರುವುದು ಸುಳ್ಳಲ್ಲ. ಪ್ರೇಮ ಪಾಶಕ್ಕೆ ಸಿಲುಕಿದವರು ಈ ದಿನವನ್ನು ವಿಶೇಷವಾಗಿ ಆಚರಿಸಿದರೆ, ಒನ್‌ಸೈಡ್ ಲವ್ವಲ್ಲಿ ಇರುವವರು ಪ್ರಪೋಸ್ ಮಾಡಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದಹಾಗೆ ಕನ್ನಡ ಸಿನಿಮಾಗಳಲ್ಲೂ ನಾಯಕ ನಾಯಕಿಗೆ ಅಥವಾ ನಾಯಕನಿಗೆ ನಾಯಕ ಪ್ರಪೋಸ್ ಮಾಡುವ ಸಾಕಷ್ಟು ಸನ್ನಿವೇಶಗಳಿವೆ.

ನಿರ್ದೇಶಕರು ತಮ್ಮ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಲವ್ ಪ್ರಪೋಸ್ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಅಂತಹ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಅದರಲ್ಲಿ ಕೆಲವನ್ನು ನಾವು ಹೆಕ್ಕಿ ತಂದಿದ್ದೇವೆ.

ಬಾಗಿನ ಕೊಟ್ಟು ರಾಮಾಚಾರಿ ಪ್ರಪೋಸ್

ಬಾಗಿನ ಕೊಟ್ಟು ರಾಮಾಚಾರಿ ಪ್ರಪೋಸ್

'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಚಿತ್ರದಲ್ಲಿ ನಟ ಯಶ್, ರಾಧಿಕಾ ಪಂಡಿತ್‌ಗೆ ಬಾಗಿನ ಕೊಟ್ಟು ಪ್ರಪೋಸ್ ಮಾಡುವ ಸನ್ನಿವೇಶ ಸೂಪರ್ ಹಿಟ್ ಆಗಿತ್ತು. ಅದಾಗಲೇ ನಿಜ ಜೀವನದಲ್ಲೂ ಯಶ್‌- ರಾಧಿಕಾ ಪ್ರೀತಿಸುತ್ತಿದ್ದರು. ತಮ್ಮದೇ ಲವ್‌ ಸ್ಟೋರಿಯನ್ನು ತೆರೆಗೆ ತಂದಂತೆ ಕಾಣುತ್ತಿತ್ತು. ಯಶ್ ಹಾಗೂ ರಾಧಿಕಾ ಜೋಡಿಯನ್ನು ಸಂತೋಷ್ ಆನಂದ್‌ರಾಮ್ ನಿಜ ಜೀವನದ ಪ್ರೇಮಿಗಳು ಎನ್ನುವಂತೆ ತೋರಿಸಿದ್ದರು. ಇಬ್ಬರು ತಮ್ಮದೇ ಲವ್ ಸ್ಟೋರಿಯಲ್ಲಿ ಜೀವಿಸಿದ್ದರು. ದಿವ್ಯಾಗೆ ಬಾಗಿನ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವ ರಾಮಾಚಾರಿ, ಆಕೆಗೆ 'ಮಾರ್ಗರೆಟ್' ಎಂದು ನಾಮಕರಣ ಮಾಡ್ತಾನೆ. ಕನ್ನಡ ಸಿನಿಮಾಗಳಲ್ಲಿ ಲವ್ ಪ್ರಪೋಸ್ ಸೀನ್ ಅಂದಾಕ್ಷಣ ಈ ದೃಶ್ಯವನ್ನು ಮರೆಯೋಕೆ ಸಾಧ್ಯವಿಲ್ಲ.

ನಂದಿನಿ ಮುಂದೆ ಪ್ರೀತಂ ಭಾವುಕ

ನಂದಿನಿ ಮುಂದೆ ಪ್ರೀತಂ ಭಾವುಕ

ಇಂಡಸ್ಟ್ರಿ ಹಿಟ್ 'ಮುಂಗಾರು ಮಳೆ' ಚಿತ್ರದಲ್ಲೂ ನಟ ಗಣೇಶ್ ಪೂಜಾ ಗಾಂಧಿಗೆ ವಿಭಿನ್ನವಾಗಿ ಪ್ರಪೋಸ್ ಮಾಡ್ತಾರೆ. ಅದಾಗಲೇ ಎಂಗೇಜ್‌ಮೆಂಟ್ ಆಗಿರುವ ನಂದಿನಿ ಪ್ರೀತಿಲಿ ಪ್ರೀತಂ ಬೀಳ್ತಾನೆ. ಅವಳಿಂದ ದೂರ ಆಗಬೇಕು ಅಂತ ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುವುದಿಲ್ಲ. ಸೇಂದಿ ಕುಡಿಯುತ್ತಾ ಮಳೆಯಲ್ಲಿ ನೆನೆಯುತ್ತಾ ಪ್ರೀತಂ ಮನಸ್ಸಿನಲ್ಲಿರುವ ಅಷ್ಟು ವಿಚಾರವನ್ನು ನಂದಿನಿ ಮುಂದೆ ಹೇಳಿಕೊಳ್ಳುವ ಸನ್ನಿವೇಶ ಇದೆ. ಬಿಟ್ಟು ಕೊಟ್ಬಿಟ್ಟೆ ಕಣ್ರೀ ಎನ್ನುತ್ತಲೇ ನಂದಿನಿ ಮನಸ್ಸಿಗೆ ಲಗ್ಗೆ ಇಡುವ ಸನ್ನಿವೇಶ ಅದು. ಆ ದೃಶ್ಯದಲ್ಲಿ ಗಣಿ ಅಭಿನಯವನ್ನು ಕನ್ನಡ ಸಿನಿರಸಿಕರು ಮರೆಯೋದಿಲ್ಲ.

ಮೊದಲ ನೋಟದಲ್ಲಿ 'ಅಪ್ಪು' ಪ್ರಪೋಸ್

ಮೊದಲ ನೋಟದಲ್ಲಿ 'ಅಪ್ಪು' ಪ್ರಪೋಸ್

'ಅಪ್ಪು' ಸಿನಿಮಾದಲ್ಲಿ ಅಪ್ಪು (ಪುನೀತ್‌ ರಾಜ್‌ಕುಮಾರ್), ಸುಚಿತ್ರಾ(ರಕ್ಷಿತಾ)ನ ನೋಡಿದ ಕೂಡಲೇ ಐ ಲವ್ ಯು ಎಂದು ಹೇಳುವ ಸನ್ನಿವೇಶ ಇದೆ. ಇನ್ನು ಸುಚಿತ್ರಾ ನನಗೋಸ್ಕರ ಏನು ಬೇಕಾದರೂ ಮಾಡ್ತೀಯಾ, ಬಿಲ್ಡಿಂಗ್ ಮೇಲಿಂಗ್ ಜಂಪ್ ಮಾಡ್ತೀಯಾ ಅನ್ನೋದು, ಅಪ್ಪು ಜಂಪ್ ಮಾಡಿ ಅರ್ಧಕ್ಕೆ ಬಿಲ್ಡಿಂಗ್ ಹಿಡ್ಕೊಂಡು ವಾಪಸ್ ಬರೋದು, ನಾನು ಸತ್ತರೆ ನಿನ್ನನ್ನು ಯಾರು ನೋಡ್ಕೋತಾರೆ ಅನ್ನೋದು, ಅಲ್ಲಿಂದ ನಾಯಕಿ ಕೂಡ ಪ್ರೀತಿಯಲ್ಲಿ ಬೀಳೋದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಏಕ್‌ದಮ್ ಐಲವ್ ಯು ಎಂದ ರಾಕಿ

ಏಕ್‌ದಮ್ ಐಲವ್ ಯು ಎಂದ ರಾಕಿ

ಸೂಪರ್ ಹಿಟ್ KGF ಚಿತ್ರದಲ್ಲೂ ನಾಯಕಿ ರೀನಾಳನ್ನು ನೋಡಿದ ಕೂಡಲೇ ರಾಕಿಗೆ ಲವ್ವಾಗುತ್ತೆ. ಒಂದೇ ಕ್ಷಣದಲ್ಲಿ ಹಿಂದು ಮುಂದು ನೋಡದೇ "ಕಾಂಗ್ರಾಜುಲೇಷನ್" ಅಂತಾನೆ. ರೀನಾ ಯಾಕೆ ಅಂದ್ರೆ "ಐ ಲವ್ ಯು" ಎಂದುಬಿಡುತ್ತಾನೆ. ಸಣ್ಣ ಫೈಟ್ ಝಲಕ್. ನಂತರ ನಿಮ್ಮ ಅಕ್ಕನನ್ನು ಚೆನ್ನಾಗಿ ನೋಡ್ಕೊಳ್ರೋ ಎಂದು ರಾಕಿ ವಾರ್ನಿಂಗ್ ಕೊಡ್ತಾನೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾದಲ್ಲಿ ಮೂಡಿ ಬಂದ ವಿಭಿನ್ನ ಲವ್ ಪ್ರಪೋಸ್ ಸೀನ್ ಇದು. ರಾಕಿಗೆ ಫಸ್ಟ್ ಚಾಪ್ಟರ್‌ನಲ್ಲೇ ರೀನಾ ಮೇಲೆ ಲವ್ವಾಗುತ್ತೆ, ಆದರೆ ರೀನಾಗೆ ರಾಕಿ ಮೇಲೆ ಪ್ರೀತಿ ಹುಟ್ಟಲು ಸೆಕೆಂಡ್ ಚಾಪ್ಟರ್‌ವರೆಗೂ ಕಾಯಬೇಕು.

More from Filmibeat

English summary
Valentine's day Special: Super hit Love proposal scenes in Kannada Movies. Appu, Mungaru Male, KGF, Mr. and Mrs. Ramachari Movie Love proposal scenes. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X