»   » ಕಿಚ್ಚನಿಗೂ ಸಿಕ್ತು ಪ್ರೇಮಿಗಳ ದಿನಾಚರಣೆ ಗಿಫ್ಟ್

ಕಿಚ್ಚನಿಗೂ ಸಿಕ್ತು ಪ್ರೇಮಿಗಳ ದಿನಾಚರಣೆ ಗಿಫ್ಟ್

Posted By:
Subscribe to Filmibeat Kannada
ಕಿಚ್ಚನಿಗೂ ಸಿಕ್ತು ಪ್ರೇಮಿಗಳ ದಿನಾಚರಣೆ ಗಿಫ್ಟ್ | Filmibeat Kannada

ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನ ನಿವೇದನೆ ಮಾಡಲು ಇಂತದ್ದೇ ದಿನ ಬೇಕು ಅಂತೇನಿಲ್ಲ. ಪ್ರತಿ ದಿನ ಅವರಿಗಾಗಿ ಇರುವ ದಿನಗಳೇ. ಆದರೆ ಫೆಬ್ರವರಿ 14 ನೆಪ ಮಾತ್ರಕ್ಕೆ. ಇಡೀ ಜಗತ್ತೇ ಪ್ರೇಮಿಗಳ ದಿನವನ್ನ ಆಚರಣೆ ಮಾಡಿದ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗದ ಹ್ಯಾಂಡ್ ಸಮ್ ಜೋಡಿ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಕೂಡ ಪ್ರೇಮಿಗಳ ದಿನಾಚರಣೆಯನ್ನ ಸೆಲಬ್ರೆಟ್ ಮಾಡಿದ್ದಾರೆ.

ಸದಾ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಕಿಚ್ಚ ಸುದೀಪ್ ಇತ್ತೀಚಿನ ದಿನಗಳಲ್ಲಿ ಫ್ಯಾಮಿಲಿಗಾಗಿ ಸಮಯ ಕೊಡುತ್ತಿದ್ದಾರೆ. ಅಭಿನಯ, ಗಾಯನ, ನಿರ್ಮಾಣ, ನಿರೂಪಣೆ ಇದರ ಮಧ್ಯೆ ಕ್ರೀಡೆ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ತೊಡಗಿಕೊಂಡಿರುವ ಕಿಚ್ಚನಿಗಾಗಿ ಪತ್ನಿ ಪ್ರಿಯಾ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಧನುಷ್ ಚಿತ್ರದಲ್ಲಿ ಅಭಿನಯಿಸಲು ಕಿಚ್ಚನಿಗೆ ಆಹ್ವಾನ

ಹೇಗಿತ್ತು ಕಿಚ್ಚ ಹಾಗೂ ಮಡದಿ ಪ್ರಿಯಾ ಅವರ ವ್ಯಾಲೆಂಟೈನ್ಸ್ ಡೇ?. ಪ್ರಿಯಾ ಸುದೀಪ್ ಕೊಟ್ಟಿರುವ ಉಡುಗೊರೆ ಹೇಗಿದೆ? ಪ್ರೇಮಿಗಳ ದಿನದಂದು ಪತ್ನಿಗೆ ಥ್ಯಾಕ್ಸ್ ಹೇಳಿದ್ದೇಕೆ ಸುದೀಪ್. ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಮತ್ತೆ ಪ್ರೇಮಿಗಳಾದ ಸುದೀಪ್- ಪ್ರಿಯಾ

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರದ್ದು ಲವ್ ಮ್ಯಾರೆಜ್ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಮದುವೆ ಆಗಿ ಸಾಕಷ್ಟು ವರ್ಷಗಳು ಕಳೆದ ನಂತರ ಕಿಚ್ಚ ಹಾಗೂ ಪ್ರಿಯಾ ಪ್ರೇಮಿಗಳ ದಿನಾಚರಣೆಯನ್ನ ಆಚರಣೆ ಮಾಡಿದ್ದಾರೆ.

ಮನಸ್ಸಿಗೆ ಹತ್ತಿರವಾಗುವ ಉಡುಗೊರೆ

ಪ್ರಿಯಾ ಸುದೀಪ್ ಅವರು ಪ್ರೇಮಿಗಳ ದಿನಾಚರಣೆಗಾಗಿ ಕಿಚ್ಚನಿಗೆ ವಿಶೇಷ ಉಡುಗೊರೆಯನ್ನ ನೀಡಿದ್ದಾರೆ. ಸುದೀಪ್ ಕಾಫಿ ಪ್ರಿಯ. ಹಾಗಾಗಿ ಎರಡು ಕಾಫಿ ಕಪ್ ಅನ್ನು ಸುದೀಪ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ.

ರಾಜ-ರಾಣಿಯಂತಾದ ಜೋಡಿ

ಪ್ರಿಯಾ ಸುದೀಪ್ ಅವರು ನೀಡಿರುವ ಉಡುಗೊರೆಯ ಮೇಲೆ ಪ್ರೀತಿಯಿಂದ ಸಂದೇಶವನ್ನ ಬರೆಸಲಾಗಿದೆ. ಎರಡು ಕಪ್ ಮೇಲೆ ಸುದೀಪ್ ಹಾಗೂ ಪ್ರಿಯಾ ಎಂದು ಬರೆದಿದ್ದು ಮತ್ತೆರಡರಲ್ಲಿ 'ಕ್ವೀನ್ ಆಫ್ ಎವರಿಥಿಂಗ್' , 'ಕಿಂಗ್ ಆಫ್ ವಾಟ್ ಎವರ್ ಲೆಫ್ಟ್' ಎಂದು ಬರೆಯಲಾಗಿದೆ.

ಥ್ಯಾಂಕ್ಸ್ ಹೇಳಿದ ಕಿಚ್ಚ

ನಾಲ್ಕು ಕಾಫಿ ಕಪ್ ಗಳ ಪೋಟೋವನ್ನ ಟ್ವಿಟ್ ನಲ್ಲಿ ಕಿಚ್ಚನಿಗೆ ಟ್ಯಾಗ್ ಮಾಡಿ ಹಾಕಿದ್ದಾರೆ ಪ್ರಿಯಾ. ಅದರ ಹಿಂದಿನ ದಿನವೇ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಪ್ರೇರೇಪಿಸಿದ ಪ್ರಿಯಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಸುದೀಪ್.

English summary
valentine's day special Sudeep wife Priya has given a gift to sudeep Two coffee mugs have been written on the love quote, Priya Sudeep has posted a coffee mugs photos on Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada