ಬಾರ್ ನಲ್ಲಿ ಕುಡಿದು ಗಲಾಟೆ: ನಟಿ ಸಂಜನಾ ವಿರುದ್ಧ ದೂರು ನೀಡಿದ ಬಾಲಿವುಡ್ ನಿರ್ಮಾಪಕಿ

ಇಷ್ಟು ದಿನ ತಣ್ಣಗಿದ್ದ ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸ ವಿವಾದ ತಲೆ ಎತ್ತಿದೆ. ಹಲವು ವಿವಾದಗಳಿಂದ ಸದ್ದು ಮಾಡಿರುವ ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ವಿರುದ್ಧ ಈಗ ಹೊಸ ಆರೋಪ ಕೇಳಿ ಬಂದಿದೆ. ಬಾರ್ ವೊಂದರಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ ಸಂಜನಾ ವಿರುದ್ಧ ಬಾಲಿವುಡ್ ನಿರ್ಮಾಪಕಿ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕ್ರಿಸ್ಮಸ್ ಈವ್ ಸಂದರ್ಭದಲ್ಲಿ ಅಂದರೆ ಡಿಸೆಂಬರ್ 24ರ ರಾತ್ರಿ ನಟಿ ಸಂಜನಾ ಕೋಝಿ ಬಾರ್ ಗೆ ಭೇಟಿ ನೀಡಿದ್ದರು. ಬಾಲಿವುಡ್ ನಿರ್ಮಾಪಕಿಯಾದ ವಂದನಾ ಜೈನ್ ಕೂಡ ಅಲ್ಲೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಕಿರಿಕ್ ಆಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ನಂತರ ವಿಸ್ಕಿ ಬಾಟೆಲ್ ನಲ್ಲಿ ವಂದನಾಗೆ ನಟಿ ಸಂಜನಾ ಸರಿಯಾಗಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಯಿಂದ ಬೇಸತ್ತ ವಂದನಾ ಜೈನ್ ಕಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಸಂಜನಾ ಮತ್ತು ವಂದನಾ ಜೈನ್ ನಡುವೆ ಕಿತ್ತಾಟ ನಡೆದಿರುವುದು ನಿಜ, ಪಾರ್ಟಿ ನಡೆಯುವ ಸಂದರ್ಭದಲ್ಲಿ ಗಲಾಟೆಯಾಗಿದೆ ಎಂದು ಡಿಸಿಪಿ ಚೇತನ್ ಧೃಡಪಡಿಸಿದ್ದಾರೆ. ಜೊತೆಗೆ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ವಂದನಾ ಜೈನ್ ಮತ್ತು ಸಂಜನಾಗೆ ಸೂಚಿಸಿದ್ದಾರೆ.

Vandana Jain Filed Complaint Against Kannada Atres Sanjanana Galrani

ಬೆಂಗಳೂರು ಮೂಲದ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮುಂಬೈನಲ್ಲಿ ನೆಲೆಸಿದ್ದಾರೆ. ವಂದನಾಗೆ ಬೆಂಗಳೂರು ಅಂದರೆ ತುಂಬ ಇಷ್ಟವಂತೆ. ಹಾಗಾಗಿ ಆಗಾಗ ಬೆಂಗಳೂರಿಗೆ ಬರುತ್ತಿರುತ್ತಾರಂತೆ. ಬಾಲಿವುಡ್ ನಲ್ಲಿ ಬಲ್ವಿಂದರ್ ಸಿಂಗ್ ಫೇಮಸ್ ಹೋಗಯಾ ಸೇರಿದಂತೆ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Vandana Jain filed complaint against Kannada actres Sanjanana Galrani.
Read more about: sanjana ಸಂಜನಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X