»   » ಈ ಶುಕ್ರವಾರದ ಕೊಡುಗೆ ವಂದೇ ಮಾತರಂ

ಈ ಶುಕ್ರವಾರದ ಕೊಡುಗೆ ವಂದೇ ಮಾತರಂ

Posted By: Super
Subscribe to Filmibeat Kannada

ಜಯಶ್ರೀದೇವಿಯವರ ಮಹತ್ವಾಕಾಂಕ್ಷೆಯ ಚಿತ್ರ ವಂದೇಮಾತರಂ ಈ ಶುಕ್ರವಾರ ತೆರೆಕಾಣಲಿದೆ. ದೇಶದಲ್ಲಿ ಆತಂಕದ ಬೀಜ ಬಿತ್ತುವ ಉಗ್ರಗಾಮಿಗಳು, ಮಕ್ಕಳ ಮನಸ್ಸನ್ನು ಕೂಡಾ ಹೇಗೆ ಭ್ರಷ್ಟಗೊಳಿಸುತ್ತಾರೆ ಅನ್ನುವ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದಲ್ಲಿ ನೂರಾರು ನಟವಟಿಯರಿದ್ದಾರೆ. ಒಂದು ವರ್ಷದ ಹಿಂದೆ ಸೆಟ್ಟೇರಿದ್ದ ಈ ಚಿತ್ರ ಸುಮಾರು ಎಂಟು ಹಂತಗಳಲ್ಲಿ ಚಿತ್ರೀಕರಣ ನಡೆಸಿತ್ತು.

ನಿರ್ದೇಶಕ ಓಂ ಪ್ರಕಾಶ್‌ ವಿನಾ ಕಾರಣ ಚಿತ್ರೀಕರಣ ವಿಳಂಬ ಮಾಡುತ್ತಿದ್ದಾರೆ ಅನ್ನುವ ವಂದಂತಿಯೂ ಹರಡಿತ್ತು. ರಾಜ್‌ ಅವಪಹರಣದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ದೇವಿ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿದ್ದರು. ಆನಂತರ ಕಲಾವಿದರ ಡೇಟ್ಸ್‌ ಸಮಸ್ಯೆ ತಲೆದೋರಿ ಅವರನ್ನು ಸಮಾಧಾನ ಪಡಿಸುವುದಕ್ಕೆ ಇನ್ನೊಂದು ಚಿತ್ರವನ್ನು ಶುರುಮಾಡುವ ತಂತ್ರವನ್ನೂ ದೇವಿ ಅನುಸರಿಸಿದ್ದರು.

ಈ ಚಿತ್ರದ ಕೇಂದ್ರ ಪಾತ್ರ ವಿಜಯಶಾಂತಿ. ಎಂದಿನಂತೆ ಆಕೆ ಪೊಲೀಸ್‌ ಅಧಿಕಾರಿಣಿ. ಆಕೆಗೆ ನೆರವಾಗುವ ಇನ್ನೊಬ್ಬ ಅಧಿಕಾರಿಯ ಪಾತ್ರದಲ್ಲಿ ಅಂಬರೀಶ್‌ ಇದ್ದಾರೆ. ಜೊತೆಗೆ ವಿನೋದ್‌ರಾಜ್‌, ಗೋವಿಂದು, ಸುಮಂತ್‌ ಅಲ್ಲದೆ ತೆಲುಗು, ತಮಿಳಿನ ನಟನಟಿಯರೂ ಇದ್ದಾರೆ. ಚಿತ್ರದ ಬಜೆಟ್‌ ಎರಡೂವರೆ ಕೋಟಿ ದಾಟಿದೆ.

ದೇವಿ ಏಕಕಾಲದಲ್ಲಿ ನಿರ್ಮಿಸುತ್ತಿರುವ ಪಂಚಚಿತ್ರಗಳಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿರುವ ಮೊದಲ ಚಿತ್ರವಿದು. ಇದರ ಬೆನ್ನಿಗೇ ಶ್ರೀ ಮಂಜುನಾಥ, ಜಗಜ್ಜನನಿ, ಚಿತ್ರ ಹಾಗೂ ಹೆಸರಿಡದ ಚಿತ್ರಗಳೂ ಕ್ಯೂನಲ್ಲಿವೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ 2001ನೇ ವರ್ಷ ದೇವಿ ವರ್ಷ ಆಗಬಹುದು.

ಪ್ರದರ್ಶನ : ಬೆಂಗಳೂರಿನ- ಸಂತೋಷ್‌ (4 ಆಟ), ನವರಂಗ್‌, ಪ್ರಮೋದ್‌, ಉಮಾ, ಶಾಂತಿ, ಸಂಪಿಗೆ, ವೆಂಕಟೇಶ್ವರ, ಗೋವರ್ಧನ್‌, ಸಿದ್ಧೇಶ್ವ, ಬಾಲಾಜಿ, ಮಾರುತಿ(3 ಪ್ರದರ್ಶನ). ಪ್ರಸನ್ನ, ಕಾವೇರಿ, ಅಜಂತ, ನಂದ, ನಳಂದ, ವಿಜಯ್‌ (ಬೆಳಗಿನ ಪ್ರದರ್ಶನ).

ಮೈಸೂರು - ಸಂಗಮ್‌, ಶಾಂತಲಾ, ಸರಸ್ವತಿ, ಮಂಡ್ಯ- ಸಂಜಯ, ನಂದ, ಹಾಸನ- ಸಹ್ಯಾದ್ರಿ, ದಾವಣಗೆರೆ -ಪುಷ್ಪಾಂಜಲಿ, ತ್ರಿಶೂಲ್‌, ಚಿತ್ರದುರ್ಗ- ಬಸವೇಶ್ವರ, ಶಿವಮೊಗ್ಗ -ವಿನಾಯಕ, ಮಲ್ಲಿಕಾರ್ಜುನ, ಭದ್ರಾವತಿ -ವೆಂಕಟೇಶ್ವರ, ಚಿಕ್ಕಮಗಳೂರು- ನಾಗಲಕ್ಷ್ಮೀ, ಮಂಗಳೂರು- ಸುಚಿತ್ರ, ಹುಬ್ಬಳ್ಳಿ -ಶೃಂಗಾರ್‌, ಬಿಜಾಪುರ -ಅಲಂಕಾರ್‌, ಗದಗ್‌ -ಕೃಷ್ಣ, ಹೊಸಪೇಟೆ -ಲಕ್ಷ್ಮೀ, ಧಾರವಾಡ -ಪದ್ಮ, ವಿಜಯ್‌, ಬೆಳಗಾಂ -ಸಂತೋಷ್‌,ಪ್ರಕಾಶ್‌.

English summary
one more fighting film in kannada

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X